ಪುತ್ತೂರು:ಈ ಬಾರಿಯ ಆಕ್ಷನ್ ಪ್ಲ್ಯಾನ್‌ನಲ್ಲಿ ಕರ್ನಾಟಕಕ್ಕೆ ಯಾವುದೇ ರಸ್ತೆ ಸೇರಿಸಿಲ್ಲ.ಆದರೂ ಮಾಣಿ-ಸಂಪಾಜೆ ರಸ್ತೆಯನ್ನು ಆದಷ್ಟು ಶೀಘ್ರ ಸೇರಿಸುವ ಪ್ರಯತ್ನ ಮಾಡುವುದಾಗಿ ದ.ಕ.ಸಂಸದ ಕ್ಯಾ|ಬ್ರಿಜೇಶ್ ಚೌಟ ಅವರು ಹೇಳಿದ್ದಾರೆ.
ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ನ.7ರಂದು ‘ಅಟಲ್ ವಿರಾಸತ್’ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ಆಗಮಿಸಿದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.ಮಾಣಿ ಸಂಪಾಜೆ ಚುತುಷ್ಪಥ ರಸ್ತೆ ರಾಜ್ಯ ಸರಕಾರ ಮಾಡಿದ್ದಲ್ಲ.ಏಜೆನ್ಸಿ ಚಾರ್ಜ್ ಮೂಲಕ ಡಿಪಿಆರ್ ಆಗಿರುವುದು ಇದು ಸ್ಪಷ್ಟವಾಗಿರಲಿ.ಡಿಪಿಆರ್ ಹಂತಕ್ಕೆ ಬಂದಿದೆ.ಆದರೆ ಈ ಬಾರಿಯ ಆಕ್ಷನ್ ಪ್ಲ್ಯಾನ್‌ನಲ್ಲಿ ಕರ್ನಾಟಕಕ್ಕೆ ಯಾವುದೇ ರಸ್ತೆ ಸೇರಿಸಿಲ್ಲ. ಆದರೆ ಈ ರಸ್ತೆಯನ್ನು ಆಕ್ಷನ್ ಪ್ಲ್ಯಾನ್‌ನಲ್ಲಿ ಸೇರಿಸುವಂತೆ ಕೇಂದ್ರದ ಹೆದ್ದಾರಿ ಸಚಿವರು ಮತ್ತು ಕಾರ್ಯದರ್ಶಿಗೆ ಮನವಿ ಮಾಡಿದ್ದು, ಅಶಾದಾಯಕವಾಗಿದ್ದೇವೆ.ನಾವು ಅದನ್ನು ಇನ್ನೂ ಪಾಲೋಅಪ್ ಮಾಡುತ್ತಿದ್ದೇವೆ.ಮಾಣಿ ಸಂಪಾಜೆ ರಸ್ತೆಯನ್ನು ಆದಷ್ಟು ಶೀಘ್ರ ಸೇರಿಸುವ ಪ್ರಯತ್ನ ಮಾಡುತ್ತೇನೆ ಎಂದವರು ಹೇಳಿದರು.
ತಡವಾದ ಪ್ರಯಾಣಿಕ ರೈಲು-ದೂರು:ರೈಲ್ವೇ ಬೋರ್ಡ್‌ಗೆ ತಿಳಿಸಿದ್ದೇನೆ
ಸುಬ್ರಹ್ಮಣ್ಯ ಪ್ರಯಾಣಿಕರ ರೈಲು ತಡವಾಗುತ್ತಿದೆ ಮತ್ತು ಗೂಡ್ಸ್ ಗಾಡಿಯನ್ನು ಬಿಡುತ್ತಾರೆಂಬ ದೂರಿಗೆ ಸಂಬಂಧಿಸಿ ಈಗಾಗಲೇ ರೈಲ್ವೇ ಬೋರ್ಡ್‌ಗೆ ಕಮ್ಯುನಿಕೇಟ್ ಮಾಡಿದ್ದೇನೆ.ಸಕಲೇಶಪುರ ಘಾಟ್ ರಸ್ತೆಯಲ್ಲಿ ವಿದ್ಯುತ್ ಚಾಲಿತ ರೈಲಿಗಾಗಿ ಕಾಮಗಾರಿಗಳು ವಿಳಂಬವಾಗಿಲ್ಲ.ಮಳೆಯ ಕಾರಣ ತೊಂದರೆ ಆಗಿತ್ತು.ಡಿಸೆಂಬರ್ ತಿಂಗಳಲ್ಲಿ ಮುಗಿಯಲಿದೆ ಎಂದರು.
