ಪುತ್ತೂರು: ಪುತ್ತೂರು ತೆಂಕಿಲ ದಿ. ಶಿವರಾವ್ ಅವರ ಪತ್ನಿ ಮಂಗಳೂರಿನ ಕೆನರಾ ಹೆಣ್ಣು ಮಕ್ಕಳ ಪ್ರೌಢಶಾಲೆಯ ನಿವೃತ್ತ ಹಿಂದಿ ಶಿಕ್ಷಕಿ ಸುಶೀಲ ಶಿವ ರಾವ್(85ವ)ರವರು ನ.2ರಂದು ನಿಧನರಾದರು.
ಸುಶೀಲ ಶಿವ ರಾವ್ ಅವರು ಸುಮಾರು 32 ವರ್ಷಗಳ ಕಾಲ ಮಂಗಳೂರಿನ ಕೆನರಾ ಹೆಣ್ಣು ಮಕ್ಕಳ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದರು. ಮೃತರು ಪುತ್ರಿ ನೆಹರುನಗರ ನಿವಾಸಿ ಡಾ. ಜ್ಞಾನೇಶ್ವರಿ ಎಸ್ ಜೋಶಿ, ಅಳಿಯ ಪುತ್ತೂರು ಆದರ್ಶ ಆಸ್ಪತ್ರೆಯ ಆಡಳಿತ ಪಾಲುದಾರ ಡಾ. ಸುಬ್ರಹ್ಮಣ್ಯ ಎಸ್ ಜೋಶಿ, ಮೊಮ್ಮಕ್ಕಳಾದ ಡಾ.ಲಹರಿ, ಡಾ.ವಿಹಾರ್.ಎಸ್.ಜೋಶಿ ಹಾಗೂ ಇಬ್ಬರು ಮರಿಮೊಮ್ಮಕ್ಕಳಾದ ಮಂಜರಿ ಮತ್ತು ಗೌತಮ್ ಅವರನ್ನು ಅಗಲಿದ್ದಾರೆ.
