ಪುತ್ತೂರು: ಪುತ್ತೂರಿನ ಮೈತ್ರಿ ಎಲೆಕ್ಟ್ರಿಕ್ ಕಂ.,ಯು ಪ್ರಮುಖ ಗ್ರಾಹಕ ಇಲೆಕ್ಟ್ರೀಷಿಯನ್ ಗಳಿಗಾಗಿ ವರ್ಷದಲ್ಲಿ ಮೂರು ನಾಲ್ಕು ಬಾರಿ ನಿರಂತರವಾಗಿ ಅರಿತು ಕೊಳ್ಳಿ ಎಂಬ ವಿಶಿಷ್ಟ ಕಾರ್ಯಕ್ರಮದ ಅಡಿಯಲ್ಲಿ ಹೊಸ ಹೊಸ ತಂತ್ರಜ್ಞಾನಗಳ ಮಾಹಿತಿ ಹಾಗೂ ತರಬೇತಿ ಕಾರ್ಯಕ್ರಮಗಳನ್ನು ನೀಡುತ್ತಿದ್ದು ಅದರ ಮುಂದುವರಿದ ಭಾಗವಾಗಿ ಅ.9ರಂದು ಆಯ್ದ 40 ಟೆಕ್ನಿಷಿಯನ್ ಗಳು ತುಮಕೂರಿನಲ್ಲಿರುವ ಹ್ಯಾವಲ್ಸ್ ವಯರ್ ಫ್ಯಾಕ್ಟರಿಗೆ ಬೇಟಿ ನೀಡಿದರು.
ಈ ಸಂಧರ್ಭದಲ್ಲಿ ಹ್ಯಾವಲ್ಸ್ ಕಂಪನಿಯ ಪ್ಲ್ಯಾಂಟ್ ಮುಖ್ಯಸ್ಥ ದೇವೇಶ್ ಶರ್ಮರವರು ಉಪಯುಕ್ತ ಮಾಹಿತಿ ನೀಡಿದರು. ಹ್ಯಾವಲ್ಸ್ ಕಂಪನಿಯ ಸಹಾಯಕ ಜನರಲ್ ಮ್ಯಾನೆಜರ್ ನರೇಂದ್ರ ಕುಲಕರ್ಣಿ ಹ್ಯಾವಲ್ಸ್ ಉತ್ಪನ್ನಗಳ ಬಗ್ಗೆ ವಿವರಿಸಿದರು. ಇಲೆಕ್ಟ್ರೀಷಿಯನ್ಗಳು ಹ್ಯಾವಲ್ಸ್ ಯು ಜಿ ಕೇಬಲ್ ಹಾಗೂ ಹೌಸ್ ವಯರ್ಗಳ ಉತ್ಪಾದನೆಯ ಕುರಿತು ಮಾಹಿತಿ ಪಡಕೊಂಡರು.
ಹ್ಯಾವೆಲ್ಸ್ ಕಂಪನಿಯ ಏರಿಯ ಸೇಲ್ಸ್ ಮ್ಯಾನೆಜರ್ಗಳಾದ  ರಾಜೇಶ್ ಯಂ ಪಿ,ವಿಶಾಲ್ ,ನಿತಿನ್ ಮತ್ತು ಮೈತ್ರಿ ಎಲೆಕ್ಟ್ರಿಕ್ ಕಂ., ಯ ಉರ್ಬನ್ ಡಿ’ಸೋಜಾ ಹಾಗೂ ಉಮೇಶ್ ಕುಲಾಲ್  ಈ ಭೇಟಿಯ ಉಸ್ತುವಾರಿ ವಹಿಸಿದ್ದರು.
