ಶ್ರೀ ಕ್ಷೇತ್ರ ಗೆಜ್ಜಗಿರಿ ಸಮಾಜದ ಶಕ್ತಿ ಮತ್ತು ಭಕ್ತಿಯ ಕೇಂದ್ರ- ಹರೀಶ್ ಜಿ ಅಮೀನ್
ಬಡಗನ್ನೂರು: ಗೆಜ್ಜೆಗಿರಿ ಕ್ಷೇತ್ರ ಆಡಳಿತ ಸಮಿತಿಯ ಮತ್ತು ಗೆಜ್ಜೆಗಿರಿ ಅಭಿವೃದ್ಧಿ ಟ್ರಸ್ಟಿನ ನಿಯೋಗ ಮುಂಬಯಿ ಸಾಂತಾಕ್ರೂಜ್, ಬಿಲ್ಲವ ಭವನಕ್ಕೆ ಭೇಟಿ ನೀಡಿ ಶ್ರೀ ಕ್ಷೇತ್ರದ ಭಕ್ತಾಧಿಗಳ ಸೇವೆಗಾಗಿ ನಿರ್ಮಾಣಗೊಳ್ಳುತ್ತಿರುವ ಯಾತ್ರಿ ನಿವಾಸದ ನೂತನ ಕಟ್ಟಡಗಳ ಶಿಲನ್ಯಾಸ ಕಾರ್ಯಕ್ರಮದ ಪೂರ್ವಿಭಾವಿ ಸಭೆ ಮತ್ತು ಆಮಂತ್ರಣ ಪತ್ರಿಕೆಯ ಬಿಡುಗಡೆ ಮಾಡಲಾಯಿತು. ಮುಂಬಯಿ ಬಿಲ್ಲವ ಅಸೋಸಿಯೇಷನ್ ನ ಅಧ್ಯಕ್ಷ ಹರೀಶ್ ಜಿ ಅಮೀನ್ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕ್ಷೇತ್ರಾಡಳಿತ ಸಮಿತಿ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ ಮಾತನಾಡಿ ಸಮಾಜ ಬಾಂಧವರು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಾನಿಧ್ಯ ಶಕ್ತಿಗಳ ಅನುಗ್ರಹಕ್ಕೆ ಪಾತ್ರರಾಗುವಂತೆ ಕೋರಿದರು.

ಬಳಿಕ ಮಾತನಾಡಿದ ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ಹರೀಶ್ ಜಿ ಅಮೀನ್ ರವರು ಈ ಸಂದರ್ಭದಲ್ಲಿ 20 ಲಕ್ಷ ರೂಪಾಯಿಗಳ ನೆರವನ್ನು ಒದಗಿಸುವುದರೊಂದಿಗೆ 10 ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ಸಹಕಾರವನ್ನು ನೀಡುವ ಭರವಸೆಯನ್ನು ನೀಡಿದ ಅವರು ತನು ಮನ ಧನದ ಸಹಕಾರ ನೀಡುವಂತೆ ಸಮಾಜ ಬಾಂಧವರು ಮನವಿ ಮಾಡಿದರು. ಈ ವೇಳೆ ಅಮೃತ ಮಹೋತ್ಸವ ಆಚರಿಸುತ್ತಿರುವ ಪೀತಾಂಬರ ಹೆರಾಜೆ ರವರನ್ನು ಬಿಲ್ಲವ ಅಸೋಸಿಯೇಷನ್ ವತಿಯಿಂದ ಸಾಲು ಹೊದಿಸಿ ಹೂ ಗೂಚ್ಚ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಭಿವೃದ್ಧಿ ಟ್ರಸ್ಟಿನ ಗೌರವಾಧ್ಯಕ್ಷ ಡಾ.ರಾಜಶೇಖರ್ ಕೋಟ್ಯಾನ್, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಎನ್ ಟಿ ಪೂಜಾರಿ, ಉದ್ಯಮಿಗಳಾದ ಗಂಗಾಧರ ಅಮಿನ್, ಬಿಲ್ಲವ ಅಸೋಸಿಯೇಷನ್ ನ ಗೌರವಾಧ್ಯಕ್ಷ ಎಲ್ ವಿ ಅಮಿನ್, ಉಪಾಧ್ಯಕ್ಷ ಪುರುಷೋತ್ತಮ್ ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಸಾಲಿಯಾನ್, ಶ್ರೀ ಕ್ಷೇತ್ರ ಗೆಜ್ಜೆಗಿರಿ ಅಭಿವೃದ್ಧಿ ಟ್ರಸ್ಟಿನ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವಾ, ಉಪಾಧ್ಯಕ್ಷ ದೀಪಕ್ ಕೋಟ್ಯಾನ್, ಕೋಶಾಧಿಕಾರಿ ಹರೀಶ್ ಸಾಲಿಯಾನ್ ಬಜಗೋಳಿ, ಕ್ಷೇತ್ರಾಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ|ರಾಜಾರಾಮ್ ಕೆ ಬಿ, ಜೊತೆ ಕಾರ್ಯದರ್ಶಿ ಡಾ.ಸಂತೋಷ್ ಕುಮಾರ್ ಬೈರಂಪಳ್ಳಿ, ಟ್ರಸ್ಟಿ, ವಾಸ್ತುಶಿಲ್ಪಿ ಪ್ರಮಲ್ ಕುಮಾರ್ ಕಾರ್ಕಳ, ಟ್ರಸ್ಟಿಗಳಾದ ಕುಮಾರ್ ಇರುವೈಲ್, ಸುರೇಶ್ ಪೂಜಾರಿ, ನೀಲೇಶ್ ಪೂಜಾರಿ ಹಾಗೂ ಸ್ಥಳೀಯ 22 ಬಿಲ್ಲವ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಮುಖಂಡರು, ಮುಂಬಯಿನ ಇತರ ಸಮಾಜ ಬಾಂಧವರು ಉಪಸ್ಥಿತರಿದ್ದರು.