ಶ್ರೀಕ್ಷೇತ್ರ ಹನುಮಗಿರಿಯ ಬ್ರಹ್ಮಕಲಶೋತ್ಸವದ ಸಮಾಲೋಚನಾ ಸಭೆ-ವಿವಿಧ ಸಮಿತಿ ರಚನೆ

0

ಕಾವು: 2026ರ ಏ.9ರಿಂದ ಮೊದಲ್ಗೊಂಡು ಏ.12ರವರೆಗೆ ನಡೆಯಲಿರುವ ಶ್ರೀ ಕ್ಷೇತ್ರ ಹನುಮಗಿರಿಯ ಶ್ರೀಕೋದಂಡರಾಮ ಪಂಚಮುಖಿ ಆಂಜನೇಯ ದೇವರ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಸಮಾಲೋಚನಾ ಸಭೆ ಮತ್ತು ವಿವಿಧ ಸಮಿತಿ ರಚನೆಯು ಅ.26ರಂದು ಬೆಳಿಗ್ಗೆ ಹನುಮಗಿರಿಯ ವೈದೇಹಿ ಸಭಾಭವನದಲ್ಲಿ ನಡೆಯಿತು.


ಸಮರ್ಪಣಾ ಭಾವದಿಂದ ಜವಾಬ್ದಾರಿ ನಿರ್ವಹಿಸುವುದೇ ಯಶಸ್ಸಿಗೆ ದಾರಿ-ರವೀಶ ತಂತ್ರಿ
ಸಮಾಲೋಚನಾ ಸಭೆಯಲ್ಲಿ ಮಾರ್ಗದರ್ಶನ ನೀಡಿದ ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರು ಮಾತನಾಡಿ ಆಧ್ಯಾತ್ಮಕತೆಯ ಶಕ್ತಿಕೇಂದ್ರವಾಗಿರುವ ಶ್ರೀಕ್ಷೇತ್ರ ಹನುಮಗಿರಿಯ ಬ್ರಹ್ಮಕಲಶೋತ್ಸವದಲ್ಲಿ ನಾವು ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ತೀರ್ಮಾನಿಸುವುದೇ ಇಂದಿನ ಸಭೆಯಾಗಿದೆ. ಹಿಂದೂ ಸಮಾಜದ ಒಳಿತಿಗಾಗಿ ನಮ್ಮ ಗುರಿ ಅಚಲವಾಗಿರಬೇಕು. ಎಲ್ಲಿ ಧರ್ಮ ಕಾರ್ಯ ನಡೆಯುತ್ತದೆಯೋ ಅಲ್ಲಿ ಭಕ್ತರಾದ ನಾವು ಸಮರ್ಪಣಾ ಭಾವದಿಂದ ಸೇರಿಕೊಂಡು ಜವಾಬ್ದಾರಿ ನಿರ್ವಹಿಸುವುದೇ ನಮ್ಮ ಯಶಸ್ಸಿನ ದಾರಿಯಾಗುತ್ತದೆ. ಆ ನಿಟ್ಟಿನಲ್ಲಿ ಹನುಮಗಿರಿಯ ಬ್ರಹ್ಮಕಲಶೋತ್ಸವದಲ್ಲೂ ನಾವೆಲ್ಲರೂ ಸಂಘಟಿತರಾಗಿ ಜವಾಬ್ದಾರಿಯನ್ನು ದೇವರ ಕಾರ್ಯವೆಂದು ಭಾವಿಸಿ ಕೆಲಸ ಮಾಡಬೇಕು ಆ ಮೂಲಕ ನಮ್ಮ ದೇಶಕ್ಕೆ, ಹಿಂದೂ ಸಮಾಜಕ್ಕೆ ಇನ್ನಷ್ಟು ಶಕ್ತಿ ನೀಡುವ ಕಾರ್ಯಕ್ರಮವಾಗಿ ಮೂಡಿ ಬರಲಿ ಎಂದು ಹೇಳಿದರು.


