ಕೂರ್ನಡ್ಕದಲ್ಲಿ ಶರು ಫೊಟೋಗ್ರಫಿ ಮತ್ತು ವೀಡಿಯೋಗ್ರಫಿ ಸ್ಟುಡಿಯೋ ಶುಭಾರಂಭ

0

ಪುತ್ತೂರು: ಕೂರ್ನಡ್ಕ ಪೇಟೆಯ ಎಸ್.ಎಂ ಸಂಕೀರ್ಣದಲ್ಲಿ ಶರತ್‌ ಇವರ ಮಾಲಕತ್ವದ ಶರು ಫೊಟೋಗ್ರಫಿ ಮತ್ತು ವೀಡಿಯೋಗ್ರಫಿ ಸ್ಟುಡಿಯೋ ನ.7 ರಂದು ಧಾರ್ಮಿಕ ಕೈಂಕರ್ಯದೊಂದಿಗೆ ಶುಭಾರಂಭಗೊಂಡಿತು.

ಬಪ್ಪಳಿಗೆ ರಾಗಿಕುಮೇರಿನ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ, ಮಾಲಕ ಶರತ್‌ ರವರಿಗೆ ವಿದ್ಯೆ ಕಲಿಸಿದ ಗುರು ಮಹಾಲಕ್ಷ್ಮಿ ಇವರು ಸಂಸ್ಥೆಯ ಉದ್ಘಾಟನೆ ನೆರವೇರಿಸಿ, ದೀಪ ಪ್ರಜ್ವಲನೆ ಮಾಡಿ ಬಳಿಕ ಮಾತನಾಡಿ, ಶರತ್‌ ನನ್ನ ವಿದ್ಯಾರ್ಥಿಯಾಗಿದ್ದು, ನಾನು ಅವನಿಗೆ ಒಂದನೇ ತರಗತಿಯಲ್ಲಿ ಪಾಠವನ್ನು ಹೇಳಿಕೊಡುತ್ತಿದ್ದೆ. ಇದೀಗ ತನ್ನ ತಾಯಿಯ ನೆನಪಿಗಾಗಿ ನನ್ನನ್ನು ಆಹ್ವಾನಿಸಿದ್ದಾನೆ. ಆರಂಭಿಸಿರುವ ವ್ಯವಹಾರಕ್ಕೆ ಭಗವಂತನ ಆಶೀರ್ವಾದ ಸದಾ ಸಿಗಲಿ ಎಂದು ಹೇಳಿ ಹಾರೈಸಿದರು.

ಪುತ್ತಿಲ ಪರಿವಾರದ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ಫೊಟೋಗ್ರಫಿ ಫೀಲ್ಡಿನಲ್ಲಿ ಕೆಲಸ ನಿರ್ವಹಿಸಿ, ಹೊಸ ತಂತ್ರಜ್ಞಾನದ ಮೂಲಕ ಸ್ಪರ್ದೆ ಇರುವಂತಹ ಇಂದಿನ ಕಾಲಘಟ್ಟದಲ್ಲಿ ಜನರ ಪ್ರೀತಿ, ವಿಶ್ವಾಸದಿಂದ ಸಂಸ್ಥೆ ಯಶಸ್ಸು ಕಾಣಲಿ ಎಂದು ಹಾರೈಸಿದರು.

ಚಲನಚಿತ್ರ ವಿತರಕ ಬಾಲಕೃಷ್ಣ ರೈ ಕುದ್ಕಾಡಿ , ಬೊಂಬಾಟ್‌ ಸಿನಿಮಾದ ಯೂಟ್ಯೂಬ್‌ ಚಾನೆಲ್‌ ಮುಖ್ಯಸ್ಥ ಸೂರಜ್‌ ಮಂಗಳೂರು ಕೂಡ ಶುಭಹಾರೈಸಿದರು. ಸೌತ್‌ ಕೆನರಾ ಫೊಟೋಗ್ರಾಫರ್‌ ಅಸೋಸಿಯೇಶನ್‌ ತಾಲೂಕು ಅಧ್ಯಕ್ಷ ಜಯಂತ್‌ ಗೌಡ, ಪುರಸಭೆಯ ಮಾಜಿ ಅಧ್ಯಕ್ಷ ರಾಜೇಶ್‌ ಬನ್ನೂರು, ಗಗನ್‌, ಗೌತಮ್‌, ಕಾರ್ತಿಕ್‌, ವಿನೋದ್‌ ತಲಪಾಡಿ ಸಹಿತ ಹಲವು ಅತಿಥಿಗಳು ಹಾಜರಿದ್ದರು. ಶರತ್‌ ರವರ ದೊಡ್ಡಪ್ಪ ರಮೇಶ್ ಕೃಷ್ಣನಗರ ಮತ್ತು ಚಿಕ್ಕಮ್ಮ ದಿವ್ಯಾ ಮರೀಲ್‌ ಸಹಕಾರ ನೀಡಿದರು.


ಶರತ್ ರವರು ಎಲ್ಲರನ್ನೂ ಸ್ವಾಗತಿಸಿ, ಬಳಿಕ ಮಾತನಾಡಿ ನಮ್ಮಲ್ಲಿ ಫೊಟೋಗ್ರಫಿ ಮತ್ತು ವೀಡಿಯೋಗ್ರಫಿ, ಆಲ್ಬಂ ಡಿಸೈನ್ಸ್‌, ವಿಡಿಯೋ ಎಡಿಟಿಂಗ್‌ ಮತ್ತು ಫೊಟೋ ಫ್ರೇಮ್‌ ಸೇವೆಗಳು ತ್ವರಿತ ಮತ್ತು ಸ್ಪರ್ದಾತ್ಮಕ ದರದಲ್ಲಿ ಸಿಗಲಿವೆ ಎಂದು ತಿಳಿಸಿ ಸಹಕಾರ ನೀಡುವಂತೆ ಕೋರಿದರು.

LEAVE A REPLY

Please enter your comment!
Please enter your name here