ಪುತ್ತೂರು: ಒಳಮೊಗ್ರು ಗ್ರಾಮದ ಕೈಕಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಶಿವರಾಮ ಶೆಟ್ಟಿ ಬಿಲ್ಲಜೆ, ಸಂಚಾಲಕರಾದ ಸೀತಾರಾಮರೈ, ದಾನಿಗಳಾದ ಗೀತಾ ಡಿ ಪಿಂಗಾರ, ಪ್ರತಿ ವರ್ಷ ರಾಜ್ಯೋತ್ಸವಕ್ಕೆ ಸಿಹಿ ತಿಂಡಿ ಕೊಡುವ ಜಯರಾಮ ರೈ ಇವರ ಪುತ್ರ ಪ್ರಜ್ವಲ್ ರೈ ತೊಟ್ಲ, ಎಸ್ ಡಿ ಎಂ ಸಿ ಅಧ್ಯಕ್ಷೆ ಶೀಲಾವತಿ, ಹಿರಿಯರಾದ ಚಂದ್ರಹಾಸ ರೈ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಗುರುಗಳಾದ ರಾಮಣ್ಣ ರೈ ಸ್ವಾಗತಿಸಿದರು. ಕನ್ನಡ ಉಳಿಸುವ ಜವಾಬ್ದಾರಿಯನ್ನು ನಾವೆಲ್ಲರೂ ತೆಗೆದುಕೊಳ್ಳಬೇಕು ಕನ್ನಡಕ್ಕೆ ಗೌರವವನ್ನು ತಂದುಕೊಡಬೇಕು ಕನ್ನಡ ಭಾಷೆಯನ್ನು ಬೆಳೆಸಬೇಕು ಎಂದು ಅತಿಥಿಗಳು ಶುಭಾಶಯ ಹೇಳಿದರು. ಶಾಲಾ ಅಧ್ಯಾಪಕಿ ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ಶೋಭಾ ವಂದಿಸಿದರು. ಸೂರಜ್ ಜೈನ್ ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಿದರು. ವೇದಾಕ್ಷಿ ಪ್ರಾರ್ಥಿಸಿದರು. ಕುಸುಮ ಸಹಕರಿಸಿದರು. 2ನೇ ತರಗತಿಯ ಚರಿಷ್ಮರವರ ಹುಟ್ಟು ಹಬ್ಬವನ್ನು ಕೂಡ ಆಚರಿಸಲಾಯಿತು.