ರಾಷ್ಟ್ರಮಟ್ಟದ ಕಾರ್ಯಕ್ರಮವಾಗಿ ಮೂಡಿಬರಲಿದೆ-ನಳಿನ್ ಕುಮಾರ್ ಕಟೀಲು
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನಳಿನ್ ಕುಮಾರ್‌ರವರು ಮಾತನಾಡಿ ಎಲ್ಲರ ಅಭಿಪ್ರಾಯ ಸಂಗ್ರಹವೇ ಇವತ್ತಿನ ಸಭೆಯಾಗಿದೆ. ಭಾರತ ಮಾತೆಯ ಮಂದಿರ ಇರುವ ದೇಶದ ಮೊದಲ ಕ್ಷೇತ್ರವೇ ಹನುಮಗಿರಿಯಾಗಿದ್ದು, ಆ ನಿಟ್ಟಿನಲ್ಲಿ ಹನುಮಗಿರಿಯ ಈ ಬಾರಿಯ ಬ್ರಹ್ಮಕಲಶೋತ್ಸವವನ್ನು ಕೂಡ ದೇಶ ಮಟ್ಟದಲ್ಲಿ ಪ್ರಚಾರ ಆಗುವಂತೆ, ಹಿಂದೂ ಸಮಾಜಕ್ಕೆ ಇನ್ನಷ್ಟು ಹೊಸ ಚೈತನ್ಯ, ಶಕ್ತಿಯನ್ನು ನೀಡುವಂತಹ ಕಾರ್ಯಕ್ರಮವಾಗಿ ನಡೆಯಲಿದೆ. ಅಸ್ಪ್ರಶ್ಯತೆ ಇಲ್ಲದ ಶ್ರೀರಾಮನು ಶಬರಿಯನ್ನು ಅಪ್ಪಿದ್ದಾನೆ, ವಿಭಿಷಣನನ್ನು ಒಪ್ಪಿದ್ದಾನೆ, ಹಾಗಾಗಿ ಶ್ರೀರಾಮನ ಬ್ರಹ್ಮಕಲಶೋತ್ಸವವು ಅಸ್ಪ್ರಶ್ಯತೆಯನ್ನು ಮೆಟ್ಟಿನಿಂತು ಸಾಮರಸ್ಯ, ಸಮಾನತೆಯೊಂದಿಗೆ ಹಿಂದೂ ಸಮಾಜದಲ್ಲಿ ಐಕ್ಯತೆಯನ್ನು ಕಾಣಲಿದೆ ಎಂದು ಹೇಳಿದರು.


