ಕಾಣಿಯೂರು: ದ.ಕ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಕಡಬ, ಸುಳ್ಯ ಇದರ ಆಶ್ರಯದಲ್ಲಿ ಕಡಬ, ಸುಳ್ಯ ತಾಲೂಕು ಮಟ್ಟದ 8ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕಾ ಕಾರ್ಯಕ್ರಮದ ಅಭಿಯಾನಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಮನೆಯಲ್ಲಿ ನ 4ರಂದು ಚಾಲನೆ ನೀಡಲಾಯಿತು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಚಾಲನೆ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಭರತ್ ನೆಕ್ರಾಜೆ, ಮುರುಳ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಾನಕಿ ಮುರುಳ್ಯ, ಗ್ರಾಮ ಪಂಚಾಯತ್ ಸದಸ್ಯ ಕರುಣಾಕರ ಹುದೇರಿ, ಮುರುಳ್ಯ ಎಣ್ಮೂರು ಸಿ. ಎ ಬ್ಯಾಂಕ್ ಅಧ್ಯಕ್ಷ ವಸಂತ ನಡುಬೈಲು, ಮಾಜಿ ಅಧ್ಯಕ್ಷ ವಸಂತ ಹುದೇರಿ, ಸುಳ್ಯ ಪಶುಸಂಗೋಪನ ಇಲಾಖೆಯ ತಾಲೂಕು ಅಧಿಕಾರಿ ಡಾ. ನಿತಿನ್ ಪ್ರಭು, ಮುರುಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಅಶೋಕ ಊರು ಸಾಗು, ಕಡಬ ತಾಲೂಕು ಪಶುಸಂಗೋಪನ ಇಲಾಖೆಯ ಅಧಿಕಾರಿ ಡಾ. ಅಜಿತ್, ಬೆಳ್ಳಾರೆ ಪಶು ಇಲಾಖೆಯ ವೈದ್ಯಾಧಿಕಾರಿ ಡಾ. ಸೂರ್ಯನಾರಾಯಣ, ಸುಳ್ಯ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಇಂದಿರಾ ಬಿ.ಕೆ, ವಿ ಎಸ್ ಎಸ್ ನಿರ್ದೇಶಕ ಮುತ್ತಪ್ಪ ಶಾಂತಿನಗರ,
ತಾಲೂಕಿನ ಪಶು ಸಂಗೋಪನೆಯ ಸಿಬ್ಬಂದಿ ವರ್ಗಗಳು ಮತ್ತು ಊರಿನ ಪ್ರಮುಖರು ಉಪಸ್ಥಿತರಿದ್ದರು.