ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ,ವಾಣಿಜ್ಯ ಮತ್ತು ವಿಜ್ಞಾನ (ಸ್ವಾಯತ್ತ) ಕಾಲೇಜು ಮಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಏಕೈಕ ಪದವಿ ಕಾಲೇಜಾಗಿ, Google Developer Group On Campus (GDGoC) ಆಯೋಜಿಸಿದ್ದ Cloud Campaign ಕಾರ್ಯಕ್ರಮದಲ್ಲಿ ಭಾರತದ ಟಾಪ್ 20 ಕಾಲೇಜುಗಳಲ್ಲಿ ಸ್ಥಾನ ಪಡೆದಿದೆ.
GDGoC ಎಂದರೆ ಏನು?
Google Developer Group On Campus (GDGoC) ಎಂಬುದು Google Developers ನ ಆಶ್ರಯದಲ್ಲಿ ನಡೆಯುವ ಜಾಗತಿಕ ವಿದ್ಯಾರ್ಥಿ ವೇದಿಕೆ ಆಗಿದ್ದು, ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಕಲಿಕೆ, ಸಹಕಾರ ಮತ್ತು ಹೊಸ ಯೋಜನೆಗಳ ನಿರ್ಮಾಣಕ್ಕೆ ಅವಕಾಶ ನೀಡುತ್ತದೆ.
Cloud Campaign ಇದರ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದು ಆಗಿದ್ದು, ವಿದ್ಯಾರ್ಥಿಗಳು Google Cloud Technology ಕುರಿತು ತರಬೇತಿ ಪಡೆದು, ಪ್ರಾಜೆಕ್ಟುಗಳ ಮೂಲಕ ತಮ್ಮ ಕೌಶಲ್ಯ ಪ್ರದರ್ಶಿಸುತ್ತಾರೆ.

ವಿವೇಕಾನಂದ ಕಾಲೇಜಿನ ಸಾಧನೆ
ಕಾಲೇಜಿನ GDGoC ತಂಡವು, ತೃತೀಯ ಬಿಸಿಎ ವಿದ್ಯಾರ್ಥಿ ಸಚಿನ್ ಉಪ್ಪಾರ್ಣ ಅವರ ನೇತೃತ್ವದಲ್ಲಿ, ತಂತ್ರಜ್ಞಾನ ಕಲಿಕೆ ಮತ್ತು ಕ್ಲೌಡ್ ಕ್ಯಾಂಪೈನ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಈ ಯಶಸ್ಸು ಕಾಲೇಜಿನ ಆಧುನಿಕ ಸೌಲಭ್ಯಗಳು, ಲ್ಯಾಬ್ ಸೌಕರ್ಯಗಳು, ಹಾಗೂ ಅಧ್ಯಾಪಕರ ಮಾರ್ಗದರ್ಶನದಿಂದ ಸಾಧ್ಯವಾಗಿದೆ. ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕರು ಹಾಗೂ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಪಿ. ಅವರ ಪ್ರೋತ್ಸಾಹದಿಂದ ವಿದ್ಯಾರ್ಥಿಗಳು ನಿರಂತರವಾಗಿ ಹೊಸ ತಂತ್ರಜ್ಞಾನಗಳನ್ನು ಅರಿತು ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.
ಅಭಿನಂದನೆಗಳು
ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು , ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಈ ಸಾಧನೆಗೆ ಪ್ರಶಂಸೆ ಸಲ್ಲಿಸಿದ್ದಾರೆ.
“ಈ ಸಾಧನೆ ನಮ್ಮ ವಿದ್ಯಾರ್ಥಿಗಳ ತಂತ್ರಜ್ಞಾನ ಆಸಕ್ತಿ, ಕಾಲೇಜಿನ ಮೂಲಸೌಕರ್ಯ, ಮತ್ತು ಅಧ್ಯಾಪಕರ ಮಾರ್ಗದರ್ಶನದ ಫಲವಾಗಿದೆ. Google Developers ವತಿಯಿಂದ ದೊರೆತ ಈ ಮಾನ್ಯತೆ, ನಮ್ಮ ಸಂಸ್ಥೆಯ ನವೀನತೆ ಮತ್ತು ಗುಣಮಟ್ಟದ ಶಿಕ್ಷಣದ ಸಾಕ್ಷಿಯಾಗಿದೆ.”
ಮುರಳಿಕೃಷ್ಣ ಕೆ.ಎನ್
ಸಂಚಾಲಕರು
ವಿವೇಕಾನಂದ ಕಾಲೇಜು ಪುತ್ತೂರು