ವೇದಿಕೆಯಲ್ಲಿ ಶ್ರೀಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯರವರು ಉಪಸ್ಥಿತರಿದ್ದರು. ಸಮಾಲೋಚನಾ ಸಭೆಯಲ್ಲಿ ನೆರೆದಿದ್ದವರ ಸಲಹೆ, ಅಭಿಪ್ರಾಯಗಳಿಗೆ ಅವಕಾಶ ನೀಡಲಾಯಿತು. ಈ ಸಂದರ್ಭದಲ್ಲಿ ಮುರಳಿಕೃಷ್ಣ ಹಸಂತಡ್ಕ, ಕಾವು ಹೇಮನಾಥ ಶೆಟ್ಟಿ, ಅರುಣ್ ಕುಮಾರ್ ಪುತ್ತಿಲ, ಶ್ರೀಕಾಂತ್ ಕಾಸರಗೋಡು, ಪ್ರವೀಣ್ ಸರಳಾಯ, ಆರ್.ಸಿ ನಾರಾಯಣ, ಗಿರಿಶಂಕರ ಸುಲಾಯ, ಶ್ರೀರಾಂ ಪಕ್ಕಳ ಸೇರಿದಂತೆ ಅನೇಕರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತಿಳಿಸಿದರು. ಸಭೆಯಲ್ಲಿ ಚನಿಲ ತಿಮ್ಮಪ್ಪ ಶೆಟ್ಟಿ, ರಾಧಾಕೃಷ್ಣ ಬೋರ್ಕರ್, ಅರುಣ್ ಕುಮಾರ್ ಪುತ್ತಿಲ, ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ ಜಯರಾಮ ರೈ ಬಳಜ್ಜ, ಕಾವು ಹೇಮನಾಥ ಶೆಟ್ಟಿ, ಸಾಜ ರಾಧಾಕೃಷ್ಣ ಆಳ್ವ, ಬೂಡಿಯಾರ್ ರಾಧಾಕೃಷ್ಣ ರೈ, ಸಹಜ್ ರೈ ಬಳಜ್ಜ, ಸಂತೋಷ್ ರೈ ಇಳಂತಾಜೆ, ಎ.ಕೆ ಜಯರಾಮ ರೈ, ಆರ್.ಸಿ ನಾರಾಯಣ, ಜೀವಂಧರ್ ಜೈನ್, ಶ್ರೀಕಾಂತ್ ಕಾಸರಗೋಡು, ಸುಧಾಮ ಕಾಸರಗೋಡು, ಪ್ರವೀಣ್ ಸರಳಾಯ, ರಂಗನಾಥ ರೈ ಗುತ್ತು, ಮುರಳಿಕೃಷ್ಣ ಹಸಂತ್ತಡ್ಕ, ಚಂದ್ರಶೇಖರ ರಾವ್ ನಿಽಮುಂಡ, ಮಂಜುನಾಥ ರೈ ಸಾಂತ್ಯ, ದಿವ್ಯನಾಥ ಶೆಟ್ಟಿ ಕಾವು, ಸುಭಾಶ್ಚಂದ್ರ ರೈ ಮೈರೋಳು, ಸುರೇಶ್ ರೈ ಸೂಡಿಮುಳ್ಳು, ಗಿರಿಶಂಕರ ಸುಲಾಯ, ಕಿರಣ್ ರೈ ಬಲ್ನಾಡು, ಲೋಕೇಶ್ ಚಾಕೋಟೆ, ನವೀನ್ ಎನ್, ಬಾಲಕೃಷ್ಣ ಕೆದಿಲಾಯ, ಕೃಷ್ಣಪ್ರಸಾದ್ ಕೊಚ್ಚಿ, ಲಕ್ಷ್ಮೀನಾರಾಯಣ ಭಟ್ ಪೆರ್ನಾಜೆ, ಮಳಿ ರಾಮಚಂದ್ರ ಭಟ್, ರಂಗನಾಥ ಶೆಣೈ ಗೋಪಾಲಕೃಷ್ಣ ಕುಂಜತ್ತಾಯ, ಆನಂದ ಗೌಡ, ಪ್ರದೀಪ್ ಕುಮಾರ್ ರೈ, ಶ್ರೀರಾಂ ಪಕ್ಕಳ ಹಾಗೂ ದ.ಕ ಮತ್ತು ಕಾಸರಗೋಡು ಜಿಲ್ಲೆಯ ಅನೇಕ ರಾಜಕೀಯ, ಧಾರ್ಮಿಕ, ಸಾಮಾಜಿಕ ಮುಖಂಡರುಗಳು, ವಿವಿಧ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರು, ಸದಸ್ಯರುಗಳು, ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು, ಗ್ರಾಮಸ್ಥರು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಶ್ರೀಕ್ಷೇತ್ರ ಹನುಮಗಿರಿಯ ಧರ್ಮದರ್ಶಿ ಶಿವರಾಮ ಪಿ ಸ್ವಾಗತಿಸಿದರು. ದೇವಿಪ್ರಕಾಶ್ ಶೆಟ್ಟಿ ಕುತ್ಯಾಳ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.


