ಪುತ್ತೂರು: ಬೆಳಂದೂರು ಈಡನ್ ಗ್ಲೋಬಲ್ ಶಾಲೆಯಲ್ಲಿ ಈಡನ್ ಗ್ಲಾಂಝಾ-25, ಎರಡು ದಿನಗಳ ಮಿಲಾದ್ ಕಾರ್ಯಕ್ರಮ ನಡೆಯಿತು.
ಮೊದಲನೇ ದಿನ ಝಿದಾನ್ ಅಹ್ಮದ್ ಪ್ರಾರ್ಥನೆಯ ಮೂಲಕ ಕಾರ್ಯಕರ್ಮಕ್ಕೆ ಚಾಲನೆ ನೀಡಲಾಯಿತು. ಬೆಳಂದೂರು ಗ್ರಾ.ಪಂ ಅಧ್ಯಕ್ಷೆ ತೇಜಾಕ್ಷಿ ಕೊಡಂಗೇರಿ ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕರ್ಮ ಉದ್ಘಾಟಿಸಿದರು. ಸಂಸ್ಥೆಯ ಆಡಳಿತ ಸಮಿತಿಯ ಅಧ್ಯಕ್ಷ ಅಶ್ರಫ್ ಶಾ ಮಂತೂರು ಅಧ್ಯಕ್ಷೀಯ ಭಾಷಣ ಮಾಡಿದರು. ಅತಿಥಿಯಾಗಿ ಆಗಮಿಸಿದ ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್ ಮುಹಮ್ಮದ್ ಮಾತನಾಡಿದರು.
ಸಂಸ್ಥೆಯ ಕಾರ್ಯದರ್ಶಿ ಬಶೀರ್ ಹಾಜಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಸಂಸ್ಥೆಯ ಲೋಜಿ ಕಿಡ್ಸ್ ಪರೀಕ್ಷಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಆಡಳಿತ ಸಮಿತಿ ಸದಸ್ಯರಾದ ಪುತ್ತುಬಾವ ಹಾಜಿ, ಇಸ್ಮಾಯಿಲ್ ಹಾಜಿ, ಅಬ್ಬಾಸ್ ಬಾವ ಹಾಜಿ, ಕಾಣಿಯೂರು ಕ್ಲಸ್ಟರ್ ಸಿಆರ್ಪಿ ಯಶೋಧಾ, ಪತ್ರಕರ್ತ ಯೂಸುಫ್ ರೆಂಜಲಾಡಿ, ಖ್ಯಾತ ತರಬೇತುದಾರ ರಫೀಕ್ ಮಾಸ್ಟರ್, ಸವಣೂರು ಗ್ರಾ.ಪಂ ಸದಸ್ಯ ರಝಾಕ್ ಕೆನರಾ, ಬೆಳಂದೂರು ಗ್ರಾ.ಪಂ ಸದಸ್ಯ ಮೋಹನ ಅಗಳಿ, ಬೆಳಂದೂರು ಗ್ರಾ.ಪಂ ಉಪಾಧ್ಯಕ್ಷ ಜಯಂತ್ ಹಾಗೂ ಸದಸ್ಯರಾದ ಉಮೇಶ್ವರಿ, ಕುಸುಮಾ, ವಿಠಲ್ ಗೌಡ, ತಾರ ಅನ್ಯಾಡಿ, ಉದ್ಯಮಿ ಸಮದ್ ಸೊಂಪಾಡಿ, ಬೆಳಂದೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನಾರಾಯಣ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಪ್ರಶಾಂತಿ ಮೊದಲಾದವರು ಶುಭ ಹಾರೈಸಿದರು.
