ಕಾಣಿಯೂರು: ಕರ್ನಾಟಕ ರಾಜ್ಯ, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆದೇಶದಂತೆ, ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮವು ಅ.30ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಎಸ್.ಡಿ.ಎಂ.ಸಿಯ ಅಧ್ಯಕ್ಷ ಪರಮೇಶ್ವರ ಗೌಡ ಅನಿಲ ಮಾತನಾಡಿ, ಶಾಲಾ ಅಭಿವೃದ್ಧಿ ಕೆಲಸಗಳ ಬಗ್ಗೆ ಮುಂದೆ ನಡೆಯಬೇಕಾದ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು. ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದ ದೋಳ್ಪಾಡಿ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಉಷಾ ದೇವಿರವರು ಶೈಕ್ಷಣಿಕ ಮತ್ತು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಯಶೋಧ ನೇರೋಳ್ತಡ್ಕ, ಬೆಳಂದೂರು ಗ್ರಾಮ ಪಂಚಾಯತ್ ಸದಸ್ಯೆ ಗೌರಿ ಮಾದೋಡಿ, ಸುಮಿತ್ರಾ ಬಂಡಾಜೆ, ವಸಂತಿ, ದಿನೇಶ ಅನ್ಯಾಡಿ, ರಮೇಶ ಮಾದೋಡಿ, ಸೀತಾರಾಮ ಮಿತ್ತಮೂಲೆ, ಚಂದ್ರಶೇಖರ ಬೈತಡ್ಕ, ವಸಂತಿ ಅಜಿರಂಗಳ, ಹಿರಿಯ ಶಿಕ್ಷಕಿ ದೇವಕಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಗುರು ಬಾಲಕೃಷ್ಣ ಕೆ ಸ್ವಾಗತಿಸಿದರು. ಶಿಕ್ಷಕಿ ವೀಕ್ಷಿತಾ ವಂದಿಸಿ, ಶೇರಿನ ಬೇಗಂ ನಿರೂಪಿಸಿದರು. ಭಾರತಿ ಕೆ ಶಾಲಾ ಶೈಕ್ಷಣಿಕ ಮಾಹಿತಿ ನೀಡಿದರು. ಸಹಶಿಕ್ಷಕರಾದ ಸುಜಯಾ , ರಶ್ಮಿ, ದಿವ್ಯಾ , ಚೈತನ್ಯ, ವಾಣಿಶ್ರೀ, ನಯನ ಪೋಷಕರಿಗೆ ತರಗತಿವಾರು ಮಾಹಿತಿ ನೀಡಿದರು. ಬಳಿಕ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಮತ್ತು ಕಲಿಕಾ ಮಾಹಿತಿಯನ್ನು ಮತ್ತು ಪರೀಕ್ಷಾ ಉತ್ತರ ಪತ್ರಿಕೆಗಳನ್ನು ವೀಕ್ಷಿಸಿದರು. ಬಳಿಕ ಎಸ್ ಡಿ ಎಂ ಸಿ ಸಭೆ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
