ಪುತ್ತೂರು: ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ವಾಮದಪದವು ವಲಯ ಇಲ್ಲಿಯ ಬರೂಜ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ ಗೈಡ್ ಸಂಸ್ಥೆಯ ಸಂಸ್ಥಾಪನ ದಿನಾಚರಣೆಯನ್ನು ನ.7 ಶುಕ್ರವಾರದಂದು ಧ್ವಜ ಚೀಟಿ ಬಿಡುಗಡೆ ಮಾಡಿ, ಹಂಚುವ ಮೂಲಕ ಮತ್ತು ವಿವಿಧ ಚಟುವಟಿಕೆಗಳ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮವನ್ನು ಸ್ಕೌಟ್ ಗೈಡ್ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಶಾಲೆಯ ಸ್ಕೌಟ್ ವಿದ್ಯಾರ್ಥಿಗಳು ಗೆಜೆಟ್ ತಯಾರಿಸಿದರು. ಗೈಡ್ ವಿದ್ಯಾರ್ಥಿಗಳು ಗೈಡ್ ನಿಯಮಗಳನ್ನು ಪ್ರದರ್ಶಿಸಿದರು. ಕಬ್ ಬುಲ್ ಬುಲ್ ವಿದ್ಯಾರ್ಥಿಗಳು ಗಾಳಿಪಟ ತಯಾರಿಸಿ ಹಾರಿಸಿ ಸಂಭ್ರಮಿಸಿದರು. ನಂತರ ಎಲ್ಲಾ ವಿದ್ಯಾರ್ಥಿಗಳು ಜಾಥ ಹೊರಟರು. ಗೈಡ್ ಕ್ಯಾಪ್ಟನ್ ಚಂದ್ರಾವತಿ ಸಂಸ್ಥಾಪನ ದಿನಾಚರಣೆ ಬಗ್ಗೆ ವಿವರಿಸಿದರು. ಸ್ಕೌಟ್ ಗೈಡ್, ಕಬ್ ಬುಲ್ ಬುಲ್ ಶಿಕ್ಷಕರು ಉಪಸ್ಥಿತರಿದ್ದರು.