





ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಒಟ್ಟು ಎಂಟು ಲಕ್ಷ ಹಣ ಬಿಡುಗಡೆಯಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.


ಕಿಡ್ನಿ ಹಾಗೂ ಕರುಳು ರೋಗದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪುಣಚಾ ಗ್ರಾಮದ ಬೊಳಂತಿಮೊಗರು ನಿವಾಸಿ ರಾಮಣ್ಣ ಪೂಜಾರಿಯವರಿಗೆ 5 ಲಕ್ಷ ರೂ, ಮೆದುಳು ರೋಗದಿಂದ ಬಳಲುತ್ತಿರುವ ಆರ್ಯಾಪು ಗ್ರಾಮದ ಕುದ್ಕಾಡಿ ಪಂಜಳ ನಿವಾಸಿ ಬಾಬು ಪೂಜಾರಿಗೆ ಒಂದೂವರೆ ಲಕ್ಷ ಹಾಗೂ ಕರುಳು ರೋಗದಿಂದ ಬಳಲುತ್ತಿರುವ ಪಡುವನ್ನೂರು ಸೋಣಂಗೇರಿ ನಿವಾಸಿ ತ್ಯಾಗರಾಜ ಎಂಬವರಿಗೆ ಒಂದೂವರೆ ಲಕ್ಷ ಹಣ ಮಂಜೂರಾಗಿದೆ. ಫಲಾನುಭವಿಗಳ ಖಾತೆಗೆ ನೇರವಾಗಿ ಈ ಹಣ ಜಮಾವಣೆಯಾಗುತ್ತದೆ ಎಂದು ಶಾಸಕರು ತಿಳಿಸಿದ್ದಾರೆ.





ಅರ್ಜಿ ಸಲ್ಲಿಸುವ ವಿಧಾನ:
ಅನಾರೋಗ್ಯ ಪೀಡಿತರು ಚಿಕಿತ್ಸೆ ಪಡೆದುಕೊಂಡಿದ್ದಲ್ಲಿ , ಆಸ್ಪತ್ರೆಯಲ್ಲಿ ದಾಖಲಾಗಿದ್ದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಬಿಪಿಎಲ್ ಕಾರ್ಡುದಾರರಿಗೆ ಮಾತ್ರ ಅರ್ಜಿ ಹಾಕಲು ಅವಕಾಶವಿರುತ್ತದೆ. ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಯಾವುದೇ ಇನ್ಸೂರೆನ್ಸ್ ಮೂಲಕ ಕ್ಲೈಮ್ ಆಗಿದ್ದಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಶಾಸಕರ ಕಚೇರಿ ಸಿಬಂದಿ ವಿನೋದ್ ಕುಮಾರ್ ಅವರನ್ನು ಸಂಪರ್ಕಿಸಬಹುದು: ಮೊಬೈಲ್: 9900477528 ಗೆ ಕರೆ ಮಾಡಿ ವಿಚಾರಸಬಹುದು ಮತ್ತು ಮೆಡಿಕಲ್ ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಈ ನಂಬರ್ಗೆ ಸಂಪರ್ಕಮಾಡಬಹುದಾಗಿದೆ.








