ವಿಟ್ಲ: ಅಪ್ರಾಪ್ತ ಬಾಲಕ ದ್ವಿಚಕ್ರ ವಾಹನ ಅಪಘಾತ ಮಾಡಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪ್ರಾಪ್ತ ಬಾಲಕನಿಗೆ ವಾಹನ ನೀಡಿದ ಅದರ ಮಾಲಕನಿಗೆ ಬಂಟ್ವಾಳ ನ್ಯಾಯಾಲಯ 32 ಸಾವಿರ ರೂ.ದಂಡ ವಿಧಿಸಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಪುತ್ತೂರು ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಇನ್ನೊಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಅಪಘಾತ ನಡೆದಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂದಿಸಿದಂತೆ ಅಪ್ರಾಪ್ತ ಪ್ರಾಯದ ಬಾಲಕ KA-19-S-9666ನೇ ನೋಂದಣಿ ನಂಬ್ರದ ಮೋಟಾರ್ ಸೈಕಲನ್ನು ಚಲಾಯಿಸಿ ಅಪಾಘಾತ ಪಡಿಸಿದ ಬಗ್ಗೆ ಬಂಟ್ವಾಳ ಎಸಿ ಜೆ ಮತ್ತು ಜೆ ಎಂ ಎಪ್ ಸಿ ನ್ಯಾಯಾಲಯ ವಿಚಾರಣೆ ನಡೆಸಿ ಸೆ.೨೬ರಂದು ಆರೋಪಿ ವಾಹನದ ಮಾಲಕರಾದ ಮಹಮ್ಮದ್ ಅನೀಸ್ ರವರಿಗೆ 32000 ರೂ, ದಂಡ ವಿಧಿಸಿ ತಿರ್ಪು ನೀಡಿದೆ.