ಪುತ್ತೂರು: ಕೌಡಿಚ್ಚಾರ್ನಲ್ಲಿ ಅ.11ರ ರಾತ್ರಿ ಅಂಗಡಿಯ ಬಳಿ ಗಲಾಟೆ ಮಾಡುತ್ತಿದ್ದವರನ್ನು ವಿಚಾರಿಸಿದ್ದಕ್ಕೆ ಹಲ್ಲೆ ನಡೆದ ಘಟನೆಗೆ ಸಂಬಂಧಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರವಣ್ ಕುಮಾರ್ ಎಂಬವರು ಹಲ್ಲೆಗೊಳಗಾದವರು. ‘ನಾನು ಅರಿಯಡ್ಕ ಗ್ರಾಮದ ಕೌಡಿಚ್ಚಾರ್ ನಲ್ಲಿರುವ ನವೀನ್ ಪಿ.ಜಿ.ರವರ ಜನರಲ್ ಸ್ಟೋರ್ ನಲ್ಲಿ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಹೋಗಿದ್ದಾಗ ಸಂಜನ್ ರೈ, ಪ್ರವೀಶ್ ನಾಯರ್, ರೇವಂತ್, ವಿನೀತ್ ರವರು ಅಂಗಡಿಯ ಮಾಲೀಕ ನವೀನ್ ಪಿ.ಜಿ.ರವರಲ್ಲಿ ಜಗಳ ಮಾಡುತ್ತಿರುವುದನ್ನು ನಾನು ಪ್ರಶ್ನಿಸಿದ್ದಕ್ಕೆ ಸಂಜನ್ ರೈ ಅವಾಚ್ಯವಾಗಿ ಬೈದು, ಖಾಲಿ ಸೋಡಾ ಬಾಟಿಯಿಂದ ತಲೆಗೆ ಬಲವಾಗಿ ಹಲ್ಲೆ ನಡೆಸಿದ್ದಲ್ಲದೆ ಸಂಜನ್ ರೈ ಮತ್ತಾತನ ಜೊತೆಗಿದ್ದವರು ಮುಖಕ್ಕೆ, ಕೈಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದಿದ್ದರು.ಈ ವೇಳೆ ನನ್ನ ಗೆಳೆಯರಾದ ಸಿಂಚನ್, ನವೀನ್ ಪಿ.ಜಿ.ರವರು ಆರೋಪಿಗಳು ಹಲ್ಲೆ ಮಾಡುವುದನ್ನು ತಡೆದಿದ್ದಾರೆ’ ಎಂದು ಶ್ರವಣ್ ಕುಮಾರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ಸಂಜನ್ ರೈ ಮತ್ತು ಪ್ರವೀಶ್ ನಾಯರ್ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.