7 ಸಮಿತಿಗಳ ರಚನೆ
ಶ್ರೀಕ್ಷೇತ್ರ ಹನುಮಗಿರಿಯ ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಸಮಾಲೋಚನಾ ಸಭೆಯಲ್ಲಿ ೭ ವಿವಿಧ ಸಮಿತಿಗಳನ್ನು ರಚಿಸಿ ಘೋಷಣೆ ಮಾಡಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲುರವರು ವಿವಿಧ ಸಮಿತಿಗಳ ಘೋಷಣೆ ಮಾಡಿದರು. ಪ್ರಮುಖವಾಗಿ ಬ್ರಹ್ಮಕಲಶೋತ್ಸವ ಸಮಿತಿ, ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿ, ಶ್ರೀರಾಮ ಹನುಮಾ ಜ್ಯೋತಿ ರಥಯಾತ್ರೆ ಸಮಿತಿ, ಕೋಟಿ ಶ್ರೀರಾಮ ತಾರಕ ಮಂತ್ರ ಮಹಾಯಜ್ಞ ಮತ್ತು ಭಜನೆ ಸಮಿತಿ, ಲಕ್ಷೋತ್ತರ ನಾರಿಕೇಳ ಸಮರ್ಪಣಾ ಯಜ್ಞ ಸಮಿತಿ, ಕೋಟಿ ಶ್ರೀರಾಮ ತಾರಕ ಮಂತ್ರ ಮಹಾಯಜ್ಞ ಗ್ರಾಮ ಸಮಿತಿ, ಕಾಮಗಾರಿ/ನಿರ್ಮಾಣ ಸಮಿತಿಗಳ ಘೋಷಣೆ ಮಾಡಲಾಯಿತು. ಬಳಿಕ ಸಮಿತಿಯ ಎಲ್ಲಾ ಪ್ರಮುಖರಿಗೆ ಹೂ ನೀಡಿ, ಸಮಿತಿಯ ಕಡತ ನೀಡಿ ಗೌರವಿಸಲಾಯಿತು.


ಬ್ರಹ್ಮಕಲಶೋತ್ಸವ ಸಮಿತಿ
ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾಗಿ ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ ಜಯರಾಮ ರೈ ಬಳಜ್ಜ, ಎಸ್.ಎನ್ ಮನ್ಮಥ, ವಿಶ್ವೇಶ್ವರ ಭಟ್ ಬಂಗಾರಡ್ಕ, ಜಯಂತ ನಡುಬೈಲು, ಅರುಣ್ ಕುಮಾರ್ ಪುತ್ತಿಲ, ಕಾವು ಹೇಮನಾಥ ಶೆಟ್ಟಿ, ವಾಸು ಪೂಜಾರಿ ಗುಂಡ್ಯಡ್ಕ, ಡಾ. ಸುರೇಶ್ ಪುತ್ತೂರಾಯ, ಶ್ರೀಕಾಂತ್ ಕಾಸರಗೋಡು, ಚನಿಲ ತಿಮ್ಮಪ್ಪ ಶೆಟ್ಟಿ, ರವಿಕಿರಣ ಶೆಟ್ಟಿ ಬೆದ್ರಾಡಿ, ಬೂಡಿಯಾರು ರಾಧಾಕೃಷ್ಣ ರೈ, ಕೇಶವ ಮುಳಿಯ ಸುಳ್ಯ, ಜೀವಂಧರ್ ಜೈನ್, ಹರೀಶ್ ಕಂಜಿಪಿಲಿ, ಭಾಮಿ ಅಶೋಕ್ ಶೆಣೈ, ಪ್ರಧಾನ ಕಾರ್ಯದರ್ಶಿಗಳಾಗಿ ಸುಬ್ಬಪ್ಪ ಪಟ್ಟೆ, ಗಿರಿಧರ ಶೆಟ್ಟಿ, ರಾಜೇಶ್ ಬನ್ನೂರು, ಸವಿತಾ ರೈ ನೆಲ್ಲಿತ್ತಡ್ಕ, ಪೂರ್ಣಚಂದ್ರ ನೆಲ್ಲಿತ್ತಡ್ಕ, ಆರ್.ಸಿ ನಾರಾಯಣ, ಕಾರ್ಯದರ್ಶಿಗಳಾಗಿ ದೇವಿಪ್ರಕಾಶ್ ಶೆಟ್ಟಿ ಕುತ್ಯಾಳ, ದೀಪಕ್ ಮುಂಡ್ಯ, ಮಹಾಲಿಂಗ ಪಂಚೋಡಿ, ಚಿನ್ಮಯ್ ರೈ, ಪ್ರಕಾಶ್ ಕೈಕಾರ, ಚಂದ್ರಶೇಖರ ಆಳ್ವ, ಲಿಂಗಪ್ಪ ಗೌಡ, ಶಿವರಾಮ ಭಟ್ ಬೀರ್ಣಕಜೆ, ಸೌಮ್ಯ ಗಜಾನನ, ಪ್ರಶಾಂತಿ ರೈ ಕುತ್ಯಾಳ, ಶ್ರೀನಿವಾಸ ಭಟ್ ಚಂದುಕೂಡ್ಲುರವರ ಹೆಸರನ್ನು ಘೋಷಿಸಲಾಯಿತು.


ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿ
ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಡಾ. ರವೀಶ್ ಪಡುಮಲೆ, ಉಪಾಧ್ಯಕ್ಷರಾಗಿ ಸೀತಾರಾಮ ರೈ ಗುತ್ತು, ಲೋಕಯ್ಯ ಮೂಲ್ಯ, ಸಹಜ್ ರೈ ಬಳಜ್ಜ, ಪ್ರಶಾಂತ್ ಸಿಝ್ಲರ್, ರಂಜಿತ್ ಕಾಂಚನ್, ಹರೀಶ್ ಕುತ್ತಾರ್, ಗೋಪಾಲಕೃಷ್ಣ ಭಟ್ ದ್ವಾರಕಾ, ಪ್ರಧಾನ ಕಾರ್ಯದರ್ಶಿಗಳಾಗಿ ಮುರಳಿಕೃಷ್ಣ ಹಸಂತಡ್ಕ, ಸುಮಲತಾ ಜಗದೀಶರವರ ಹೆಸರು ಘೋಷಣೆ ಮಾಡಲಾಯಿತು. ಶ್ರೀರಾಮ ಹನುಮಾ ಜ್ಯೋತಿ ರಥಯಾತ್ರೆ ಸಮಿತಿ: ಶ್ರೀರಾಮ ಹನುಮಾ ಜ್ಯೋತಿ ರಥಯಾತ್ರೆ ಸಮಿತಿಯ ಅಧ್ಯಕ್ಷರಾಗಿ ವಿಶ್ವೇಶ್ವರ ಭಟ್ ಬಂಗಾರಡ್ಕ, ಕಾರ್ಯದರ್ಶಿಯಾಗಿ ಸಹಜ್ ರೈ ಬಳಜ್ಜರವರ ಹೆಸರು ಘೋಷಣೆ ಮಾಡಲಾಯಿತು.


ಕೋಟಿ ಶ್ರೀರಾಮ ತಾರಕ ಮಂತ್ರ ಮಹಾಯಜ್ಞ ಮತ್ತು ಭಜನೆ ಸಮಿತಿ
ಕೋಟಿ ಶ್ರೀರಾಮ ತಾರಕ ಮಂತ್ರ ಮಹಾಯಜ್ಞ ಸಮಿತಿಯ ಅಧ್ಯಕ್ಷರಾಗಿ ಸುದರ್ಶನ್ ಮೂಡಬಿದ್ರೆ, ಪ್ರಧಾನ ಕಾರ್ಯದರ್ಶಿಗಳಾಗಿ ಮುರಳಿಕೃಷ್ಣ ಹಸಂತಡ್ಕ, ಹರಿಪ್ರಸಾದ್ ಯಾದವ್, ಭಜನಾ ಸಮಿತಿಯ ಅಧ್ಯಕ್ಷರಾಗಿ ರಾಮಕೃಷ್ಣ ಕಾಟುಕುಕ್ಕೆ, ಸದಸ್ಯರಾಗಿ ಪ್ರವೀಣ್ ಸರಳಾಯ, ಪರಮೇಶ್ವರಿ ಭಟ್, ಕಿರಣ್ ರೈ ಬಲ್ನಾಡು, ದಿನೇಶ್ ಪಂಜಿಗರವರ ಹೆಸರು ಘೋಷಣೆ ಮಾಡಲಾಯಿತು.


