ಪುತ್ತೂರು: ಅಶೋಕ ಜನಮನ ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿದ ಜನರು ಬಂದಿದ್ದಾರೆ. ಈ ಸಂದರ್ಭ ಗಾಳಿ ಮಳೆಯೂ ಬಂದಿದೆ. ಆ ಸಂದರ್ಭದಲ್ಲಿ ಕೆಲವೊಂದು ವ್ಯತ್ಯಾಸ ಆಗಿದೆ. ಮನಸ್ಸಿಗೆ ನೋವಾಗಿದ್ದರೆ, ಬೇಸರ ಆಗಿದ್ದರೆ ಕ್ಷಮಿಸಿ, ಅದೇ ರೀತಿ ನೂಕುನುಗ್ಗಲಿನಿಂದ ತೊಂದರೆಗೊಳಗಾದವರು,ಅಶಕ್ತರು, ಹಿರಿಯರಿಗೆ ತೊಂದರೆ ಆಗಿದ್ದರೆ ಕ್ಷಮಿಸಿ, ನನಗೆ ನೋವಿದೆ. ಕೆಲವೊಂದು ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಬಂದೋಬಸ್ತ್‌ನಲ್ಲಿ ನಾವು ಅವರಿಗೆ ಸಹಕಾರ ಕೊಡಬೇಕಾಗಿದೆ. ವಸ್ತುಗಳನ್ನು ವಿತರಿಸಲು ನಾವು ಮೊದಲು ಮಾಡಿಟ್ಟಿದ್ದ ಕೌಂಟರ್ ಅನ್ನು ಪೊಲೀಸರು ಬಂದು ಬೇರೆ ಕಡೆ ಸ್ಥಳಾಂತರಿಸಿದ್ದರಿಂದ ಅಲ್ಲಿ ತೊಂದರೆ ಆಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.