ಉಪ್ಪಿನಂಗಡಿ: ತಾವು ಮಾಡುವ ಉತ್ತಮ ಕಾರ್ಯದಿಂದ ಸಮಾಜದಲ್ಲಿ ಹೆಸರು ಶಾಶ್ವತವಾಗಿ ಉಳಿಯಬಹುದು ಎಂಬುದಕ್ಕೆ ದಿ. ಕುಕ್ಕುಂಜೋಡು ಸುಂದರ್ರಾಜ್ ರೈಯವರೇ ಸಾಕ್ಷಿ. ಅವರು ಇಂದು ನಮ್ಮನ್ನಗಲಿದರೂ ಅವರು ಮಾಡಿದ ಕೆಲಸಗಳು ಎಂದೆಂದಿಗೂ ಎಂದೆಂದಿಗೂ ಅವರ ಹೆಸರನ್ನು ನೆನಪಿಸುವಂತೆ ಮಾಡುತ್ತಿದೆ ಎಂದು ಪ್ರಗತಿಪರ ಕೃಷಿಕ ಕಡಮಜಲು ಸುಭಾಶ್ ರೈ ಹೇಳಿದರು.
ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ನ.3ರಂದು ನಡೆದ ಇತ್ತೀಚೆಗೆ ನಿಧನರಾದ ಕುಕ್ಕುಂಜೋಡು ಸುಂದರ್ರಾಜ್ ರೈ ಅವರ ವೈಕುಂಠ ಸಮಾರಾಧನೆ ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿ ಮಾತನಾಡುತ್ತಿದ್ದರು.

ಯಶಸ್ವಿ ಉದ್ಯಮಿಯಾಗಿದ್ದ ದಿ. ಕುಕ್ಕುಂಜೋಡು ಸುಂದರ್ರಾಜ್ ರೈಯವರು ಬೆಂಗಳೂರು ತುಳುಕೂಟದ ಅಧ್ಯಕ್ಷರಾಗಿದ್ದುಕೊಂಡು ತುಳುವರನ್ನು ಸಂಘಟಿಸಿದ್ದಲ್ಲದೆ, ತುಳು ಭಾಷೆ, ತುಳು ಸಂಸ್ಕೃತಿಯ ಉಳಿವಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅಲ್ಲದೇ, ಹಲವು ಸಮಾಜಮುಖಿ ಕೆಲಸಗಳನ್ನು ನಡೆಸಿದ್ದಾರೆ. ಅವರ ನಿಧನವು ಈ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಅಶೋಕ್ ಕುಮಾರ್ ರೈ, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಮಾಜಿ ಶಾಸಕ ಸಂಜೀವ ಮಠಂದೂರು, ಪ್ರಮುಖರಾದ ರಾಮಚಂದ್ರ ಬೈಕಂಪಾಡಿ, ಕಾವು ಹೇಮನಾಥ ಶೆಟ್ಟಿ, ಅರುಣ್ ಕುಮಾರ್ ಪುತ್ತಿಲ, ಎ.ಸಿ. ಭಂಡಾರಿ, ಮುರಳೀಧರ ರೈ ಮಠಂತಬೆಟ್ಟು, ಚಂದ್ರಹಾಸ ರೈ, ರಾಜಗೋಪಾಲ ರೈ ಮಂಗಳೂರು, ಬೂಡಿಯಾರ್ ಪುರುಷೋತ್ತಮ ರೈ, ಶಿವರಾಮ ಆಳ್ವ ಬಲ್ಲಮಜಲು, ಸುರೇಂದ್ರ ರೈ ಬಳ್ಳಮಜಲು, ರವೀಂದ್ರನಾಥ ರೈ ಬಳ್ಳಮಜಲು, ನರಿಮೊಗರು ಮೋಹನ ರೈ, ಪುರುಷೋತ್ತಮ ಮುಂಗ್ಲಿಮನೆ, ಕುಕ್ಕುಂಜೋಡು ಸುಂದರ್ರಾಜ್ ರೈಯವರ ಪತ್ನಿ ವಿದ್ಯಾ ರೈ, ಪುತ್ರಿ ಪೂರ್ವಿ ರೈ, ಮುಂಬೈಯ ಉದ್ಯಮಿ ಫೆಲಿಕ್ಸ್ ಡಿಸೋಜಾ, ಪ್ರೆಸ್ ಕ್ಲಬ್ ಮಾಜಿ ಅಧ್ಯಕ್ಷ ಆನಂದ್ ಶೆಟ್ಟಿ,  ಶ್ರೀನಿವಾಸ ಸೂಡ, ಬೆಂಗಳೂರು ತುಳುಕೂಟದ ಪದಾಧಿಕಾರಿಗಳು ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.