ಶಾಂತಿಗೋಡು ಮಲೆಪಡ್ಪುವಿನಲ್ಲಿ ರಸ್ತೆಗೆ ಧರೆ ಕುಸಿದು ಚರಂಡಿಗೆ ಬಿದ್ದ ಮಣ್ಣು : ಶೀಘ್ರ ದುರಸ್ಥಿಗೆ ಆಗ್ರಹ

0

ಪುತ್ತೂರು: ಶಾಂತಿಗೋಡು ನರಿಮೊಗರು ಗ್ರಾಮ ಪಂಚಾಯತ್ ಆನಡ್ಕ-ಶಾಂತಿಗೋಡು ಸಂಪರ್ಕಿಸುವ ರಸ್ತೆಯಲ್ಲಿ ಅಲ್ಲಲ್ಲಿ ಧರೆ ಕುಸಿದ ಹಿನ್ನಲೆ ರಸ್ತೆಯ ಬದಿ ಚರಂಡಿಗೆ ಈ ಮಣ್ಣು ಬಿದ್ದಿದ್ದು, ಚರಂಡಿಯಲ್ಲಿ ನೀರು ತುಂಬಿರುವ ಕಾರಣ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಸಾರ್ವಜನಿಕ ಸಂಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ.

ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ರಸ್ತೆಯು ಕೇಸರಿನಿಂದ ಆವರಿಸಿಕೊಂಡಿದ್ದು, ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ರಸ್ತೆ ಬದಿಯ ಚರಂಡಿಗೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುವಂತೆ ಸಾರ್ವಜನಿಕರ ಆಗ್ರಹವಾಗಿದೆ.

ಕೇಸರಿನಿಂದ ಆವರಿಸಿರುವ ರಸ್ತೆಯಲ್ಲಿ ತೆರಳುವುದಕ್ಕೆ ಕಷ್ಟಕರವಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಶೀಘ್ರ ದುರಸ್ಥಿ ಕ್ರಮಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹವಾಗಿದೆ.

LEAVE A REPLY

Please enter your comment!
Please enter your name here