ಪುತ್ತೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದಯ ಪೂಜಾರಿ ಬಳ್ಳಾಲ್ ಬಾಗ್ ಸಾರಥ್ಯದ ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ (ರಿ) ಪುತ್ತೂರು ಘಟಕದ ಆಡಳಿತ ಮಂಡಳಿ ಪುನರಚನೆಯ ಸಮಾಲೋಚನಾ ಸಭೆ ನ.1ರಂದು ಪುತ್ತೂರು ರೋಟರಿ ಕ್ಲಬ್ ಮನಿಷಾ ಹಾಲ್ ನಲ್ಲಿ ನಡೆಯಿತು.
ಬಿರುವೆರ್ ಕುಡ್ಲ (ರಿ) ಕೇಂದ್ರ ಸಮಿತಿಯ ಪ್ರತಿನಿಧಿ ಚೇತನ್ ಬಂಗೇರ ಇವರ ಉಪಸ್ಥಿತಿಯಲ್ಲಿ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ಮುಂದಿನ ಕಾರ್ಯ ಯೋಜನೆ ಬಗ್ಗೆ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ ಬಿರುವೆರ್ ಕುಡ್ಲ (ರಿ) ಸುಳ್ಯ ಘಟಕದ ಅಧ್ಯಕ್ಷರಾದ ಭಾಸ್ಕರ್ ಸುಳ್ಯ ಮತ್ತು ರೋಟರಿ ಕ್ಲಬ್ ಈಸ್ಟ್ ಇದರ ಅಧ್ಯಕ್ಷರಾದ ಶಶಿಧರ್ ಕಿನ್ನಿಮಜಲು ಉಪಸ್ಥಿತರಿದ್ದರು. ರಜನಿಶ್ ಕಲ್ಲೆಗ ಅತಿಥಿಗಳನ್ನು ಸ್ವಾಗತಿಸಿದರು.
2025-26 ನೇ ಸಾಲಿನ ನೂತನ ಪದಾಧಿಕಾರಿಗಳು
ಗೌರವಾಧ್ಯಕ್ಷರಾಗಿ ಜಗದೀಶ್ ಅಮಿನ್ ನಡುಬೈಲು,ಗೌರವ ಸಲಹೆಗಾರರಾಗಿ ಹರೀಶ ಶಾಂತಿ ಪುತ್ತೂರು,ನೂತನ ಅಧ್ಯಕ್ಷರಾಗಿ ಜನಾರ್ದನ ಪೂಜಾರಿ ಪಡುಮಲೆ,ಉಪಾಧ್ಯಕ್ಷರಾಗಿ ಮನೋಹರ್ ರೈ ಮೇಲ್ಮಜಲು,ಕಾರ್ಯದರ್ಶಿಯಾಗಿ ಪ್ರವೀಣ್ ಸಣ್ಣಗುತ್ತು ಅಳಿಕೆ, ಜೊತೆ ಕಾರ್ಯದರ್ಶಿಯಾಗಿ ಭವಿತ್ ಪೂಜಾರಿ ಕುರಿಯ, ಕೋಶಾಧಿಕಾರಿಯಾಗಿ ಶರತ್ ಕುಮಾರ್ ಬಡಾವು, ಜೊತೆಕೋಶಾಧಿಕಾರಿಯಾಗಿ ರೋಹನ್ ಪಡ್ನೂರು,ಸಂಘಟನಾ ಕಾರ್ಯದರ್ಶಿಯಾಗಿ ನಿತೇಶ್ ಪೂಜಾರಿ, ಸಾಮಾಜಿಕ ಜಾಲತಾಣ ಪ್ರಮುಖರಾಗಿ ಪ್ರಸಾದ್ ಸಮೃದ್ಧಿ ಪುತ್ತೂರು ಆಯ್ಕೆಯಾದರು.