ಕಾಣಿಯೂರು: ಕುದ್ಮಾರು ದೇವರಗುಡ್ಡೆ ಶ್ರೀ ವೀರಾಂಜನೇಯ ಗೆಳೆಯರ ಬಳಗ ಸೇವಾ ಟ್ರಸ್ಟ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ನ.2ರಂದು ದೇವರಗುಡ್ಡೆ ಕ್ರೀಡಾಂಗಣದಲ್ಲಿ ನಡೆಯಲಿರುವ 7ನೇ ವರ್ಷದ ಕ್ರೀಡಾಕೂಟದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶೀಯ ಮೊಕ್ತೇಸರರು, ಅರ್ಚಕರಾದ ಜನೇಶ್ ಭಟ್ ಬರೆಪ್ಪಾಡಿ, ಶ್ರೀ ವೀರಾಂಜನೇಯಾ ಗೆಳೆಯರ ಬಳಗ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷ ಕೇಶವ ಗೌಡ ಅಮೈ, ಅಧ್ಯಕ್ಷ ಆನಂದ ಗೌಡ ಕೂಂಕ್ಯ, ಗೌರವ ಸಲಹೆಗಾರರಾದ ಶ್ರೀಧರ ಗೌಡ ಕೊಯಕ್ಕುಡೆ, ಉಪಾಧ್ಯಕ್ಷೆ ಮೋಹಿನಿ ಕೊಯಕ್ಕುಡೆ, ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ನಿರ್ಮಲ ಕೇಶವ ಗೌಡ ಅಮೈ, ಹಿರಿಯರಾದ ಗೋಪಾಲ ಸುವರ್ಣ ಕೂಂಕ್ಯ ಹಾಗೂ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.