ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಗಳ ಮಾದರಿ ಯೋಜನೆ : ಭವಿಷ್ಯದ ಕನಸಿಗೆ ಹಸಿರಿನ ಹೆಜ್ಜೆ – ಗಂಗಾಪೂಜೆ, ತೀರ್ಥಧಾರಾ ಕಾರ್ಯಕ್ರಮ

0

ಪುತ್ತೂರು: ನೀರಿಲ್ಲದೆ ಜೀವನವಿಲ್ಲ. ನೀರಿದ್ದರೆ ಭವಿಷ್ಯವೂ ಇರುತ್ತದೆ. ನೀರು ಮನುಷ್ಯರಿಗೆ ಮಾತ್ರವಲ್ಲದೆ ಇಡೀ ಪರಿಸರ ವ್ಯವಸ್ಥೆಗೆ ಮುಖ್ಯವಾಗಿದೆ. ಸಾಕಷ್ಟು ನೀರಿಲ್ಲದೆ, ಮಾನವರ ಹಾಗೂ ಪ್ರಾಣಿಗಳ ಅಸ್ತಿತ್ವವು ಅಸಾಧ್ಯವಾಗಿದೆ. ಜಲ ಸಂರಕ್ಷಣೆಯ ಮಹತ್ವ ಜೀವ ಉಳಿಸಲು, ಆರ್ಥಿಕತೆಯನ್ನು ಬಲಪಡಿಸಲು ಮತ್ತು ಪರಿಸರವನ್ನು ರಕ್ಷಿಸಲು ಅತ್ಯಗತ್ಯವಾಗಿದೆ. ಶುದ್ಧ ನೀರು ಸೀಮಿತ ಸಂಪನ್ಮೂಲವಾಗಿರುವುದರಿಂದ, ಅನಗತ್ಯ ಬಳಕೆಯನ್ನು ತಡೆಯುವುದು, ಮಿತವ್ಯಯದಿಂದ ಬಳಸುವುದು ಮತ್ತು ನೀರನ್ನು ಮರುಬಳಕೆ ಮಾಡುವುದು ಮುಖ್ಯವಾಗಿದೆ. ಇದರಿಂದ ಮುಂದಿನ ಪೀಳಿಗೆಗೆ ನೀರನ್ನು ಉಳಿಸಬಹುದು ಮತ್ತು ನೀರಿನ ಕೊರತೆ, ಮಾಲಿನ್ಯ ಮತ್ತು ಪರಿಸರ ವ್ಯವಸ್ಥೆಗಳ ನಾಶವನ್ನು ತಡೆಯಬಹುದು ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. ‌

ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿ ನಡೆದ ಭವಿಷ್ಯದ ಕನಸಿಗೆ ಹಸಿರಿನ ಹೆಜ್ಜೆ ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ಗಂಗಾಪೂಜೆ ಮತ್ತು ತೀರ್ಥಧಾರಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾನವ ಜೀವನದ ಅಸ್ತಿತ್ವಕ್ಕೆ ಜಲ ಸಂರಕ್ಷಣೆಯ ಅರಿವು ಬಹಳ ಮುಖ್ಯ. ಜನರಲ್ಲಿ ಜಲ ಸಂರಕ್ಷಣೆಗಾಗಿ ವಿಶೇಷ ಜಾಗೃತಿ ಮೂಡಿಸುವಲ್ಲಿ ಇಂತಹ ಯೋಜನೆಗಳ ಪಾತ್ರ ಮಹತ್ವದ್ದಾಗಿರುತ್ತದೆ. ನೀರು ಕೇವಲ ಜೀವದ್ರವ ಮಾತ್ರವಲ್ಲ. ಅದು ಸಕಲ ಜೀವರಾಶಿಯ ಉಸಿರಿನ ತ್ರಾಣ. ಮಾನವನ ಎಲ್ಲಾ ನಾಗರಿಕತೆಗಳು ಬೆಳೆದು ಬಂದುದು ಈ ಜಲ ಮೂಲಗಳ ಬಳಿ ಎಂಬುದನ್ನು ಇತಿಹಾಸ ಸಾರಿ ಹೇಳುತ್ತಿದೆ. ನಮ್ಮ ಭವಿಷ್ಯದ ಪೀಳಿಗೆಗೆ, ನೀರಿನ ಭವಿಷ್ಯವನ್ನು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಗಳು ಜಲ ಸಂರಕ್ಷಣೆಗೆ ತಮ್ಮದೇ ವಿಶಿಷ್ಟ ಕಾರ್ಯಯೋಜನೆಗಳನ್ನು ಹಾಕಿಕೊಂಡು ಕ್ರಿಯಾಶೀಲವಾಗಿದೆ ಎಂದು ಹೇಳಿದರು.


