ಆಲಂಕಾರು: ಡಿಪಾರ್ಟ್ಮೆಂಟ್ ಆಫ್ ಎಂಪಾಯಿರ್ಮೆಂಟ್ ಆಂಡ್ ಸ್ಪೋರ್ಟ್ಸ್ ಹಾಗೂ ಕರ್ನಾಟಕ ಒಲಂಪಿಕ್ ಅಸೋಶಿಯೇಷನ್ ಇವರ ಸಹಯೋಗದಲ್ಲಿ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿರುವ 4ನೇ ರಾಜ್ಯ ಮಟ್ಟದ ಒಲಂಪಿಕ್ ಕಬಡ್ಡಿ ಪಂದ್ಯಾಟಕ್ಕೆ ಆಲಂಕಾರು ಭಾರತಿ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ.
ತೃಷಾ ಕೋಡಂದೂರು (ಚಾರ್ವಾಕ ಕೋಡಂದೂರು ದಿ.ದಾಮೋದರ ಗೌಡ -ದೇವಿಕಾ ದಂಪತಿ ಪುತ್ರಿ) ಮತ್ತು ಧನ್ಯಶ್ರೀ ಕುಂತೂರು (ಕುಂತೂರು ಅರ್ಬಿ ಲೋಕೇಶ್ ಗೌಡರ ಪುತ್ರಿ) ಆಯ್ಕೆಯಾಗಿದ್ದಾರೆ. ಇವರು ದ.ಕ.ಜಿಲ್ಲಾ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇವರಿಗೆ ಶಾಲಾ ಆಡಳಿತ ಮಂಡಳಿ ಸಹಕಾರದೊಂದಿಗೆ ಮುಖ್ಯ ಮಾತಾಜಿ ಆಶಾ ಎಸ್.ರೈ, ಮುಖ್ಯ ಸತೀಶ್ ಕುಮಾರ್ ಜಿ.ಆರ್.ಬಲ್ಯ ಇವರ ಮಾರ್ಗದರ್ಶನದೊಂದಿಗೆ ಶಿಕ್ಷಕ ಚಂದ್ರಹಾಸ ಕೆ.ಸಿ.ಕುಂಟ್ಯಾನ ತರಬೇತಿ ನೀಡಿದ್ದರು.
