ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ

0

ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್., ಕಾರ್ಯದರ್ಶಿಯಾಗಿ ಸಿದ್ದಿಕ್ ನೀರಾಜೆ, ರಾಜ್ಯ ಕಾರ್ಯಕಾರಿಣಿ ಸಮಿತಿಗೆ ಶ್ರೀನಿವಾಸ ನಾಯಕ್ ಆಯ್ಕೆ

ಪುತ್ತೂರು: ಮುಂದಿನ ಮೂರು ವರ್ಷಗಳ ಅವಧಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪದಾಧಿಕಾರಿಗಳ ಹಾಗೂ ಕಾರ್ಯಕಾರಿಣಿ ಸಮಿತಿಗೆ ಸದಸ್ಯರ ಆಯ್ಕೆಗೆ ನ.9ರಂದು ಮಂಗಳೂರಿನಲ್ಲಿರುವ ದ.ಕ.ಜಿಲ್ಲಾ ವಾರ್ತಾ ಇಲಾಖೆಯ ಸಭಾಂಗಣದಲ್ಲಿ ಚುನಾವಣೆ ನಡೆಯಿತು.


ಬೆಳಿಗ್ಗೆ 9ರಿಂದ ಸಂಜೆ 3 ಗಂಟೆ ತನಕ ಚುನಾವಣೆ ನಡೆದು ಬಳಿಕ ಮತ ಎಣಿಕೆ ನಡೆಯಿತು. ಅಧ್ಯಕ್ಷರಾಗಿ ವಾರ್ತಾಭಾರತಿಯ ಮಂಗಳೂರು ಚೀಫ್ ಬ್ಯೂರೋ, ಕಡಬ ತಾಲೂಕಿನ ಕೊಯಿಲ ನಿವಾಸಿ ಪುಷ್ಪರಾಜ್ ಬಿ.ಎನ್. ಚುನಾಯಿತರಾಗಿದ್ದಾರೆ. ಪುಷ್ಪರಾಜ್ ಅವರು 187 ಮತಗಳನ್ನು ಪಡೆದುಕೊಂಡಿದ್ದು ಇವರ ಪ್ರತಿಸ್ಪರ್ಧಿಯಾಗಿದ್ದ ವಿಜಯವಾಣಿಯ ಮಂಗಳೂರು ಹಿರಿಯ ವರದಿಗಾರ ಶ್ರವಣ್ ಕುಮಾರ್ ಕೆ. 144 ಮತ ಪಡೆದು ಪರಾಭವಗೊಂಡಿದ್ದಾರೆ.


3 ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮುಹಮ್ಮದ್ ಆರೀಫ್-180, ವಿಲ್ರೆಡ್ ಡಿ ಸೋಜ-177, ರಾಜೇಶ್ ಶೆಟ್ಟಿ-147 ಮತ ಪಡೆದು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಐ.ಬಿ ಸಂದೀಪ್ ಕುಮಾರ್-136 ಹಾಗೂ ಗಂಗಾಧರ ಕಲ್ಲಪ್ಪಳ್ಳಿ-126 ಮತಗಳನ್ನು ಪಡೆದುಕೊಂಡಿದ್ದಾರೆ. 3 ಕಾರ್ಯದರ್ಶಿ ಸ್ಥಾನಗಳಿಗೆ ನಡೆದ ಸ್ಪರ್ಧೆಯಲ್ಲಿ ಸತೀಶ್ ಇರಾ-256, ಸುರೇಶ್ ಡಿ.ಪಳ್ಳಿ-218, ಎ. ಸಿದ್ದಿಕ್ ನೀರಾಜೆ-165 ಮತ ಪಡೆದು ಜಯಗಳಿಸಿದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ರಾಜೇಶ್ ಕುಮಾರ್ ಡಿ.139 ಮತ ಪಡೆದುಕೊಂಡಿದ್ದಾರೆ. ರಾಜ್ಯ ಕಾರ್ಯಕಾರಿಣಿ ಸಮಿತಿಯ 1 ಸ್ಥಾನಕ್ಕೆ ಹಾಲಿ ಅಧ್ಯಕ್ಷ ಶ್ರೀನಿವಾಸ ನಾಯಕ್ ಕೆ.204 ಮತ ಪಡೆದು ಜಯಗಳಿಸಿದ್ದಾರೆ. ಇವರ ಪ್ರತಿಸ್ಪರ್ಧಿಯಾಗಿದ್ದ ಮಹಮ್ಮದ್ ಅನ್ಸಾರ್ ಇನೋಳಿ 124 ಮತ ಪಡೆದುಕೊಂಡಿದ್ದಾರೆ.‌


ಜಿಲ್ಲಾ ಕಾರ್ಯಕಾರಿ ಸಮಿತಿಯ 15 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಂದೀಪ್ ವಾಗ್ಲೆ-217, ದಿವಾಕರ ಪದ್ಮುಂಜ-201, ಭುವನೇಶ್ವರ ಜಿ.-199, ಸಂದೇಶ್ ಜಾರ-195, ಹರೀಶ್ ಮೋಟುಕಾನ-186, ಜಯಶ್ರೀ-184, ಸಂದೀಪ್ ಸಾಲ್ಯಾನ್-171, ಲಕ್ಷ್ಮೀನಾರಾಯಣ ರಾವ್-163, ಹರೀಶ್ ಕೆ.ಆದೂರು-152, ಸಂದೀಪ್ ಕುಮಾರ್ ಎಂ.-145, ಗಿರೀಶ್ ಅಡ್ಪಂಗಾಯ-141, ಅಶೋಕ್ ಶೆಟ್ಟಿ ಬಿ.ಎನ್-135, ಆರಿಫ್ ಕಲ್ಕಟ್ಟ-133, ಅಭಿಷೇಕ್ ಎಚ್.ಎಸ್-126 ಹಾಗೂ ಕಿರಣ್ ಯು ಸಿರ್ಸಿಕರ್-122 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪ್ರಕಾಶ್ ಸುವರ್ಣ-117, ಶಶಿಧರ ಬಂಗೇರ-115, ಪ್ರವೀಣ್ ರಾಜ್ ಕೆ.ಎಸ್-114, ಲೋಕೇಶ್ ಸುರತ್ಕಲ್-116, ಶೇಖ್ ಜೈನುದ್ದೀನ್-94 ಮತ್ತು ಮಂಜುನಾಥ ಕೆ.ಪಿ-49 ಮತ ಪಡೆದುಕೊಂಡಿದ್ದಾರೆ.‌


ಚುನಾವಣಾಧಿಕಾರಿಯಾಗಿದ್ದ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆಗಳು ನಡೆಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೇಶ್ ಕೆ. ಪೂಜಾರಿ ಹಾಗೂ ಕೋಶಾಧಿಕಾರಿ ಹುದ್ದೆಗೆ ವಿಜಯ ಕೋಟ್ಯಾನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಸಂಘದ ಒಟ್ಟು 23 ಸ್ಥಾನಗಳಿಗೆ 34 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು.

LEAVE A REPLY

Please enter your comment!
Please enter your name here