ಪುತ್ತೂರು: ಕೋಡಿಂಬಾಡಿ ಗ್ರಾಮದ ಕೆದಿಕಂಡೆಗುತ್ತುವಿನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ನಾಗದೇವರು ಮತ್ತು ಧರ್ಮದೈವಗಳಿಗೆ ತಂಬಿಲ, ಮನೆ ತುಂಬಿಸುವುದು, ಗುರು ಹಿರಿಯರ ಆರಾಧನೆ ಮತ್ತು ಪುದ್ವಾರ್ ಕಾರ್ಯಕ್ರಮಗಳು ಅನಾದಿ ಕಾಲದ ಪದ್ಧತಿಯಂತೆ ನಡೆಯಿತು.

ಈ ಸಂದರ್ಭದಲ್ಲಿ ಡಿಸೆಂಬರ್ ತಿಂಗಳಲ್ಲಿ ಜರಗಲಿರುವ ಕಾಲಾವಧಿ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಪುರೋಹಿತರಾದ ಪ್ರಶಾಂತ್ ಕಲ್ಲೂರಾಯ ಸಂಪ್ಯ, ಕೆದಿಕಂಡೆಗುತ್ತುವಿನ ಯಜಮಾನ ಜಯಂತ ಶೆಟ್ಟಿ, ಸುಬ್ಬಣ್ಣ ರೈ ಬೆಳ್ಳಾರೆ, ನಾರಾಯಣ ಶೆಟ್ಟಿ ಬಟ್ಲಡ್ಕ, ತೋಯಜಾಕ್ಷ ಶೆಟ್ಟಿ ಕಳೆಂಜ ಸೇರಿದಂತೆ ಕುಟುಂಬಸ್ಥರು, ಉಪಸ್ಥಿತರಿದ್ದರು.