ಕೋಟಿ ಶ್ರೀರಾಮ ತಾರಕ ಮಂತ್ರ ಮಹಾಯಜ್ಞ ಗ್ರಾಮ ಸಮಿತಿ
ಕೋಟಿ ಶ್ರೀರಾಮ ತಾರಕ ಮಂತ್ರ ಮಹಾಯಜ್ಞ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ರಾಜೇಶ್ ಬನ್ನೂರು, ಉಪಾಧ್ಯಕ್ಷರಾಗಿ ಸಾಜ ರಾಧಾಕೃಷ್ಣ ಆಳ್ವರವರ ಹೆಸರು ಘೋಷಣೆ ಮಾಡಲಾಯಿತು.


ಲಕ್ಷೋತ್ತರ ನಾರಿಕೇಳ ಸಮರ್ಪಣಾ ಯಜ್ಞ ಸಮಿತಿ
ಲಕ್ಷೋತ್ತರ ನಾರಿಕೇಳ ಸಮರ್ಪಣಾ ಯಜ್ಞ ಸಮಿತಿಯ ಅಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ, ಉಪಾಧ್ಯಕ್ಷರಾಗಿ ರಾಧಾಕೃಷ್ಣ ಬೋರ್ಕರ್‌ರವರ ಹೆಸರು ಘೋಷಣೆ ಮಾಡಲಾಯಿತು.


ಕಾಮಗಾರಿ/ನಿರ್ಮಾಣ ಸಮಿತಿ
ಕಾಮಗಾರಿ/ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಶ್ರೀರಾಮ್ ಪಕ್ಕಳ, ಪ್ರಧಾನ ಕಾರ್ಯದರ್ಶಿಯಾಗಿ ಸೂರ್ಯನಾರಾಯಣ ಭಟ್ ಬೀರಮೂಲೆಯವರ ಹೆಸರು ಘೋಷಣೆ ಮಾಡಲಾಯಿತು.

ಸಾಮರಸ್ಯಕ್ಕೆ ಸಾಕ್ಷಿಯಾದ ಶ್ರೀಕ್ಷೇತ್ರ ಹನುಮಗಿರಿ ಬ್ರಹ್ಮಕಲಶ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಡಾ. ರವೀಶ್ ಪರವ
ಬ್ರಹ್ಮಕಲಶೋತ್ಸವ ಸಮಿತಿಯಷ್ಟೇ ಪ್ರಮುಖವಾದ ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ದೈವನರ್ತಕ, ಉಪನ್ಯಾಸಕ, ದೈವಾರಾಧನೆಯ ಅಧ್ಯಯನಶೀಲರೂ ಆಗಿರುವ ಡಾ. ರವೀಶ ಪರವ ಪಡುಮಲೆಯವರ ಹೆಸರನ್ನು ನಳಿನ್ ಕುಮಾರ್ ಕಟೀಲುರವರು ಘೋಷಣೆ ಮಾಡಿ ಅವರನ್ನು ವೇದಿಕೆಗೆ ಆಹ್ವಾನಿಸಿದರು. ಡಾ. ರವೀಶ್ ಪಡುಮಲೆಯವರಿಗೆ ಶ್ರೀ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯರವರು ಶಾಲು ಹೊದಿಸಿ ಗೌರವಿಸಿದರು. ಡಾ. ರವೀಶ್ ಪಡುಮಲೆಯವರ ಹೆಸರು ಘೋಷಣೆಯಾಗುತ್ತಿದ್ದಂತೆ ಸಭೆಯಲ್ಲಿ ನೆರೆದಿದ್ದವರಿಂದ ಚಪ್ಪಾಳೆಯ ಕರತಾಡನ ಮೊಳಗಿತು.

