ಪುತ್ತೂರು: ನೀರಾವರಿ ಪಂಪು ಸೆಟ್ಟುಗಳು ಹಾಗೂ ಪೈಪ್ ಗಳ ಮಾರಾಟ ಹಾಗೂ ಸೇವೆಗಳನ್ನೊಳಗೊಂಡ ಶ್ರೀನಿಧಿ ಆಟೋಮೇಷನ್ಸ್ ನ ಸಹ ಸಂಸ್ಥೆಯಾದ ಪಂಪು ಹೌಸ್ ಅ.24ರಂದು ಪುತ್ತೂರು ಬೈಪಾಸ್ ರಸ್ತೆಯ ಉರ್ಲಾಂಡಿ ಹರ್ಷಿತಾ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.

ಬೆಳಿಗ್ಗೆ ಪುಣಚ ನಾರಾಯಣ ಬನ್ನಿಂತಾಯರವರ ಪೂಜಾ ಕಾರ್ಯಕ್ರಮದೊಂದಿಗೆ ಮಹಾಗಣಪತಿ ಹೋಮ ಲಕ್ಷ್ಮೀ ಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಲಕರ ತಂದೆ ಶಿವಪ್ಪ ಪೂಜಾರಿ ಬೈಲುಪದವು, ತಾಯಿ ಶಾರದಾ ಶಿವಪ್ಪ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಶೆಡ್ಡೆ ಪೆಟ್ರೋಲಿಯಂನ ಅರುಣ್ ಕುಮಾರ್ ಶೆಡ್ಡೆ, ತಾ.ಪಂ ಮಾಜಿ ಸದಸ್ಯ ಉಮೇಶ್ ಶೆಣೈ, ಪುರಸಭೆ ಮಾಜಿ ಅಧ್ಯಕ್ಷ ಲೋಕೇಶ್ ಹೆಗ್ಡೆ, ಹರ್ಷಿತಾ ಕಾಂಪ್ಲೆಕ್ಸ್ ನ ಮಾಲಕ ಉಮಾಕಾಂತ್ ಹೆಗ್ಡೆ ಸೇರಿದಂತೆ ಹಲವಾರು ಮಿತ್ರರು ಹಿತೈಷಿಗಳು, ಕುಟುಂಬಸ್ಥರು, ಬಂಧುಗಳು ಆಗಮಿಸಿ ಶುಭ ಹಾರೈಸಿದರು.ಮಾಲಕರ ಪತ್ನಿ ರಕ್ಷಾ,ಸಹೋದರಿ ಶ್ರೀಕಲ್ಪಾ, ಭಾವ ಅಶ್ವಿನ್, ಪುತ್ರ ಅಥರ್ವಾ, ಮಾವ ನಾರಾಯಣ ಪೂಜಾರಿ ನೀರಕಟ್ಟೆ, ಅತ್ತೆ ಮಂಜುಳಾ ನಾರಾಯಣ ಪೂಜಾರಿ ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕರಾದ ಶ್ರೀನಿಧಿ ಪಿ.ಎಸ್. ಬೈಲುಪದವು ಪುಣಚ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿ, ನಮ್ಮಲ್ಲಿ ಆಯ್ದ ಕಂಪೆನಿಯ ಉತ್ತಮ ಗುಣ ಮಟ್ಟದ ನೀರಾವರಿ ಪಂಪು ಸೆಟ್ಟುಗಳು, ಸೋಲಾರ್ ಪಂಪುಗಳು ಹಾಗೂ ಪೈಪ್’ಗಳು ಮಾರಾಟ ಹಾಗೂ ಸೇವೆಯಲ್ಲಿ ಲಭ್ಯವಿದ್ದು, ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಂಡು ನಮ್ಮೊಂದಿಗೆ ಸಹಕರಿಸುವಂತೆ ಕೋರಿದರು.