ಪುತ್ತೂರು:ನವನವೀನ ಹೊಸ ಸಂಗ್ರಹವುಳ್ಳ ಆಕರ್ಷಕ ಉಡುಪುಗಳು, ಸೌಂದರ್ಯವರ್ಧಕಗಳ ಫ್ಯಾಷನ್ ವಸ್ತುಗಳ ಮಳಿಗೆ ತೊಶಿಕಾಸ್ ಬುಟಿಕ್ ಅ.24 ರಂದು ಪುತ್ತೂರು ಪ್ರಧಾನ ಅಂಚೆ ಕಛೇರಿ ಬಳಿಯ, ಮಾನಸ್ ಟೈಮ್ಸ್ ಎದುರುಗಡೆ ಶುಭಾರಂಭಗೊಂಡಿತು.
ಮಳಿಗೆಯ ಉದ್ಘಾಟನೆಯನ್ನು ಶ್ರೀ ಗಣೇಶ್ ಅಸೋಸಿಯೇಟ್ಸ್ ಆಂಡ್ ಇಂಜಿನಿಯರ್ಸ್ ನ ಇಂಜಿನಿಯರ್ ಗಣೇಶ್ ರವರ ತಾಯಿ ಸೀತಾ ಭಾಸ್ಕರ್ ದೇವಾಡಿಗ ಮೊಟ್ಟೆತ್ತಡ್ಕರವರು, ಮಳಿಗೆಯ ಸೇಲ್ಸ್ ಕೌಂಟರ್ ಹಾಗೂ ಪ್ರಥಮ ಖರೀದಿಯನ್ನು ತೊಶಿಕಾಸ್ ಬುಟಿಕ್ ಮಾಲಕಿ ತ್ರಿವೇಣಿ ಗಣೇಶ್ ರವರ ತಾಯಿ ಶ್ರೀಮತಿ ಸರಸ್ವತಿ, ತಂದೆ ಉಮೇಶ್ ದೇವಾಡಿಗ ಮೇಲ್ಮಜಲುರವರು ನೆರವೇರಿಸಿದರು.

ಗ್ರಾಹಕರಿಗೆ ಒಳ್ಳೆಯ ಸೇವೆ ನೀಡುವ ಮೂಲಕ ಹೆಸರು ಪಡೆಯಲಿ-ಅರುಣ್ ಕುಮಾರ್ ಪುತ್ತಿಲ:
ಈ ಸಂದರ್ಭದಲ್ಲಿ ಮಾತನಾಡಿದ ಪುತ್ತಿಲ ಪರಿವಾರ ಟ್ರಸ್ಟ್ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ, ಮಹಿಳೆಯರ ಸೌಂದರ್ಯ ಹೆಚ್ಚಿಸುವಂತಹ ಸೌಂದರ್ಯವರ್ಧಕ ವಸ್ತುಗಳು ಈ ನೂತನ ಮಳಿಗೆಯಲ್ಲಿ ಲಭ್ಯವಾಗಲಿದೆ. ಸಂಗೀತ ಕಲೆಯಲ್ಲಿ ಬಹಳಷ್ಟು ಹೆಸರು ಮಾಡಿರುವ ದೇವಾಡಿಗ ಕುಟುಂಬ ಇದೀಗ ಉದ್ಯಮ ಕ್ಷೇತ್ರದ ಮೂಲಕ ನೂತನ ಸಂಸ್ಥೆಯನ್ನು ಪುತ್ತೂರಿಗೆ ಪರಿಚಯಿಸಿದೆ. ಪುತ್ತೂರಿನಲ್ಲಿ ಹಲವಾರು ಸುಂದರ ಮನೆಗಳನ್ನು ನಿರ್ಮಿಸಿರುವ ಇಂಜಿನಿಯರ್ ಗಣೇಶ್ ಹಾಗೂ ತ್ರಿವೇಣಿ ಗಣೇಶ್ ದಂಪತಿ ಗ್ರಾಹಕರಿಗೆ ಒಳ್ಳೆಯ ಸೇವೆ ನೀಡುವ ಮೂಲಕ ಹೆಸರು ಪಡೆಯಲಿ ಎಂದು ಹೇಳಿ ಶುಭ ಹಾರೈಸಿದರು.
