ಪುತ್ತೂರು:ಶ್ರೀರಾಮ ಸಂಜೀವಿನಿ ಸವಣೂರು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮಾಸಿಕ ಸಭೆಯು ಪಂಚಾಯತ್ ಸಭಾಂಗಣ ‘ಕುಮಾರಧಾರ’ದಲ್ಲಿ ನಡೆಯಿತು.
ಒಕ್ಕೂಟದ ಅಧ್ಯಕ್ಷೆ ತಾ.ಪಂ.ಮಾಜಿ ಸದಸ್ಯೆ ವಿಜಯಈಶ್ವರ ಗೌಡ ಅಧ್ಯಕ್ಷತೆ ವಹಿಸಿದ್ದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತ ಶೆಟ್ಟಿ, ಕಾರ್ಯದರ್ಶಿ ಜಯಂತಿ,ಸಂಪನ್ಮೂಲ ವ್ಯಕ್ತಿಯಾಗಿದ್ದ ಗ್ರಾಮ ಪಂಚಾಯತ್ ಸದಸ್ಯ ಗಿರಿಶಂಕರ ಸುಲಾಯ,ಒಕ್ಕೂಟದ ಉಪಾಧ್ಯಕ್ಷೆ ದಮಯಂತಿ ಬಸ್ತಿ,ಕಾರ್ಯದರ್ಶಿ ಪೂರ್ಣಿಮಾ ಮಹೇಶ್,ಜೊತೆ ಕಾರ್ಯದರ್ಶಿ ಸುಶ್ಮಿತಾ ಉಪ್ಪಳಿಗೆ,ಕೋಶಾಧಿಕಾರಿ ಸರೋಜಿನಿ ಎಂ ಹಾಗೂ ವಲಯ ಮೇಲ್ವಿಚಾರಕಿ ಸುವಿನಾ ಉಪಸ್ಥಿತರಿದ್ದರು.

ಘನತ್ಯಾಜ್ಯ ಘಟಕದ ಬಗ್ಗೆ, ಸಮುದಾಯ ಬಂಡವಾಳ ನಿಧಿ ಸಾಲ ಮರುಪಾವತಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.ನಂತರ ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾನೂನು ಅರಿವು-ನೆರವು ಘಟಕದ ವತಿಯಿಂದ ಯುವ ಮತ್ತು ಮಹಿಳಾ ಸಬಲೀಕರಣ ಹಾಗೂ ನಾಗರಿಕ ಶಿಷ್ಟಾಚಾರದ ಅರಿವು ಕಾರ್ಯಕ್ರಮ ನಡೆಸಲಾಯಿತು.
ಗಿರಿಶಂಕರ ಸುಲಾಯರವರು ಮಾತನಾಡಿ,ಯುವ ಹಾಗೂ ಮಹಿಳೆಯರ ಸಬಲೀಕರಣ, ನಾಗರಿಕ ಶಿಷ್ಟಾಚಾರದ ಬಗ್ಗೆ, ಮಹಿಳಾ ಮೀಸಲಾತಿ ಬಗ್ಗೆ ಹಾಗೂ ಶ್ರೀರಾಮ ಸಂಜೀವಿನಿ ಒಕ್ಕೂಟದ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿದರು.ಒಕ್ಕೂಟದ ಪದಾಧಿಕಾರಿಗಳು,ಸಂಘದ ಸದಸ್ಯರು,ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ನಿರ್ದೇಶಕಿ ಮಮತಾ ರೈ ದೇವಸ್ಯ,ಘಟಕದ ಸಿಬ್ಬಂದಿಗಳು, ಗ್ರಂಥಪಾಲಕಿ ಶಾರದ,ವಿಆರ್‌ಡಬ್ಲ್ಯೂ ದೀಪಿಕಾ,ಎಂಬಿಕೆ,ಎಲ್‌ಸಿಆರ್‌ಪಿ,ಕೃಷಿ ಸಖಿ, ಪಶುಸಖಿ ಹಾಜರಿದ್ದರು.