ಜ್ಞಾನ ಸೇತು 2025: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

0

ಪುತ್ತೂರು:ಜ್ಞಾನ ಸೇತು 2025 ಶಾಂತಿಗಾಗಿ ವಿಜ್ಞಾನ ಪರಿಕಲ್ಪನೆಯಡಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿವಿಧ ವಿಜ್ಞಾನ ಸ್ಪರ್ಧೆಗಳನ್ನು ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜ್ ವಾಮಂಜೂರು ಮಂಗಳೂರು ಮತ್ತು ಈ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ನವೆಂಬರ್ 7ರಂದು ಆಯೋಜಿಸಲಾಗಿತ್ತು. ಈ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ₹15000 ನಗದು ಸಹಿತ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಸೃಜನಾತ್ಮಕ ವಿಜ್ಞಾನ ಮಾದರಿ(Innovative Science Model) ತಯಾರಿ ಸ್ಪರ್ಧೆಯಲ್ಲಿ 9ನೇ ತರಗತಿಯ ಕ್ಷಮೆತ್ ಜೈನ್( ಹನೀಶ್ ಕುಮಾರ ಮತ್ತು ಶ್ರುತಿ ಕುಮಾರಿ ದಂಪತಿ ಪುತ್ರ) ಮತ್ತು ಆಶಿಕ್(  ಸತೀಶ್ ಕೆ ಮತ್ತು  ದೀಕ್ಷಾ ಪಿ ಎನ್ ದಂಪತಿ ಪುತ್ರ) ವಿದ್ಯಾರ್ಥಿಗಳ ತಂಡ,Contraption ಸ್ಪರ್ಧೆಯಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿನಿಯರಾದ ಆರಾಧ್ಯ(  ಅಭಿಷೇಕ್ ಎಂ ಸಿ ಮತ್ತು  ಸುರೇಖಾ ದಂಪತಿ ಪುತ್ರಿ) ಅನಘ ( ಶ್ರೀಹರಿ ಪಿ ಮತ್ತು ಅಕ್ಷತಾ ಕುಮಾರಿ ಪಿ ದಂಪತಿ ಪುತ್ರ) ಮತ್ತು ಶರಧಿ ಚಣಿಲ (  ರಘುರಾಮಚಂದ್ರ ಚಣಿಲ ಮತ್ತು ಸಂಧ್ಯಾ ಪಿಎಂ ದಂಪತಿ ಪುತ್ರಿ) ಇವರ ತಂಡ, Load Up ಸ್ಪರ್ಧೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿಗಳಾದ ಶುಭನ್(  ಪದ್ಮನಾಭ ಕೆ ಮತ್ತು  ರೇಖಾ ಪಿ ನಾಯ್ಕ್ ದಂಪತಿ ಪುತ್ರ) ಮತ್ತು ಪ್ರಣವ್ ಪ್ರಭು(ಪದ್ಮನಾಭ ಪ್ರಭು ಮತ್ತು  ವಿದ್ಯಾ ಕುಮಾರಿ ದಂಪತಿ ಪುತ್ರ) ಇವರ ತಂಡ ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖೋಪಾಧ್ಯಾಯರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here