ವ್ಯವಹಾರ ಉದ್ಯಮವು ಯಶಸ್ವಿಯಾಗಲಿ-ಯು ಪೂವಪ್ಪ:
ವಿಶ್ವ ಹಿಂದು ಪರಿಷತ್ ಇದರ ರಾಜ್ಯ ಉಪಾಧ್ಯಕ್ಷ ಯು.ಪೂವಪ್ಪ ಮಾತನಾಡಿ, ಸಂಸ್ಥೆಯ ಮಾಲಕಿ ತ್ರಿವೇಣಿ ಗಣೇಶ್ ರವರ ತಂದೆ ಹಾಗೂ ಮಾವ ಈರ್ವರು ಪ್ರತಿನಿಧಿಸಿರುವ ಕ್ಷೇತ್ರ ಸಂಗೀತ ಕ್ಷೇತ್ರವಾಗಿದೆ. ಗಣೇಶ್ ಹಾಗೂ ತ್ರಿವೇಣಿ ದಂಪತಿ ಈಗಾಗಲೇ ಆನ್ ಲೈನ್ ಮೂಲಕ ತೊಶಿಕಾಸ್ ಬುಟಿಕ್ ಹೆಸರಿನಲ್ಲಿ ಸೇವೆಯನ್ನು ಆರಂಭಿಸಿದ್ದು ಇದೀಗ ಪುತ್ತೂರಿನ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲೆಂದು ಈ ಭಾಗದಲ್ಲಿ ಸುಸಜ್ಜಿತ ಮಳಿಗೆಯನ್ನು ಆರಂಭಿಸಿ ವ್ಯವಹಾರ ಉದ್ಯಮವು ಯಶಸ್ವಿಯಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು, ಹೆರಿ ಡಾಯಸ್ ಕಲ್ಲಿಮಾರು, ಆದ್ಯ ಮೀಡಿಯಾದ ಮನಮೋಹನ್ ಕಲ್ಲಾರೆ, ರೋಟರಿ ಕ್ಲಬ್ ಪುತ್ತೂರು ಯುವದ ಪೂರ್ವಾಧ್ಯಕ್ಷರಾದ ಉಮೇಶ್ ನಾಯಕ್, ಡಾ.ಹರ್ಷಕುಮಾರ್ ರೈ ಮಾಡಾವು, ರಾಜೇಶ್ವರಿ ಆಚಾರ್, ಕಟ್ಟಡ ಮಾಲಕ ನ್ಯಾಯವಾದಿ ಸಿದ್ಧೀಕ್, ವಿಸ್ಮಯ ವೆಡ್ಡಿಂಗ್ ಪ್ಲ್ಯಾನರ್ ನ ಸಾಯಿರಾಮ್ ಬಾಳಿಲ, ದಕ್ಷ ಕನ್‌ಸ್ಟ್ರಕ್ಷನ್ ನ ರವೀಂದ್ರ ಪಿ, ಸತೀಶ್ ರೈ ಮಿಶನ್ ಮೂಲೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಈಶ್ವರ್ ಬೆಡೇಕರ್, ರಾಧಾಕೃಷ್ಣ ನಂದಿಲ, ಪುತ್ತಿಲ ಪರಿವಾರ ಟ್ರಸ್ಟ್ ಕೋಶಾಧಿಕಾರಿ ರೂಪೇಶ್ ನಾಯೈಕ್, ಸುಪ್ರೀಮ್ ಸರ್ವಿಸಸ್ ನ ಸಿಪ್ರಿಯನ್ ಮೊರಾಸ್ ಸಹಿತ ಹಲವಾರು ಗಣ್ಯರು, ಸಂಸ್ಥೆಯ ಮಾಲಕಿ ತ್ರಿವೇಣಿ ಗಣೇಶ್ ರವರ ಕುಟುಂಬಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.
ಶಾಸಕ ಅಶೋಕ್ ರೈ ಶುಭ ಹಾರೈಕೆ..
ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಳಿಗೆಗೆ ಭೇಟಿ ನೀಡಿದ ಶಾಸಕ ಅಶೋಕ್ ಕುಮಾರ್ ರೈರವರು ನೂತನ ಉದ್ಯಮವು ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಳಿಗೆಯ ಮಾಲಕಿ ತ್ರಿವೇಣಿ ಗಣೇಶ್ ದಂಪತಿಯವರಿಂದ ಶಾಸಕ ಅಶೋಕ್ ಕುಮಾರ್ ರೈರವರಿಗೆ ಶಾಲು ಹೊದಿಸಿ ಅಭಿನಂದಿಸಿದರು.
ಉದ್ಘಾಟನೆಯ ಪ್ರಯುಕ್ತ ಶೇ.20 ಆಫರ್..
ಅಪ್ಪಟ ಬಂಗಾರದಂತೆ ಕಾಣುವ 1 ಗ್ರಾಂ ಚಿನ್ನ, ಕುರ್ಟಿಸ್, ಸೌಂದರ್ಯವರ್ಧಕಗಳು, ಕಾಸ್ಮೆಟಿಕ್ಸ್, ಸಾರೀಸ್, ಹ್ಯಾಂಡ್ ಬ್ಯಾಗ್ಸ್ ಈ ಮಳಿಗೆಯಲ್ಲಿ ಲಭ್ಯವಿದೆ. ಉದ್ಘಾಟನೆಯ ಪ್ರಯುಕ್ತ ಗ್ರಾಹಕರಿಗೆ ಶೇ.20 ಡಿಸ್ಕೌಂಟ್, ಒಂದು ವರ್ಷದ ವಾರಂಟಿ ಆಫರ್ ಲಭ್ಯವಿದ್ದು, ಈ ಆಫರ್ ಅ.20 ರ ತನಕ ಗ್ರಾಹಕರಿಗೆ ದೊರೆಯಲಿದೆ. ಜೊತೆಗೆ ವಾಟ್ಸ್ ಅಪ್ ಮೂಲಕ ಆನ್‌ಲೈನ್ ಆರ್ಡರ್ ಗಳನ್ನು ಸ್ವೀಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 9686585225, 9448725869 ನಂಬರಿಗೆ ಸಂಪರ್ಕಿಸಬಹುದು ಎಂದು ತೊಶಿಕಾಸ್ ಬುಟಿಕ್ ಮಳಿಗೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಸತನಗಳಿಗೆ ಮುನ್ನುಡಿ…
ಕಳೆದ 25 ವರ್ಷಗಳಿಂದ ದ.ಕ ಹಾಗೂ ಕೊಡಗು ಜಿಲ್ಲೆಯಲ್ಲಿ ಮನೆ ಮತ್ತು ವಾಣಿಜ್ಯ ಮಳಿಗೆ ಹಾಗೂ ಒಳಾಂಗಣ ವಿನ್ಯಾಸಕ್ಕೆ ಮನೆಮಾತಾಗಿರುವ, ಅಸಂಖ್ಯಾತ ಸಂತೃಪ್ತ ಗ್ರಾಹಕರನ್ನು ಹೊಂದಿರುವ ಶ್ರೀ ಗಣೇಶ್ ಅಸೋಸಿಯೇಟ್ಸ್ & ಇಂಟೀರಿಯರ್ಸ್ ಸಂಸ್ಥೆಯು ಈವರೆಗೆ ಕನ್‌ಸ್ಟ್ರಕ್ಷನ್ಸ್, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಹಲವು ಹೊಸತನಗಳಿಗೆ ಮುನ್ನುಡಿ ಬರೆದು ಇದೀಗ ಹೊಸ ಉದ್ಯಮ ಕ್ಷೇತ್ರಕ್ಕೆ ಮುನ್ನುಡಿ ಬರೆಯುತ್ತಿದೆ. ಅದುವೇ ತೊಶಿಕಾಸ್ ಬುಟಿಕ್. ವಿಶೇಷವಾಗಿ ಮಹಿಳೆಯರಿಗಾಗಿ ಇರುವ ಮಹಿಳೆಯರಿಂದಲೇ ನಡೆಸಲ್ಪಡುವ ಉದ್ದಿಮೆ ಇದಾಗಿದೆ.