ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಸಾರಥ್ಯದಲ್ಲಿ ಅ.20ರಂದು ನಡೆಯುವ ಅಶೋಕ ಜನಮನ ಕಾರ್ಯಕ್ರಮದ ಪ್ರಚಾರ ಕಾರ್ಯಕ್ರಮ ಸರ್ವೆ ಕಲ್ಪಣೆ ಸಮುದಾಯ ಭವನದಲ್ಲಿ ನಡೆಯಿತು.
ಪುಡಾ ಸದಸ್ಯ ನಿಹಾಲ್ ಪಿ ಶೆಟ್ಟಿ ಕಾರ್ಯಕ್ರಮದ ಮಾಹಿತಿ ನೀಡಿದರು. ಜಿಲ್ಲಾ ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ಶಿವನಾಥ ರೈ ಮೇಗಿನಗುತ್ತು ಮಾತನಾಡಿದರು. ಸರ್ವೆ ವಲಯ ಕಾಂಗ್ರೆಸ್ ಅಧ್ಯಕ್ಷ ಕಮಲೇಶ್ ಎಸ್. ವಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಗ್ರಾ.ಪಂ ಸದಸ್ಯರಾದ ಮಹಮ್ಮದ್ ಆಲಿ ನೇರೋಳ್ತಡ್ಕ, ವಿಜಯಾ ಕರ್ಮಿನಡ್ಕ, ಮಾಜಿ ಸದಸ್ಯರಾದ ಶರೀಫ್ ಎಸ್.ಎಂ, ರಾಮಚಂದ್ರ ಸೊರಕೆ, ಯತೀಶ್ ರೈ ಮೇಗಿನಗುತ್ತು, ಹಂಝ ಎಲಿಯ, ತಾ. ಪಂ. ಮಾಜಿ ಸದಸ್ಯೆ ಸುಮತಿ, ಮುಂಡೂರು ಸಿ. ಎ. ಬ್ಯಾಂಕ್ ನಿರ್ದೇಶಕರಾದ ಕೊರಗಪ್ಪ ಸೊರಕೆ , ಆನಂದ ಪೂಜಾರಿ, ಪಕ್ಷದ ಪ್ರಮುಖರಾದ ಗೀತಾ ಮರಿಯ, ಶಶಿಧರ್. ಎಸ್.ಡಿ, ಹಮೀದ್ ನೇರೋಳ್ತಡ್ಕ, ಅಝೀಝ್ ರೆಂಜಲಾಡಿ, ಚಂದ್ರಶೇಖರ ನೆಕ್ಕಿಲು, ಅಶ್ರಫ್ ಕೂಡುರಸ್ತೆ, ಆಸಿಫ್ ರೆಂಜಲಾಡಿ, ಅಶೋಕ ಸೊರಕೆ, ತಾಜು ರಫೀಕ್, ಝೈನುದ್ದೀನ್, ಇಸ್ಮಾಯಿಲ್ ಉಪಸ್ಥಿತರಿದ್ದರು. ಅಶೋಕ ಜನ- ಮನ ಪ್ರಚಾರ ಸಮಿತಿ ಸದಸ್ಯ ಸಿದ್ದೀಕ್ ಸುಲ್ತಾನ್ ವಂದಿಸಿದರು.