ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು, ಫ್ಯಾಷನ್ ಡಿಸೈನ್ ವಿಭಾಗ, “ಫಸೆರಾ” ಫ್ಯಾಷನ್ ಡಿಸೈನ್ ಅಸೋಸಿಯೇಷನ್ ಮತ್ತು ಐಕ್ಯೂಎಸಿ ಇವುಗಳ ಸಹಯೋಗದಲ್ಲಿ“STRUT’25 – Collection of Mismatch and Gothic” ಎಂಬ ಫ್ಯಾಷನ್ ಶೋವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡಿದ ADIVA Lifestyle ಸಂಸ್ಥೆಯ ಸಹ-ಸ್ಥಾಪಕಿ ವಚನ ಜಯರಾಮ್, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಫ್ಯಾಶನ್ ಅನ್ನೋದು ಮುಂಚೂಣಿಯಲ್ಲಿದೆ. ಅಂತಹ ಫ್ಯಾಷನ್ ಅನ್ನು ಕ್ರಿಯಾತ್ಮಕವಾಗಿ ಉಡುಗೆಯಲ್ಲಿ ಪ್ರದರ್ಶಿಸುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಹಾಗೆ ಯಾವುದೇ ಫ್ಯಾಷನ್ ಅನ್ನು ಹಿಂಬಾಲಿಸದೆ ತಮ್ಮದೇ ಆದ ಹೊಸ ಫ್ಯಾಷನ್ ನನ್ನು ತಮ್ಮದೇ ಶೈಲಿಯಲ್ಲಿ ರೂಪಿಸಿಕೊಳ್ಳುವಂತೆ ಫ್ಯಾಶನ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ, ಕಾಲೇಜಿನ ಅಧ್ಯಕ್ಷರಾದ ಜಯಂತ್ ನಡುಬೈಲು, ವಿದ್ಯಾರ್ಥಿಗಳ ಕ್ರಿಯಾತ್ಮಕ ಯೋಚನೆಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಹಕಾರಿಯಾಗುವುದು ಹಾಗೆ ಇಂತಹ ಕಾರ್ಯಕ್ರಮಗಳು ಇನ್ನು ಮುಂದೆ ಕೂಡ ಕಾಲೇಜಿನಲ್ಲಿ ನಡೆಸುವಂತೆ ಪ್ರೋತ್ಸಾಹಿಸಿದರು.

ವಿವಿಧ ಥೀಮ್‌ಗಳೊಂದಿಗೆ ವಿದ್ಯಾರ್ಥಿಗಳು ಸೃಜನಾತ್ಮಕವಾಗಿ ತಯಾರಿಸಿದ ಉಡುಪು ಸಂಗ್ರಹಗಳನ್ನು ರಾಂಪ್‌ವಾಕ್ ಮೂಲಕ ಪ್ರದರ್ಶಿಸಿದರು. ವಿಶೇಷವಾಗಿ Mismatch ಮತ್ತು Gothic ಶೈಲಿಗಳ ಸಂಗ್ರಹವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಈ ಫ್ಯಾಷನ್ ಶೋ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ತಂಡದ ಸಹಕಾರವನ್ನು ಉತ್ತೇಜಿಸುವ ಪ್ರಮುಖ ವೇದಿಕೆಯಾಯಿತು.
ಪ್ರಾಂಶುಪಾಲ ಸಂಪತ್ ಕೆ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ ಎ, ಫ್ಯಾಷನ್ Design ವಿಭಾಗ ಮುಖ್ಯಸ್ಥೆ ಅನುಷಾ ಪ್ರವೀಣ್ , IQAC ಸಂಯೋಜಕ ರಶ್ಮಿ.ಕೆ , ಫಸೇರಾ ಫ್ಯಾಷನ್ Design Association ಕಾರ್ಡಿನೇಟರ್ ಧನ್ಯಶ್ರೀ, ಫಸೆರಾ ಅಸೋಸಿಯೇಷನ್ President ಜೆನಿಫರ್ ಡಿಸೋಜಾ ಇವರು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯ ನಿರುಪಣೆಯನ್ನು II BSC ಫ್ಯಾಷನ್ design ವಿಧ್ಯಾರ್ಥಿನಿ ಮೋಕ್ಷ ನಿರ್ವಹಿಸಿದರು.
ಕಾರ್ಯಕ್ರಮವು Facera Fashion Association, IQAC ಸಮನ್ವಯಕರು, ಕಾಲೇಜಿನ ಪ್ರಾಂಶುಪಾಲರು, ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳು ಅವರ ಸಕ್ರಿಯ ಸಹಕಾರದೊಂದಿಗೆ ಯಶಸ್ವಿಯಾಗಿ ನೆರವೇರಿತು.