ಬೆದ್ರಾಳ : ಹದಗೆಟ್ಟ ರಸ್ತೆ : ಶೀಘ್ರ ದುರಸ್ಥಿಗೆ ಆಗ್ರಹ

0

ಪುತ್ತೂರು: ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರದ ಸಮೀಪ ರಸ್ತೆ ಹದಗೆಟ್ಟ ಹಿನ್ನಲೆ ಪ್ರಯಾಣಿಕರು ಸಂಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರದ ಸಮೀಪದ ಈ ರಸ್ತೆ ದರ್ಬೆ-ಸುಬ್ರಹ್ಮಣ್ಯ ರಸ್ತೆ ಉಪ್ಪಿನಂಗಡಿ ರಸ್ತೆಯ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಈ ರಸ್ತೆಯಲ್ಲಿ ದಿನನಿತ್ಯ ಹಲವಾರು ವಾಹನಗಳು ಓಡಾಟ ನಡೆಸುತ್ತಿದ್ದು, ರಸ್ತೆ ತೀರಾ ಹದಗೆಟ್ಟು ಹೊಂಡಗಳು ನಿರ್ಮಾಣವಾಗಿರುವ ಹಿನ್ನಲೆ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮಕೈಗೊಂಡು ರಸ್ತೆ ದುರಸ್ಥಿ ನಡೆಸುವಂತೆ ನಂದಿಕೇಶ್ವರ ಭಜನಾ ಮಂಡಳಿಯಿಂದ ನಗರ ಸಭೆಗೆ ಮನವಿ ಸಲ್ಲಿಸಲಾಗಿದೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here