ಹಿಂದೂ ಸಮಾಜದ ಸಮಾನತೆಗೆ ಸಿಕ್ಕ ಗೌರವ
ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ರವೀಶ್ ಪಡುಮಲೆಯವರು ಮಾತನಾಡಿ, ದೈವನರ್ತಕನ ಕುಟುಂಬದವನಾದ ನನ್ನನ್ನು ಗುರುತಿಸಿ ಬ್ರಹ್ಮಕಲಶದ ಸ್ವಾಗತ ಸಮಿತಿಯ ಅಧ್ಯಕ್ಷನನ್ನಾಗಿ ಮಾಡಿರುವುದು ಹಿಂದೂ ಸಮಾಜದ ಸಮಾನತೆಗೆ ಸಿಕ್ಕ ಗೌರವವಾಗಿದೆ. ಅಸ್ಪ್ರಶ್ಯತೆ, ಜಾತಿಯತೆಯನ್ನು ಬಿಟ್ಟು ಸಾಮಾಜಿಕ ಸಾಮರಸ್ಯ, ಸಮಾನತೆಯನ್ನು ಕಾಣುವ ನಮ್ಮ ಹಿಂದೂ ಸಮಾಜಕ್ಕೆ ಹನುಮಗಿರಿಯ ಬ್ರಹ್ಮಕಲಶ ಇನ್ನಷ್ಟು ಹೊಸ ಶಕ್ತಿಯನ್ನು ನೀಡಲಿದೆ. ದೈವದ ಕೊಡ್ಯಾಡಿಯಲ್ಲಿ ದೈವದ ಚಾಕರಿಯನ್ನು ಮಾಡಿದಂತೆ ಶ್ರೀರಾಮನ ಚಾಕರಿ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪಾಲಿನ ಸೌಭಾಗ್ಯವಾಗಿದೆ. ಈ ಅವಕಾಶ ನೀಡಿದ ಎಲ್ಲರಿಗೂ ನಾನು ಧನ್ಯನಾಗಿದ್ದೇನೆ ಎಂದು ಹೇಳಿದರು.

