ನ.6-7ರಂದು ಕಡಬದಲ್ಲಿ ಬೃಹತ್ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ

0

ಕಡಬ: ಕಡಬ ತಾಲೂಕು ಪತ್ರಕರ್ತರ ಸಂಘದ ನೇತೃತ್ವದಲ್ಲಿ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಕಾರದೊಂದಿಗೆ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಸಹಯೋಗದಲ್ಲಿ ಬೃಹತ್ ಆಧಾರ್ ನೋಂದಣಿ ಹಾಗೂ ತಿದ್ದುಪಡಿ, ಅಪಘಾತ ಹಾಗೂ ಆರೋಗ್ಯ ವಿಮೆ ಶಿಬಿರ ನವೆಂಬರ್ 6ನೇ ಗುರುವಾರ ಹಾಗೂ 7ನೇ ಶುಕ್ರವಾರ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣ ನಡೆಯಲಿದೆ.


ಹೊಸ ಆಧಾರ್ ನೋಂದಣಿಗೆ ಜನನ ಪ್ರಮಾಣ ಪತ್ರ, ಪೋಷಕರ ಆಧಾರ್ ಕಾರ್ಡ್, ಮಗುವಿನ ಜೊತೆ ಪೋಷಕರು ಕಡ್ಡಾಯವಾಗಿ ಬರತಕ್ಕದ್ದು. (ವಿಶೇಷ ಸೂಚನೆ: ೧೮ ವರ್ಷದ ಒಳಗಿನವರಿಗೆ ಮಾತ್ರ ಹೊಸ ಆಧಾರ್ ನೋಂದಣಿ ಲಭ್ಯ). ಹೆಸರು ತಿದ್ದುಪಡಿಗೆ ಪಾನ್ ಕಾರ್ಡ್ ,ಪಾಸ್ ಪೋರ್ಟ್, ವೋಟರ್ ಐಡಿ, ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಎಸ್‌ಎಸ್‌ಎಲ್‌ಸಿ , ಪಿಯುಸಿ ಪ್ರಮಾಣ ಪತ್ರ. ಜನನ ಪ್ರಮಾಣ ಪತ್ರ ( ಹದಿನೆಂಟು ವರ್ಷದಿಂದ ಕೆಳಗಿನವರಿಗೆ ಮಾತ್ರ. ಜನ್ಮ ದಿನಾಂಕ ತಿದ್ದುಪಡಿಗೆ ಪಾಸ್ ಪೋರ್ಟ್, ಜನನ ಪ್ರಮಾಣ ಪತ್ರ, ಎಸ್‌ಎಸ್‌ಎಲ್‌ಸಿ , ಪಿಯುಸಿ ಪ್ರಮಾಣ ಪತ್ರ, ಪಿಂಚಣಿ ಪಾವತಿಯ ಆದೇಶದ ಮೂಲ ಪ್ರತಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸೇವಾ ಗುರುತಿನ ಚೀಟಿ. ವಿಳಾಸ ಬದಲಾವಣೆಗೆ ವೋಟರ್ ಐಡಿ, ಪಾಸ್ ಪೋರ್ಟ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್(ಬ್ಯಾಂಕ್ ಸೀಲ್ ಮತ್ತು ಫೋಟೋ, ವಾಸ್ತವ್ಯ ದೃಡೀಕರಣ ಪತ್ರ (ಸ್ಟಾಂಡರ್ಡ್ ಪ್ರಮಾಣ ಪತ್ರ) ಮುಂತಾದ ದಾಖಲೆಗಳನ್ನು ತರಬೇಕು. ಈಮೈಲ್ ತಿದ್ದುಪಡಿ, ಮೊಬೈಲ್ ಸಂಖ್ಯೆ ತಿದ್ದುಪಡಿ, ಮೊಬೈಲ್ ಸಂಖ್ಯೆ ತಿದ್ದುಪಡಿ ಇವುಗಳಿಗೆ ಹೆಚ್ಚಿನ ದಾಖಲೆಗಳ ಅಗತ್ಯವಿಲ್ಲ. ಶಿಬಿರದ ಸಮಯದಲ್ಲಿ ಕಡಬ ಸಮುದಾಯ ಆರೋಗ್ಯ ಕೇಂದ್ರದ ಸಹಕಾರದೊಂದಿಗೆ ರಕ್ತದೊತ್ತಡ ಹಾಗೂ ಮಧುಮೇಹ ಉಚಿತ ಪರೀಕ್ಷೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here