ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ʼಜಲ ಸಂರಕ್ಷಣೆʼ ಕುರಿತು ಉಪನ್ಯಾಸ ಕಾರ್ಯಕ್ರಮ

0

ಮುಂದಿನ ಪೀಳಿಗೆಗೆ ಜಲ ಮೂಲವನ್ನು ರಕ್ಷಿಸೋಣ – ನಾರಾಯಣ ಶೆಣೈ

ಪುತ್ತೂರು: ನ.5ರಂದು  ವಿವೇಕಾನಂದ ಆಂಗ್ಲ ಮಾಧ್ಯಮ  ಶಾಲಾ ಸಿಂಧೂರ ಸಭಾಂಗಣದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಭವಿಷ್ಯದ ಕನಸಿಗೆ ಹಸಿರಿನ ಹೆಜ್ಜೆ ಎಂಬ ಶೀರ್ಷಿಕೆ ಅಡಿಯಲ್ಲಿ ಜಲ ಸಂರಕ್ಷಣೆ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 

ಈ ಕುರಿತು ಮಣಿಪಾಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇದರ ಸಿವಿಲ್ ವಿಭಾಗದ ನಿವೃತ್ತ ಮುಖ್ಯಸ್ಥರಾದ ಪ್ರೊಫೆಸರ್ ಹಾಗೂ ಮಂಗಳೂರು ವಿಭಾಗ ಮಾನ್ಯ ಸಂಘಚಾಲಕ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾರಾಯಣ ಶೆಣೈ ಯವರು ನೀರಿನ ಕುರಿತು ರಸ ಪ್ರಶ್ನೆಗಳನ್ನು ಕೇಳಿ, ಹಾಗೂ ಬನ್ನಿ ಮೋಡಗಳೇ ಹಾಡಿನ ಮೂಲಕ ನೀರಿನ ಮಹತ್ವವನ್ನು ಮಕ್ಕಳಿಗೆ ವಿವರಿಸಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಹಿರಿಯ ಸದಸ್ಯರು ಹಾಗೂ ಪ್ರಗತಿಪರ ಕೃಷಿಕರು ಸೇಡಿಯಾಪು ಜನಾರ್ದನ ಭಟ್ ಮಾತನಾಡಿ, ನೀರು ನಮಗೆ ಅತ್ಯಮೂಲ್ಯ, ಮಳೆ ನೀರನ್ನು, ಹರಿಯುವ ನೀರನ್ನು ತಡೆ ಹಿಡಿದು ಸಂರಕ್ಷಿಸಬೇಕು, ದಕ್ಷಿಣ ಭಾಗ ನೀರು ಹರಿಯುವುದು ಪಶ್ಚಿಮ ಅಭಿಮುಖವಾಗಿ ಹರಿದು ಸಮುದ್ರವನ್ನು ಸೇರುತ್ತದೆ. ಹಾಗೆ ನೀರನ್ನು ವ್ಯರ್ಥ ಮಾಡಬಾರದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಸತೆ ವಹಿಸಿ ಮಾತನಾಡಿದ ವಿವೇಕಾನಂದ ಬಿ ಎಡ್ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಪ್ರಸನ್ನ ಭಟ್, ನೀರು ನಮಗೆ ದೇವರ ಸಮಾನ, ನೀರಿನಲ್ಲಿ ನಾವು ಗಂಗಾ ಮಾತೆಯನ್ನು ಕಂಡವರು. ನೀರು ಕೇವಲ H2O ಅಲ್ಲ, ಜೀವ ಜಲವಾಗಿದೆ ಎಂದು ಹೇಳಿದರು. ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ  ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಾಲಾ ಸಂಚಾಲಕರಾದ ರವಿನಾರಾಯಣ.ಎಂ ಪ್ರಾಸ್ತಾವಿಕ ಮಾತುಗಳನ್ನಾಡಿ, ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶಿಕ್ಷಕಿ ಯಶೋಧ ಸ್ವಾಗತಿಸಿ, ಶಿಕ್ಷಕರಾದ ಗಣೇಶ್  ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದಗಳನ್ನು ಅರ್ಪಿಸಿದರು.

LEAVE A REPLY

Please enter your comment!
Please enter your name here