ಕೈ ಬರಹದಲ್ಲಿ ಖುರ್ಆನ್ ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದ ಸಜ್ಲಾ ಇಸ್ಮಾಯಿಲ್ ಬೈತಡ್ಕ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ನಂತರ ವರ್ಣರಂಜಿತ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಕ್ಕಳಿಂದ ಹಾಡು, ಭಾಷಣ, ದಫ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪೋಷಕರು, ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲರಾದ ರಂಝೀ ಮುಹಮ್ಮದ್ ಸ್ವಾಗತಿಸಿದರು. ಶಿಕ್ಷಕಿಯರಾದ ಲಾವಣ್ಯ ಮತ್ತು ಫಾತಿಮಾ ನಾದಿಯಾ ಕಾರ್ಯಕ್ರಮ ನಿರೂಪಿಸಿದರು. ಶ್ರುತಿ ಶೆಟ್ಟಿ ವಂದಿಸಿದರು.
ಎರಡನೇ ದಿನದ ಕಾರ್ಯಕ್ರಮಕ್ಕೆ ವಿದ್ಯಾರ್ಥಿ ಮುಹಮ್ಮದ್ ತಮೀಮ್ ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸವಣೂರು ಚಾಪಳ್ಳ ಜುಮಾ ಮಸ್ಜಿದ್ನ ಗೌರವಾಧ್ಯಕ್ಷ ಸಯ್ಯದ್ ಹಾಮಿದುಲ್ ಹಾದಿ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಅಶ್ರಫ್ ಶಾ ಮಂತೂರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಾಲಾ ಅಭಿವೃದ್ಧಿಯ ಕುರಿತು ಮಾತನಾಡಿದರು. ಬೈತಡ್ಕ ಜುಮಾ ಮಸೀದಿ ಖತೀಬ್ ಸಫ್ವಾನ್ ಜೌಹರಿ ಹಾಗೂ ಸವಣೂರು ಚಾಪಳ್ಳ ಜುಮಾ ಮಸೀದಿಯ ಖತೀಬ್ ಅಶ್ರಫ್ ಬಾಖವಿ ಮಾತಾನಾಡಿದರು.
ಏಳನೇ ತರಗತಿ ಮದರಸ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ ರಾಂಕ್ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಅವರ ಶಿಕ್ಷಕರಾದ ಹಮೀದ್ ಸಖಾಫಿಯವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಆಡಳಿತ ಸಮಿತಿಯ ಕಾರ್ಯದರ್ಶಿ ಬಶೀರ್ ಹಾಜಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ನಂತರ ೨೦೨೪-೨೫ ನೇ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ಸಿ ಸಾಧಕರಿಗೆ ಮತ್ತು ಹಿಂದಿ ರಾಷ್ಟ್ರಭಾಷಾ ಸೇವಾ ರತ್ನ ಪುರಸ್ಕೃತ, ಸಂಸ್ಥೆಯ ಹಿಂದಿ ಶಿಕ್ಷಕ ಇಮ್ತಿಯಾಝ್ ಸಿ ಎಂ ಅವರ ಭಾಷಾ ಸಾಧನೆಯನ್ನು ಗುರುತಿಸಿ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಕಳೆದ ವರ್ಷ ಮದರಸ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಂಸ್ಥೆಯ ಆಡಳಿತ ಸಮಿತಿ ಸದಸ್ಯರಾದ ಇಸ್ಮಾಯಿಲ್ ಹಾಜಿ, ಅಬ್ಬಾಸ್ ಬಾವ ಹಾಜಿ, ಪುತ್ತುಬಾವ ಹಾಜಿ ಮತ್ತು ಮುಹಮ್ಮದ್ ಹಾಜಿ ಎಡಪದವು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೈತಡ್ಕ ಜುಮಾ ಮಸೀದಿಯ ಅಧ್ಯಕ್ಷರಾದ ಮೊಹಮ್ಮದ್ ಇಕ್ಬಾಲ್ ಹಾಜಿ, ಬೆಳಂದೂರು ಜುಮಾ ಮಸೀದಿ ಅಧ್ಯಕ್ಷ ಉಪ್ಪಂಜಿ ಹಾಜಿ, ಅಲ್-ಬಿರ್ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ನೂರ್ ಮುಹಮ್ಮದ್, ಎಸ್ ಎಂ ಮುಹಮ್ಮದ್ ಹಾಜಿ ಮಾಂತೂರು, ಸವಣೂರು ಗ್ರಾ.ಪಂ ಸದಸ್ಯ ಸದಸ್ಯ ಎಂ ಎ ರಫೀಕ್, ಕೆವಿವಿಇಎಸ್ ಕೋಝಿಕೋಡ್ ಇದರ ಅಧ್ಯಕ್ಷ ಮುಹಮ್ಮದ್ ಹಾಜಿ, ಎಂಪಿಸ್ ಸರ್ಜಿಕಲ್ ಗ್ರೂಪ್ ಇದರ ವ್ಯವಸ್ಥಾಪಕ ನಿರ್ದೇಶಕ ಎಂ ಪಿ ಇಬ್ರಾಹಿಂ, ಬೈತಡ್ಕ ಜುಮಾ ಮಸೀದಿಯ ಕಾರ್ಯದರ್ಶಿ ಸಿದ್ದೀಕ್ ಅಲಕ್ಕಾಡಿ, ಪೋಷಕ ಪ್ರತಿನಿಧಿ ಮನ್ಸೂರ್ ಸವಣೂರು, ಹಳೆ ವಿದ್ಯಾರ್ಥಿ ಪ್ರತಿನಿಧಿ ಉಕ್ಕಾಶ್ ಬೈತಡ್ಕ ಉಪಸ್ಥಿತರಿದ್ದರು.
ಅತಿಥಿಗಳನ್ನು ಆಡಳಿತ ಸಮಿತಿಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಂತರ ಮಕ್ಕಳ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಹಾಡು, ಭಾಷಣ, ದಫ್, ನಶೀದಾ ಬುರ್ದಾ ಮತ್ತು ಕವ್ವಾಲಿ ಸ್ಪರ್ಧೆಗಳು ನಡೆಯಿತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈಡನ್ ಗ್ಲಾಂಝಾ ಕಾರ್ಯಕ್ರಮದ ಶಾಲಾ ನಾಲ್ಕು ತಂಡಗಳಲ್ಲಿ ಎಲೆಕ್ಟ್ರಮ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಡೈಮಂಡ್ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು. ಆಡಳಿತ ಸಮಿತಿಯ ಸದಸ್ಯರಾದ ನಿಝಾರ್ ದರ್ಬೆ, ಬಿ ಪಿ ಅಬ್ದುಲ್ ಹಮೀದ್ ಹಾಜಿ, ಮುಸ್ತಫಾ ಸಅದಿ, ಅಬ್ದುಲ್ ಖಾದರ್ ಹಾಜಿ, ಅಶ್ರಫ್ ಕೇಕುಡೆ ಮತ್ತು ಉಸ್ಮಾನ್ ಪಟ್ಟೋರಿ ಶುಭ ಹಾರೈಸಿದರು.
ಶಿಕ್ಷಕರಾದ ರಶೀದ್ ಸಖಾಫಿ, ಹುಸೈನರ್ ಸಖಾಫಿ, ಶ್ರುತಿ ಶೆಟ್, ಇಮ್ತಿಯಾಝ್ ಸಿ ಎಂ ಮತ್ತು ಶಾಲಾ ಮೇಲ್ವಿಚಾರಕ ಇಬ್ರಾಹಿಂ ಕಾರ್ಯಕ್ರಮದ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪೋಷಕರು, ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲ ರಂಝೀ ಮುಹಮ್ಮದ್ ಸ್ವಾಗತಿಸಿದರು ಶಿಕ್ಷಕರಾದ ಮಿದ್ಲಾಜ್ ಜೌಹರಿ ಮತ್ತು ಫೈಝಲ್ ಕಾರ್ಯಕ್ರಮ ನಿರೂಪಿಸಿದರು. ಅರೇಬಿಕ್ ವಿಭಾಗದ ಮುಖ್ಯಸ್ಥ ರಶೀದ್ ಸಖಾಫಿ ವಂದಿಸಿದರು.
