ಪುತ್ತೂರು: ನಿಟ್ಟೆ ವಿಶ್ವವಿದ್ಯಾಲಯದ ವತಿಯಿಂದ ನಡೆದ ರಾಷ್ಟ್ರೀಯ ಹವಾಮಾನ ಬದಲಾವಣೆಗಾಗಿ ಕ್ರಿಯಾ ಯೋಜನಾ ಕಾರ್ಯಕ್ರಮದ ಸಮಾರೋಪ ಸಮಾರಂಭದ ವೇಳೆ ಆಯೋಜಿಸಲಾದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.

8ನೇ ತರಗತಿಯ ಸುದಿಕ್ಷಾ ಎಸ್. ಭಟ್, “ಧೂಪನ ರಿವಿಜಿಟೆಡ್: ಆಯುರ್ವೇದಿಕ್ ಧೂಪನದಿಂದ ವಾಯುವಿನ ಮೂಲಕ ಹರಡುವ ಜೀವಾಣುಗಳ ಸಂಖ್ಯೆಯಲ್ಲಿ ಇಳಿಕೆಯನ್ನು ಪತ್ತೆಹಚ್ಚುವ ವೈಜ್ಞಾನಿಕ ಅಧ್ಯಯನ” (Dhoopana Revisited: A Scientific Study on the Airborne Microbial Reduction Potential of Ayurvedic Dhoopana) ಎಂಬ ವಿಷಯದ ಕುರಿತು ಪ್ರಸ್ತುತ ಪಡಿಸಿ, ಪ್ರಥಮ ಬಹುಮಾನ (ಟ್ರೋಫಿ ಮತ್ತು ರೂ.6000) ಪಡೆದು ಕೊಂಡಿದ್ದಾರೆ.
9ನೇ ತರಗತಿಯ ತುಷಾರ್ ಪಿ.ವಿ., ನಿಕ್ಷೇಪ್ ಮತ್ತು ಚಾರುದತ್ತ ಪಕ್ಕಳ : “ವೇಗಿ ವೋಲ್ಟ್” (Vegi Volt) ಎಂಬ ವಿಷಯದ ಕುರಿತು ಪ್ರಸ್ತುತ ಪಡಿಸಿ, ತೃತೀಯ ಬಹುಮಾನ (ಪ್ರಶಸ್ತಿ ಪತ್ರ ಮತ್ತು ರೂ.3000) ಪಡೆದಿದ್ದಾರೆ.
6ನೇ ತರಗತಿಯ ವಿದ್ಯಾರ್ಥಿಗಳಾದ ಪ್ರಾಂಜಲ್ ರೈ, ರಾಮಧ್ಯಾನ್ ರೈ ಮತ್ತು ಶೌರ್ಯ ಕಶ್ಯಪ್ ಇವರು, “ಸ್ಮಾರ್ಟ್ ಸ್ಟ್ರೀಟ್ ಲೈಟ್” (Smart street light) ಮಾದರಿಯನ್ನು ತಯಾರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ. ಇವರೆಲ್ಲರಿಗೂ ಶಿಕ್ಷಕಿ ರಶ್ಮಿತ ಆರ್ ಮಾರ್ಗದರ್ಶನವನ್ನು ನೀಡಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.