ನೆಲ್ಯಾಡಿ: ಗೋಳಿತ್ತೊಟ್ಟು-ರಾಮಕುಂಜ ರಸ್ತೆಯ ಚಿಲುಮೆಯಿಂದ ಗೋಳಿತ್ತೊಟ್ಟು ತನಕ ರಸ್ತೆಯಲ್ಲಿನ ಹೊಂಡಗಳಿಗೆ ಮಣ್ಣು ತುಂಬಿಸುವ ಮೂಲಕ ಪಿಕಪ್ ಹಾಗೂ ರಿಕ್ಷಾ ಚಾಲಕರು ದುರಸ್ತಿ ಕೆಲಸ ನಡೆಸಿದರು.
ಚಿಲುಮೆಯಿಂದ ಗೋಳಿತ್ತೊಟ್ಟು ತನಕ ರಸ್ತೆ ಅಲ್ಲಲ್ಲಿ ಹೊಂಡ ನಿರ್ಮಾಣಗೊಂಡಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಗೋಳಿತ್ತೊಟ್ಟಿನ ಪಿಕಪ್ ಹಾಗೂ ರಿಕ್ಷಾ ಚಾಲಕರು ಪಿಕಪ್‌ನಲ್ಲಿ ಮಣ್ಣು ತಂದು ಹೊಂಡ ಮುಚ್ಚುವ ಮೂಲಕ ರಸ್ತೆ ದುರಸ್ತಿ ಕೆಲಸ ಮಾಡಿದರು. ಪಿಕಪ್ ಚಾಲಕರಾದ ಕೊರಗಪ್ಪ, ಯಶವಂತ, ವಿನೋದ್ ಹಾಗೂ ರಿಕ್ಷಾ ಚಾಲಕರು ದುರಸ್ತಿ ಕೆಲಸದಲ್ಲಿ ತೊಡಗಿದ್ದರು.
