ಪುತ್ತೂರು: ಮರಾಟಿ ಸಮಾಜ ಸೇವಾ ಸಂಘ ನರಿಮೊಗರು ಇದರ ವತಿಯಿಂದ ಪ್ರತಿ 5 ವರ್ಷಕೊಮ್ಮೆ ಹಮ್ಮಿಕೊಳ್ಳುವ ಶ್ರೀದೇವಿ ಮಹಾಮ್ಮಾಯಿ ಅಮ್ಮನವರ ಗೊಂದೊಳು ಪೂಜೆಯನ್ನು ಪ್ರಸ್ತುತ ವರ್ಷ ನ.21ರಂದು ಶುಕ್ರವಾರ ಸಂಜೆ ಹಮ್ಮಿಕೊಳುವುದೆಂದು ನಿರ್ಣಯಿಸಲಾಗಿದೆ.
ಸದ್ರಿ ಪೂಜೆಯ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ನಡೆದ ಸಂಘದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕರುಣಾಕರ ನಾಯ್ಕ ಪಾಂಗ್ಲಾಯಿರವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಕೋಶಾಧಿಕಾರಿ ಈಶ್ವರ ನಾಯ್ಕ, ನರಿಮೊಗರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಮಹಾಲಿಂಗ ನಾಯ್ಕ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.
ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಮಹಾಲಿಂಗ ನಾಯ್ಕ ಅವರು ಮಾತನಾಡಿ, ಗೊಂಧೋಳ ಪೂಜೆಯಲ್ಲಿ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಮಹಮ್ಮಾಯಿ ಅಮ್ಮನವರ ಗಂಧ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ವಿನಂತಿಸಿದರು.
