ಕಡಬ: ಪ್ರೀತಿ, ತ್ಯಾಗ, ಶ್ರಮ ಹಾಗೂ ಮಾನವೀಯತೆಯನ್ನು ಸ್ಮರಿಸುವ ಉದ್ದೇಶದಿಂದ ಮರ್ದಾಳದ ಬೆಥನಿ ಜೀವನ ಜ್ಯೋತಿ ವಿಶೇಷ ಶಾಲೆಯಲ್ಲಿ ಆರೈಕೆದಾರರ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಶಾಲಾ ನಿರ್ದೇಶಕರಾದ ಫಾದರ್ ಸಕ್ಕರಿಯಾಸ್ ನಂದಿಯಾಟ್ (O.I.C) ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, “ಆರೈಕೆದಾರರು ತಾಯಿಯಂತೆ ಎಲ್ಲ ನೋವನ್ನು ಮರೆತು, ವಿಶೇಷ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ” ಎಂದು ಹೇಳಿದರು.
ಅತಿಥಿ ಫಾದರ್ ಡ್ಯಾನಿಯಲ್ ಕಡಗಂಪಳ್ಳಿ ಮಾತನಾಡಿ “ವಿಶೇಷ ಚೇತನರ ಸೇವೆಯು ದೇವರ ಸೇವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ರೇವತಿ ಹಾಗೂ ಕುಸುಮಾವತಿ ಅವರನ್ನು ಸನ್ಮಾನಿಸಲಾಯಿತು.
ಮಾನವೀಯತೆಯ ಅರ್ಥವನ್ನು ಜೀವಂತವಾಗಿಟ್ಟುಕೊಂಡು ಅವಿರತ ಶ್ರಮಿಸುವ ಆರೈಕೆದಾರರೇ ಸಂಸ್ಥೆಯ ಜೀವಾಳ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಶೈಲಾ ರವರು ಅಭಿಪ್ರಾಯಪಟ್ಟರು. ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ವಿಶೇಷ ಶಿಕ್ಷಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
