ಕೆದಿಕಂಡೆಗುತ್ತುವಿನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಕಾರ್ಯಕ್ರಮ – ಕಾಲಾವಧಿ ನೇಮೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಕೋಡಿಂಬಾಡಿ ಗ್ರಾಮದ ಕೆದಿಕಂಡೆಗುತ್ತುವಿನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ನಾಗದೇವರು ಮತ್ತು ಧರ್ಮದೈವಗಳಿಗೆ ತಂಬಿಲ, ಮನೆ ತುಂಬಿಸುವುದು, ಗುರು ಹಿರಿಯರ ಆರಾಧನೆ ಮತ್ತು ಪುದ್ವಾರ್ ಕಾರ್ಯಕ್ರಮಗಳು ಅನಾದಿ ಕಾಲದ ಪದ್ಧತಿಯಂತೆ ನಡೆಯಿತು.


ಈ ಸಂದರ್ಭದಲ್ಲಿ ಡಿಸೆಂಬರ್ ತಿಂಗಳಲ್ಲಿ ಜರಗಲಿರುವ ಕಾಲಾವಧಿ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.


ಪುರೋಹಿತರಾದ ಪ್ರಶಾಂತ್ ಕಲ್ಲೂರಾಯ ಸಂಪ್ಯ, ಕೆದಿಕಂಡೆಗುತ್ತುವಿನ ಯಜಮಾನ ಜಯಂತ ಶೆಟ್ಟಿ, ಸುಬ್ಬಣ್ಣ ರೈ ಬೆಳ್ಳಾರೆ, ನಾರಾಯಣ ಶೆಟ್ಟಿ ಬಟ್ಲಡ್ಕ, ತೋಯಜಾಕ್ಷ ಶೆಟ್ಟಿ ಕಳೆಂಜ ಸೇರಿದಂತೆ ಕುಟುಂಬಸ್ಥರು, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here