ಪುತ್ತೂರು: ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ದ. ಕ. ಜಿಲ್ಲೆ ಇದರ ವತಿಯಿಂದ ಅ.19ರಂದು ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ಜರಗಿದ 22ನೇ ದ. ಕ. ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಪೆರಾಬೆ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿದ್ದು ಪ್ರಸ್ತುತ ದ. ಕ. ಜಿಲ್ಲಾ ಪಂಚಾಯತ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಸ್ಮಾನ್ ಬಿ. ಅವರು 50 ವಯೋಮಾನದವರ 100 ಮೀಟರ್ ಓಟದಲ್ಲಿ ಪ್ರಥಮ ಮತ್ತು 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಡಿಸೆಂಬರ್ 20 ಮತ್ತು 21ರಂದು ಕೋಲಾರದಲ್ಲಿ ನಡೆಯುವ ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಮೂಲತಃ 34 ನೆಕ್ಕಿಲಾಡಿ ಗ್ರಾಮದ ಆದರ್ಶನಗರ ನಿವಾಸಿಯಾಗಿರುವ ಇವರು ಪ್ರಸ್ತುತ ಪೆರ್ನೆ ಸಮೀಪದ ಸತ್ತಿಕಲ್ಲಿನಲ್ಲಿ ವಾಸ್ತವ್ಯವಿದ್ದಾರೆ. ಉಸ್ಮಾನ್ ಅವರು ಸಿತಾರ ಆದರ್ಶನಗರ ಮತ್ತು ಪ್ರಿಯಾ ಉಬಾರ್ ಕ್ರಿಕೆಟ್ ತಂಡದ ಸ್ಥಾಪಕ ಸದಸ್ಯರಾಗಿದ್ದಾರೆ.