ಬ್ರಹ್ಮಕಲಶೋತ್ಸವದ ಅಧ್ಯಕ್ಷರು ಹೇಳಿದ್ದು

  • ಬ್ರಹ್ಮಕಲಶೋತ್ಸವದ ಸಮಾಲೋಚನೆಗೆ ಕರೆದಿದ್ದ ಪ್ರಥಮ ಗ್ರಾಮ ಸಭೆಗೆ 500ಕ್ಕೂ ಅಧಿಕ ಜನ ಪಾಲ್ಗೊಂಡಿರುವುದು ಅದ್ಭುತ
  • ಶ್ರೀರಾಮನ ಸೇವಕನಾಗಿ, ಕಾರ್ಯಕರ್ತನಾಗಿ, ಎಲ್ಲರ ಸಹಕಾರದೊಂದಿಗೆ ನನಗೆ ನೀಡಿದ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ.
  • ಸಮಾಜಕ್ಕೆ ಹೊಸ ಸಂದೇಶ, ಜಾಗೃತಿ, ಸಂಸ್ಕಾರ, ಶಕ್ತಿಯನ್ನು ಕೊಡುವ ನಿಟ್ಟಿನಲ್ಲಿ ಬ್ರಹ್ಮಕಲಶ ಸಂಪನ್ನಗೊಳ್ಳಬೇಕು.
  • ಕೋಟಿ ಶ್ರೀರಾಮ ತಾರಕ ಮಂತ್ರ ಮಹಾಯಜ್ಞದ ಪೂರ್ಣಾಹುತಿಗಾಗಿ ಮನೆ ಮನೆಯಲ್ಲಿ ರಾಮಜಪ ಆಗಬೇಕು.
  • ಅಯೋಧ್ಯೆಯಿಂದ ಶ್ರೀರಾಮ ಜ್ಯೋತಿ, ಅಂಜನಾದ್ರಿಯಿಂದ ಹನುಮಾ ಜ್ಯೋತಿ ರಥಯಾತ್ರೆ ಶ್ರೀಕ್ಷೇತ್ರಕ್ಕೆ ಬರಲಿದೆ.
  • ಶ್ರೀರಾಮ ಹನುಮಾ ಜ್ಯೋತಿಯ ರಥಯಾತ್ರೆಯ ಗ್ರಾಮ ಸಂಚಾರದ ಸಂದರ್ಭ ಸ್ವಾಗತ, ಭಜನೆ, ಸತ್ಸಂಗ ನಡೆಯಬೇಕು.
  • ಬ್ರಹ್ಮಕಲಶೋತ್ಸವದಲ್ಲಿ ಲಕ್ಷೋತ್ತರ ನಾರಿಕೇಳ ಸಮರ್ಪಣಾ ಯಜ್ಞ ಸಂಪನ್ನಗೊಳ್ಳಲಿದೆ.
  • ಲಕ್ಷೋತ್ತರ ನಾರಿಕೇಳ ಯಜ್ಞಕ್ಕೆ ಪ್ರತಿ ಮನೆಯಿಂದಲೂ 2 ತೆಂಗಿನಕಾಯಿ ಸಮರ್ಪಣೆ ಮಾಡಬೇಕು.
  • ಸಭೆಗೆ ಬಂದಿರುವ ಎಲ್ಲರೂ ಸಮಿತಿ ಸದಸ್ಯರುಗಳೇ ಆಗಿದ್ದು, ಮುಂದಿನ ಎಲ್ಲಾ ಸಭೆಗೂ ಉಪಸ್ಥಿತಿ, ಸಲಹೆಗಳು ಮುಖ್ಯವಾಗಿದೆ.
  • ಇವತ್ತು ಸಾಂಕೇತಿಕವಾಗಿ ಏಳು ಸಮಿತಿಗಳ ರಚನೆಯಾಗಿದ್ದು, ಇನ್ನೂ ಒಟ್ಟು 30 ಸಮಿತಿಗಳ ರಚನೆಯಾಗಲಿದೆ.
  • ಬ್ರಹ್ಮಕಲಶ ಸಮಿತಿ ಸೇರಿದಂತೆ ಎಲ್ಲಾ ಸಮಿತಿಗಳಿಗೂ ಇನ್ನಷ್ಟು ಹೆಸರು ಸೇರ್ಪಡೆಯಾಗಲಿದೆ.
  • ಪ್ರತಿ ಮನೆ ಮತ್ತು ಮನಸ್ಸನ್ನು ತಲುಪುವಲ್ಲಿ ಎಲ್ಲಾ ಸಮಿತಿಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು.
  • ಬ್ರಹ್ಮಕಲಶೋತ್ಸವದಲ್ಲಿ ಯಾವುದೇ ಭಾಷಣ, ಧಾರ್ಮಿಕ ಸಭೆ, ಸನ್ಮಾನ ಇರುವುದಿಲ್ಲ.
  • ಬ್ರಹ್ಮಕಲಶೋತ್ಸವದಲ್ಲಿ ಧಾರ್ಮಿಕ ಕಾರ್ಯ, ಭಜನೆ, ಸಂಗೀತ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ.

LEAVE A REPLY

Please enter your comment!
Please enter your name here