50ಕ್ಕೂ ಹೆಚ್ಚಿನ ಪುಣ್ಯಕ್ಷೇತ್ರಗಳಿಂದ ಜಲ:
ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿದ್ದ ಬಾವಿಯನ್ನು ಶುಚಿಗೊಳಿಸಿ ಸಮೃದ್ಧಿಗೊಳಿಸಿ, ಕುಡಿಯುವ ನೀರಿನ ವ್ಯವಸ್ಥೆಗಾಗಿ ಬಳಸಿಕೊಳ್ಳಲು ಜೀವತುಂಬುವಂತೆ ಮಾಡಿದ ಈ ಯೋಜನೆ ಮಾದರಿಯಾಗಿದೆ. ಮಳೆಯ ನೀರು ಹರಿದು ಹೋಗದಂತೆ ತಡೆ ಹಿಡಿದು ಭೂಮಿಗೆ ಇಂಗುವಂತೆ ನಿಯಂತ್ರಿಸುವ ಗಿಡಗಳನ್ನು ಈ ಬಾವಿಯ ಸುತ್ತ ಬೆಳೆಸಿ ಪೋಷಿಸುವ ಮೂಲಕ ಜಲ ಸಂರಕ್ಷಣೆಯ ಪ್ರಯತ್ನವನ್ನು ಕಾರ್ಯಗತಗೊಳಿಸಲಾಗಿದೆ. ಇದಕ್ಕೆ ಪೂರಕವಾಗಿ ಪುತ್ತೂರಿನ ಆಸುಪಾಸಿನ ಸುಮಾರು ೫೦ಕ್ಕೂ ಹೆಚ್ಚು ಪುಣ್ಯಕ್ಷೇತ್ರಗಳಾದ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಶ್ರೀವೆಂಕಟರಮಣ ದೇವಸ್ಥಾನ, ಶ್ರೀಮಹಮಾಯಿ ದೇವಸ್ಥಾನ, ಕೆಮ್ಮಿಂಜೆ ಶ್ರೀಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ, ಕಲ್ಲಾರೆ ಶ್ರೀರಾಘವೇಂದ್ರ ಮಠ, ಶ್ರೀಭವಾನಿಶಂಕರ ದೇವಸ್ಥಾನ, ಕೆಮ್ಮಾಯಿ ಶ್ರೀವಿಷ್ಣುಮೂರ್ತಿ ದೇವಸ್ಥಾನ, ಬನ್ನೂರು ಬಲಮುರಿ ಗಣಪತಿ ದೇವಸ್ಥಾನ, ಪಡ್ನೂರು ಶ್ರೀಜನಾರ್ಧನ ದೇವಸ್ಥಾನ, ಕೊಡಿಪ್ಪಾಡಿ ಶ್ರೀಜನಾರ್ಧನ ದೇವಸ್ಥಾನ, ಬೆಳ್ಳಿಪಾಡಿ ಶ್ರೀಸುಬ್ರಹ್ಮಣ್ಯ ದೇವಸ್ಥಾನ, ಶಾಂತಿನಗರ ವಿಷ್ಣುಮೂರ್ತಿ ದೇವಸ್ಥಾನ, ಉಪ್ಪಿನಂಗಡಿ ಶ್ರೀಸಹಸ್ರಲಿಂಗೇಶ್ವರ ದೇವಸ್ಥಾನ, ಕಡೆಶಿವಾಲಯ, ದೇಂತಡ್ಕ ದೇವಸ್ಥಾನ, ಕಬಕ ಶ್ರೀಮಹಾದೇವಿ ದೇವಸ್ಥಾನ, ಕೋಲ್ಪೆ ಶ್ರೀಷಣ್ಮುಖ ದೇವಸ್ಥಾನ, ಕುಂಡಡ್ಕ ವಿಷ್ಣುಮೂರ್ತಿ ದೇವಸ್ಥಾನ, ವಿಟ್ಲ ಶ್ರೀಪಂಚಲಿಂಗೇಶ್ವರ ದೇವಸ್ಥಾನ, ಕೇಪು ಶ್ರೀಶಿವ ದೇವಸ್ಥಾನ, ಪುಣಚ ಶ್ರೀಮಹಿಷಮರ್ದಿನಿ ದೇವಸ್ಥಾನ, ಬಲ್ನಾಡು ಬಟ್ಟಿವಿನಾಯಕ ದೇವಸ್ಥಾನ, ಕುಂಜೂರುಪಂಜ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ, ಕಾರ್ಪಾಡಿ ಶ್ರೀಸುಬ್ರಮಣ್ಯ ದೇವಸ್ಥಾನ, ಸಂಪ್ಯ ಶ್ರೀವಿಷ್ಣುಮೂರ್ತಿ ದೇವಸ್ಥಾನ, ಸಂಪ್ಯ ಶ್ರೀಅನ್ನಪೂರ್ಣೇಶ್ವರಿ ದೇವಸ್ಥಾನ, ಇರ್ದೆ ಶ್ರೀವಿಷ್ಣುಮೂರ್ತಿ ದೇವಸ್ಥಾನ, ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಇರ್ದೆ ಬೆಂದೃತೀರ್ಥ, ಪಾಣಾಜೆ ಶ್ರೀರಣಮಂಗಲ ದೇವಸ್ಥಾನ, ಕಾವು ಶ್ರೀಪಂಚಲಿಂಗೇಶ್ವರ ದೇವಸ್ಥಾನ, ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವಸ್ಥಾನ, ಹನುಮಗಿರಿ ಕ್ಷೇತ್ರ, ಆನಡ್ಕ ಶ್ರೀಜಲದುರ್ಗೆ ದೇವಸ್ಥಾನ, ವೀರಮಂಗಲ ಶ್ರೀವಿಷ್ಣುಮೂರ್ತಿ ದೇವಸ್ಥಾನ, ಸರ್ವೆ ಶ್ರೀಸುಬ್ರಹ್ಮಣ್ಯ ದೇವಸ್ಥಾನ, ಇಡಬೆಟ್ಟು ಶ್ರೀಸುಬ್ರಹ್ಮಣ್ಯ ದೇವಸ್ಥಾನ, ಕುರಿಯ ಶ್ರೀವಿಷ್ಣುಮೂರ್ತಿ ದೇವಸ್ಥಾನ, ನಳಿಲು ಶ್ರೀಸುಬ್ರಹ್ಮಣ್ಯ ದೇವಸ್ಥಾನ, ಬಾಯಂಬಾಡಿ ಶ್ರೀಷಣ್ಮುಖದೇವ ದೇವಸ್ಥಾನ, ಲಕ್ಷ್ಮೀದೇವಿ ಬೆಟ್ಟ, ಬೊಳುವಾರು ಮಲರಾಯ ದೇವಸ್ಥಾನ, ಮಠಂತಮಬೆಟ್ಟು ಮಹಿಷಮರ್ದಿನಿ ದೇವಸ್ಥಾನ, ಮಠದಬೆಟ್ಟು ರಾಜರಾಜೇಶ್ವರಿ ದೇವಸ್ಥಾನ, ಶಾಂತಿಗೋಡು ಶ್ರೀವಿಷ್ಣುಮೂರ್ತಿ ದೇವಸ್ಥಾನ, ವೀರಮಂಗಲ ಶ್ರೀವಿಷ್ಣುಮೂರ್ತಿ ದೇವಸ್ಥಾನ, ಆನಡ್ಕ ಶ್ರೀವಿಷ್ಣುಮೂರ್ತಿ ದೇವಸ್ಥಾನ, ಶ್ರೀಮೃತ್ಯುಂಜೇಶ್ವರ ದೇವಸ್ಥಾನ ನರಿಮೊಗರು, ಉಮಾಮಹೇಶ್ವರಿ ದೇವಸ್ಥಾನ ಮಜಲುಮಾರು, ಶಾಂತಿಗೋಡು ಶಾಸ್ತಾರ ದೇವಸ್ಥಾನ, ಕೆಯ್ಯೂರು ದುರ್ಗಾಪರಮೇಶ್ವರಿ ದೇವಸ್ಥಾನ, ಚಾಮುಂಡೇಶ್ವರಿದೇವಿ ದೇವಸ್ಥಾನ ಮೊಟ್ಟೆತಡ್ಕ, ರಕ್ತೇಶ್ವರಿ ಗುಡಿ ಬಪ್ಪಳಿಗೆ, ಶ್ರೀಆದಿಶಕ್ತಿ ಚಾಮುಂಡೇಶ್ವರಿ ಕ್ಷೇತ್ರ ಮುಂಡ್ರಬೈಲು, ಬನ್ನೂರು ಶ್ರೀಸದಾಶಿವ ದೇವಸ್ಥಾನ, ಪೋಳ್ಯ ಶ್ರೀವೆಂಕಟರಮಣ ದೇವಸ್ಥಾನಗಳಿಂದ ಪವಿತ್ರ ಗಂಗಾಜಲವನ್ನು ತಂದು ವಿದ್ಯಾಸಂಸ್ಥೆಗಳ ಆವರಣದಲ್ಲಿದ್ದ ಬಾವಿಗೆ ಸಮರ್ಪಿಸಿ ಪೂಜೆ ನೆರವೇರಿಸಲಾಯಿತು.


ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಕಾರ‍್ಯದರ್ಶಿ ಡಾ.ಕೆ.ಎಮ್. ಕೃಷ್ಣ ಭಟ್, ಜೊತೆಕಾರ‍್ಯದರ್ಶಿ ರೂಪಲೇಖ, ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಪದಾಧಿಕಾರಿಗಳು, ಮುಖ್ಯಗುರುಗಳು, ಶಿಕ್ಷಕರು, ವಿದ್ಯಾರ್ಥಿಗಳ ಮತ್ತು ಪೋಷಕರು ಪುಣ್ಯಕ್ಷೇತ್ರಗಳ ಪುಣ್ಯಜಲವನ್ನು ಬಾವಿಗೆ ಸಮರ್ಪಿಸಿದರು. ಬಳಿಕ ಪವಿತ್ರ ಗಂಗೆಗೆ ಆರತಿ ಬೆಳಗಿ ಪೂಜಿಸಲಾಯಿತು. ಬಾವಿಯ ನೀರಿನ ಶುದ್ಧತೆಗಾಗಿ ನೆಲ್ಲಿ ಮರದ ಚಕ್ಕೆಯನ್ನು (ಕೆತ್ತೆಯನ್ನು) ಅರ್ಪಿಸಲಾಯಿತು. ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿಯರಿಂದ ವೇದ ಪಾರಾಯಣ ನಡೆಯಿತು.


ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ನರೇಂದ್ರ ಪ.ಪೂ. ಕಾಲೇಜು, ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ ಇದರ ಆಡಳಿತ ಮಂಡಳಿಯ ಪದಾಽಕಾರಿಗಳು, ಮುಖ್ಯಗುರುಗಳು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು. ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ ಪ್ರಾಂಶುಪಾಲೆ ಡಾ.ಶೋಭೀತಾ ಸತೀಶ್ ಸ್ವಾಗತಿಸಿ, ನರೇಂದ್ರ ಪ.ಪೂ. ಕಾಲೇಜಿನ ಉಪನ್ಯಾಸಕಿ ಮಧುರಾ ವಂದಿಸಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕಿ ಪ್ರತೀಕ್ಷ ಕಾರ‍್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here