ಪುತ್ತೂರು: ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಗ್ರಾಹಕರು ತಮ್ಮ ಆಭರಣ ಯೋಜನೆಗಳನ್ನು ನಿರ್ವಹಿಸಲು, ಆರ್ಡರ್ ಸ್ಥಿತಿಯನ್ನು ವೀಕ್ಷಿಸಲು,ಲೋಹದ ದರಗಳನ್ನು ಪರಿಶೀಲಿಸಲು ಮತ್ತು ಬ್ಯಾಲೆನ್ಸ್ ವಿವರಗಳ ಮಾಹಿತಿಗಾಗಿ ಗ್ರಾಹಕರ ಸಮ್ಮುಖದಲ್ಲೇ ‘ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್” ಶೀರ್ಷಿಕೆಯ ಹೊಸ ಅಪ್ಲಿಕೇಶನ್ನನ್ನು ಬಿಡುಗಡೆ ಮಾಡಲಾಯಿತು.
ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಹಾಗೂ ಆ್ಯಪ್ ಸ್ಟೋರ್ನನಲ್ಲಿ ಲಭ್ಯವಿದ್ದು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಈ ಆ್ಯಪ್ನಲ್ಲಿ ಗ್ರಾಹಕರಿಗೆ ದಿನನಿತ್ಯದ ಚಿನ್ನದ ದರ ಲಭ್ಯವಿದ್ದು, ಗ್ರಾಹಕರ ವಿವರ,ಡಿಜಿಟಲ್ ಪಾಸ್ಬುಕ್ ವಿವರ,ಆರ್ಡರ್ ವಿವರಗಳು, ಅಲ್ಲದೆ ಗ್ರಾಹಕರು ಪಾವತಿಸಿರುವ ಮೊತ್ತದ ವಿವರಗಳನ್ನು ಸಹ ಪರಿಶೀಲಿಸಬಹುದು.ಯಾವುದೇ ಪಾವತಿ ಶುಲ್ಕವನ್ನು ಬರಿಸದೇ ಗ್ರಾಹಕರು ಸ್ಟೀಮ್ ಪೇಮೆಂಟ್ ಮಾಡಬಹುದು.ಈ ಆ್ಯಪ್ ಮುಖಾಂತರ ಮನೆಯಲ್ಲೇ ಕುಳಿತುಕೊಂಡು ಪೇಮೆಂಟ್ ಮಾಡಿ ರಶೀದಿ ಪಡೆಯಬಹುದು.
ಈ ಅಪ್ಲಿಕೇಶನ್ ಸಮಯದ ಅಭಾವವಿರುವವರಿಗೆ ಇದು ತುಂಬಾ ಅನುಕೂಲಕರವಾಗಿದೆ.ಈ ಆ್ಯಪ್ ಮೂಲಕ ಸಮಾಜಿಕ ಜಾಲತಾಣಗಳನ್ನು ಸಂಪರ್ಕಿಸಿ ನಮ್ಮ ಆಭರಣಗಳ ಬಗೆಗಿನ ಹೊಸ ಅಪ್ಡೇಟ್ಸ್ಗಳ ಮಾಹಿತಿಗಳನ್ನು ತಿಳಿದುಕೊಳ್ಳಬಹುದು. 24 ಕ್ಯಾರೆಟ್,22ಕ್ಯಾರೆಟ್ ಚಿನ್ನದ ಹಾಗೂ ಬೆಳ್ಳಿಯ ದಿನನಿತ್ಯದ ಬೆಲೆಗಳನ್ನು ವೀಕ್ಷಿಸಬಹುದು. ಹೂಡಿಕೆಯ ಚಿನ್ನದ ಬೆಲೆ ಹಾಗೂ ತೂಕ ಮತ್ತು ಬೆಲೆಯ ವಿವರಗಳನ್ನು ದಿನಾಂಕ ಸಹಿತ ಎಲ್ಲಾ ಸವಿವರಗಳನ್ನು ಪಾರದರ್ಶಕತೆಯಿಂದ ತಿಳಿದುಕೊಳ್ಳಬಹುದು. ಶಂಕರ್ ಗ್ರೂಪ್ ಆಫ್ ಕಂಪೆನಿಯ ಚೇರ್ ಮ್ಯಾನ್ ಸತ್ಯ ಶಂಕರ್ ಈ ಯೋಜನೆಗೆ ಚಾಲನೆ ನೀಡಿದರು.
ಶಂಕರ್ ಗ್ರೂಪ್ ಆಫ್ ಕಂಪೆನಿಯ ಇ.ಡಿ ರಂಜಿತ ಶಂಕರ್, ಶಂಕರ್ ಗ್ರೂಪ್ ಆಫ್ ಕಂಪೆನಿಯ ಡೈರೆಕ್ಟರ್ ಆಗಿರುವ ಮನಸ್ವಿತ್, ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಮುಖ್ಯಸ್ಥರಾದ ಬಲರಾಮ ಆಚಾರ್ಯ, ರಾಜೇಶ್ವರೀ ಬಲರಾಮ ಆಚಾರ್ಯ.ಲಕ್ಷ್ಮೀಕಾಂತ್ ಬಿ.ಆಚಾರ್ಯ. ವೇದ ಲಕ್ಷ್ಮೀಕಾಂತ್, ಸುದನ್ವ ಬಿ. ಆಚಾರ್ಯ, ಅರುಂದತಿ ಆಚಾರ್ಯ, ಶ್ರೀರಾಮ್ ಆಚಾರ್ಯ,ರಕ್ಷಿತ್ ರಾವ್ ಮತ್ತು ನರೇಶ್, ಶೋರೂಂ ಮ್ಯಾನೇಜರ್ ಶೇಖರ್ ಹಾಗೂ ಪುರಂದರ, ಮಾರ್ಕೆಟಿಂಗ್ ಮ್ಯಾನೇಜರ್ ಕೀರ್ತನ್ ಹಾಗೂ ಸಿಬ್ಬಂದಿಯವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
