ಸಂಟ್ಯಾರು ಶ್ರೀ ವಿನಾಯಕ ಭಜನಾ ಮಂದಿರದ ಜೀರ್ಣೋದ್ಧಾರದ ಪೂರ್ವಭಾವಿ ಸಭೆ

0

ಪುತ್ತೂರು; ಆರ್ಯಾಪು ಗ್ರಾಮದ ಸಂಟ್ಯಾರು ಶ್ರೀ ವಿನಾಯ ಭಜನಾ ಮಂದಿರದ ಜೀರ್ಣೋದ್ಧಾರದ ಪೂರ್ವಭಾವಿ ಸಭೆಯು ನ.9ರಂದು ಸಂಟ್ಯಾರು ಸರಸ್ವತಿ ಸದನದಲ್ಲಿ ನಡೆಯಿತು.


ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯುವ ಉದ್ಯಮಿಯಾಗಿರುವ ಸಹಜ್ ರೈ ಬಳೆಜ್ಜ ಮಾತನಾಡಿ, ನೂತನ ಭಜನಾ ಮಂದಿರವು 1,193 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಲಿದ್ದು ರೂ.45 ಲಕ್ಷ ವೆಚ್ಚ ತಗಲುಬಹುದು ಎಂದು ಅಂದಾಜಿಸಲಾಗಿದೆ. ಕಾಮಗಾರಿಗಳು ಶೀಘ್ರದಲ್ಲೇ ಪ್ರಾರಂಭಗೊಂಡು ಪೂರ್ಣಗೊಳಿಸಿ ಬ್ರಹ್ಮಕಲಶೋತ್ಸವ ನಡೆಯಬೇಕಿದೆ. ಇದಕ್ಕಾಗಿ ಎಲ್ಲರಿಗೂ ನೀಡಿದ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಜಾತಿ, ರಾಜಕೀಯವಿಲ್ಲದೇ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಎಂದು ತಿಳಿಸಿದರು.


ಜೀರ್ಣೋದ್ಧಾರ ಸಮಿತಿ ಸಂಚಾಲಕರಾಗಿರುವ ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ, ಸಮಿತಿಯಲ್ಲಿ ಹುದ್ದೆಗಳು ಹೆಸರಿಗೆ ಮಾತ್ರ. ಎಲ್ಲಾ ಕಾರ್ಯಗಳು ದೇವರ ಸಂಕಲ್ಪದಂತೆ ನಡೆಯಲಿದೆ. ನಾವೆಲ್ಲರೂ ಒಟ್ಟು ಸೇರಿ ಕೆಲಸ ಮಾಡಬೇಕು. ಜೀರ್ಣೋದ್ಧಾರದ ಕಾರ್ಯ ದೊರೆತಿರುವುದು ನಮ್ಮ ಯೋಗ. ದೊರೆತ ಅವಕಾಶವನ್ನು ಬಳಸಿಕೊಳ್ಳುವ. ಜೀರ್ಣೋದ್ಧಾರ ಕಾರ್ಯಗಳ ಬಗ್ಗೆ ವಿಜ್ಞಾಪಣಾ ಪತ್ರ ಮಾಡಿ ಎಲ್ಲಾ ಮನೆಗಳಿಗೂ ತಲುಪಿಸಬೇಕು. ಸರಕಾರದಿಂದ ಅನುದಾನ ಪಡೆಯಲು ಎಲ್ಲಾ ಕಡತಗಳನ್ನು ಸಿದ್ದಮಾಡುವಂತೆ ತಿಳಿಸಿದರು.


ಆಡಳಿತ ಮಂಡಳಿ ಅಧ್ಯಕ್ಷ ಶರತ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಸುಮಾರು 35 ವರ್ಷಗಳ ಇತಿಹಾಸವಿರುವ ಭಜನಾ ಮಂದಿರವನ್ನು ಜೀರ್ಣೋದ್ಧಾರಗೊಳಿಸಿ ನೂತನ ಮಂದಿರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರಶ್ನಾಚಿಂತನೆ ನಡೆಸಲಾಗಿದೆ. ಇದರ ಪರಿಹಾರ ಕಾರ್ಯಗಳು ನಡೆದಿದೆ. ಜಾಗದ ದಾಖಲೆ ಸಮಸ್ಯೆಯಿಂದಾಗಿ ಸ್ವಲ್ಪ ವಿಳಂವಾಗಿತ್ತು. ಈಗಿನ ಮಂದಿರ ಬಲಭಾಗದಲ್ಲಿ ನೂತನ ಮಂದಿರವು 1,2೦೦ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಲಿದೆ. ಜೊತೆಗೆ ಸ್ನಾನಗೃಹ, ಪಾಕಶಾಲೆ ಹಾಗೂ ಶೌಚಾಲಯ ಸೇರಿದಂತೆ ಸುಮಾರು ರೂ.45ಲಕ್ಷ ಕಾಮಗಾರಿ ನಡೆಯಲಿದ್ದು ಒಂದು ವರ್ಷದ ಅವಧಿಯಲ್ಲಿ ಮಂದಿರ ನಿರ್ಮಾಣಗೊಳ್ಳಲಿದ್ದು ಭಕ್ತಾದಿಗಳು ಎಲ್ಲಾ ರೀತಿಯಲ್ಲಿ ಸಹಕರಿಸುವಂತೆ ವಿನಂತಿಸಿದರು.


ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ನಾಯಕ್, ಆಡಳಿತ ಮಂಡಳಿ ಕಾರ್ಯದರ್ಶಿ ರಾಕೇಶ್ ಗೌಡ ಪರನೀರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಡಳಿತ ಮಂಡಳಿ ಅಧ್ಯಕ್ಷ ಶರತ್ ಆಳ್ವ ಕೂರೇಲು ಸ್ವಾಗತಿಸಿದರು. ಸುಬ್ಬು ಸಂಟ್ಯಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


ರೂ.20ಲಕ್ಷ ವಾಗ್ದಾನ

ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯಗಳಿಗೆ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಭಕ್ತಾದಿಗಳು ದೇಣಿಗೆ ನೀಡುವ ವಾಗ್ದಾನ ಮಾಡಿದ್ದು ಸಭೆಯಲ್ಲಿ ರೂ.೨೦ಲಕ್ಷ ವಾಗ್ದಾನ ಮಾಡಿದರು.

LEAVE A REPLY

Please enter your comment!
Please enter your name here