ಪುತ್ತೂರು: 2025 ನೇ ಸಾಲಿನ ದ. ಕ ಜಿಲ್ಲಾ ಆಡಳಿತ, ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಪ್ರಿಯದರ್ಶಿನಿ ವಿದ್ಯಾ ಸಂಸ್ಥೆ ಬೆಟ್ಟಂಪಾಡಿಯಲ್ಲಿ ಜರುಗಿದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಚಕ್ರ ಎಸೆತ ಸ್ಪರ್ಧೆಯಲ್ಲಿ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಆರ್ಯನ್ ಕುಮಾರ್ (8ನೇ) (ಬಿಹಾರ ಮೂಲದ ರಾಮ್ ಸಾಗರ್ ಷಾ ಮತ್ತು ಅನಿತಾ ದೇವಿ ದಂಪತಿಯ ಪುತ್ರ) ದ್ವಿತೀಯ ಸ್ಥಾನ ಪಡೆದು ಮುಂದೆ ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಇವರಿಗೆ ಶಾಲಾ ಅಧ್ಯಕ್ಷರಾದ ಶಿಬರ ಜಯರಾಮ ಕೆದಿಲಾಯ ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕ ಪ್ರಸನ್ನ ಕೆ ರವರು ಅಭಿನಂದನೆ ಸಲ್ಲಿಸಿದ್ದಾರೆ.
ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್ ಹಾಗೂ ಜಯಚಂದ್ರ ರವರು ತರಬೇತು ನೀಡಿರುತ್ತಾರೆ.
