ಪುತ್ತೂರು: ಚಿಕ್ಕ ಮುಡ್ನೂರು ಗ್ರಾಮದ ಬೆದ್ರಾಳ ನೆಕ್ಕರೆ ನಿವಾಸಿ ದಯಾನಂದ ಕುಲಾಲ್ ಎಂಬವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದ್ದು,ಶಾಸಕ ಅಶೋಕ್ ರೈ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ತಿಳಿಸಿ ಸರಕಾರದಿಂದ ಸಿಗುವ ಪರಿಹಾರವನ್ನು ತಕ್ಷಣ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭ ಪಕ್ಷದ ಹಿರಿಯ ಮುಖಂಡರಾದ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಕೇಶವ ಬೆದ್ರಾಳ, ನವೀನ್ ನಾಯ್ಕ್ ಮತ್ತಿತರರು ಇದ್ದರು.