






ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪೂರ್ಣಾನಂದ ಸೇವಾ ಪ್ರತಿಷ್ಠಾನ, ಶ್ರೀಗುರು ಪೂರ್ಣಾನಂದ ಭಜನಾ ಮಂದಿರ ಪುರುಷರಕಟ್ಟೆ, ದ.ಕ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇವುಗಳ ಸಂಯುಕ್ತ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಷಣಾ ಶಿಬಿರವು ಅ.26ರಂದು ಪುರುಷರಕಟ್ಟೆಯಲ್ಲಿರುವ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರೈತ ಸಭಾಂಗಣದಲ್ಲಿ ನಡೆಯಲಿದೆ.


ನರಿಮೊಗರು ಗ್ರಾಮ ಪಂಚಾಯತ್, ಪ್ರಾಥಮಿಕ ಆರೋಗ್ಯ ಕೇಂದ್ರ ಸರ್ವೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆಮ್ಮಿಂಜೆ ವಲಯ, ಶ್ರೀದುರ್ಗಾ ಸಂಜೀವಿನ ಒಕ್ಕೂಟ ನರಿಮೊಗರು, ನರಿಮೊಗರು ಗ್ರಾ.ಪಂ ವ್ಯಾಪ್ತಿಯ ಹಾಲು ಉತ್ಪಾದರಕ ಸಹಕಾರ ಸಂಘಗಳು, ಅಂಗನವಾಡಿ ಕೇಂದ್ರಗಳು, ಒಡಿಯೂರು ಗ್ರಾಮ ವಿಕಾಸ ಯೋಜನೆ ಘಟ ಸಮಿತಿ, ಯುವಕ ಮಂಡಲ ನರಿಮೊಗರು, ವಿಕ್ರಂ ಯುವಕ ಮಂಡಲ ಶಾಂತಿಗೋಡು, ನೇತಾಜಿ ಯುವಕ ಮಂಡಲ ಕೂಡುರಸ್ತೆ, ಶ್ರೀವಿಷ್ಣು ಯುವಕ ಮಂಡಲ ಆನಡ್ಕ, ಅರಿವು ಕೇಂದ್ರ ನರಿಮೊಗರು, ನವಶಕ್ತಿ ಸ್ಪೋರ್ಟ್&ಆರ್ಟ್ಸ್ ಕ್ಲಬ್ ಕಲ್ಕಾರ್ ಮುಂಡೋಡಿ, ಶ್ರೀ ಮಹಾವಿಷ್ಣು ಸೇವಾ ಪ್ರತಿಷ್ಠಾನ ಆನಾಜೆ ವೀರಮಂಗಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪುರುಷರಕಟ್ಟೆ, ಫ್ರೆಂಡ್ಸ್ ಮಣಿಯ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್, ಬಿಎಂಎಸ್ ಆಟೋ ರಿಕ್ಷಾ ಚಾಲಕ ಮ್ಹಾಲಕರ ಸಂಘ ಪುರುಷರಕಟ್ಟೆ, ಶ್ರೀಶಾರದಾಂಬ ಭಜನಾ ಮಂದಿರ ಸೇರಾಜೆ, ಬಜಪ್ಪಳ ಗಣಪತಿ ಶೆಣೈ ಅಭಿಮಾನಿ ಬಳಗ ನರಿಮೊಗರು ಹಾಗೂ ಟ್ರೈ ಬ್ರೇಕರ್ಸ್ ಯುವಕ ವೃಂದ ಪುರುಷರಕಟ್ಟೆ ಇವುಗಳ ಸಹಯೋಗದಲ್ಲಿ ನಡೆಯುವ ಶಿಬಿರದಲ್ಲಿ ಸಾಮಾನ್ಯ ರೋಗ, ಎಲುಬು ಮತ್ತು ಕೀಲು ರೋಗ, ಕಿವಿ, ಮೂಗು ಮತ್ತು ಗಂಟಲು, ಕಣ್ಣು, ಹೃದ್ರೋಗ, ಸ್ತ್ರೀರೋಗ ವಿಭಾಗ, ಬಿ.ಪಿ., ಮಧುಮೇಹ ತಪಾಸಣೆ ನಡೆಯಲಿದೆ. ವೈದ್ಯರು ಸಲಹೆ ನೀಡಿದಲ್ಲಿ ಉಚಿತ ಇಸಿಜಿ., ರಕ್ತದಾನ ಹಾಗೂ ಇತರ ವೈದ್ಯಕೀಯ ಸೇವೆಗಳು ಲಭ್ಯವಿದೆ. ಉಚಿತ ಔಷಧಿ ವಿತರಣೆ ಮತ್ತು ರಿಯಾಯಿತಿ ದರದಲ್ಲಿ ಕನ್ನಡ ವಿತರಿಸಲಾಗುವುದು. ಆಯಾ ವಿಭಾಗಳಲ್ಲಿ ನುರಿತ ತಜ್ಞ ವೈದ್ಯರು ಆಗಮಿಸಿ, ಚಿಕಿತ್ಸೆ ನೀಡಲಿದ್ದಾರೆ. ಶಿಬಿರವು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಘಟಕರು ತಿಳಿಸಿದ್ದಾರೆ.















