ಸಂತ ಫಿಲೋಮಿನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರ

0

ಪುತ್ತೂರು: ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ನೇತೃತ್ವದಲ್ಲಿ,ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ ಇವರಿಂದ ವೈದ್ಯಕೀಯ ಶಿಬಿರ ಅ.18ರಂದು ನಡೆಯಿತು.

ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪುತ್ತೂರು ಕ್ರೌನ್ ಲಯನ್ಸ್ ಕ್ಲಬ್ ವಿಸ್ತರಣಾಧಿಕಾರಿ ಲl ಲ್ಯಾನ್ಸಿ ಮಸ್ಕರೇನಸ್ ಶಿಬಿರದಲ್ಲಿ ಭಾಗವಹಿಸಿ ವಿವಿಧ ಪರೀಕ್ಷೆಗಳನ್ನು ಮಾಡಿಸಿ ತಮ್ಮ ಆರೋಗ್ಯ ಸ್ಥಿತಿಗಳನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು .

ಸುಳ್ಯ ಕೆವಿಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ದಂತ ವೈದ್ಯ ಡಾಕ್ಟರ್ ಕೃಪಾಲ್ ರೈ ಸಮೂಹ ಸಮುದಾಯದಲ್ಲಿ ಎಲ್ಲರೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪುತ್ತೂರು ಕ್ರೌನ್ ಲಯನ್ಸ್ ಕ್ಲಬ್ ಅಧ್ಯಕ್ಷ ಲl ಅಂತೋನಿ ಒಲಿವೆರ, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಸಿಸ್ಟರ್ ಲೋರ ಪಾಯ್ಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಬಿರದಲ್ಲಿ ದಂತ ಆರೋಗ್ಯದ ಬಗ್ಗೆ ಉಚಿತ ತಪಾಸಣೆ ಸೇವೆ ನೀಡಲಾಯಿತು.ಶಿಕ್ಷಕರು, ವಿದ್ಯಾರ್ಥಿ ವೃಂದ,ಪೋಷಕರು ಭಾಗಿಯಾಗಿದ್ದರು. ಸಹಶಿಕ್ಷಕಿ ಅನ್ವಿತಾ ರೈ ನಿರೂಪಿಸಿ, ಅಂತೋನಿ ಒಲಿವೆರಾ ಸ್ವಾಗತಿಸಿದರು. ಶಾಲಾ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಲೋರ ಪಾಯ್ಸ್ ವಂದಿಸಿದರು.

LEAVE A REPLY

Please enter your comment!
Please enter your name here