ಪುತ್ತೂರು: ಜನ್ನತುಲ್ ಉಲೂಂ ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಮತ್ತು ಅರೆಬಿಕ್ ಶಾಲೆ ಪಡ್ನೂರು ಇದರ ಆಡಳಿತ ಸಮಿತಿ ನೂತನ ಅಧ್ಯಕ್ಷರಾಗಿ ಕುಂಞಿ ಅಹಮದ್ ಹಾರಾಡಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸಮೀರ್ ಅಕ್ಕರೆ ಆಯ್ಕೆಯಾಗಿದ್ದಾರೆ. ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಉಪಾಧ್ಯಕ್ಷರಾಗಿ ಹನೀಫ್ ಸಿಬಾರ ಹಾಗೂ ಇಬ್ರಾಹಿಂ ಅಕ್ಕರೆ, ಕೋಶಾಧಿಕಾರಿಯಾಗಿ ಸಿರಾಜ್ ಅಕ್ಕರೆ ಅವರನ್ನು ಆಯ್ಕೆ ಮಾಡಲಾಯಿತು.
