ಬೆಟ್ಟಂಪಾಡಿ: ಕರ್ನಾಟಕ ರಾಜ್ಯೋತ್ಸವ ಆಚರಣೆಯ ಅಂಗವಾಗಿ ಬೆಂಗಳೂರಿನ ಯು.ಆರ್. ರಾವ್ ಉಪಗ್ರಹ ಕೇಂದ್ರವು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕನ್ನಡದಲ್ಲಿ ವೈಜ್ಞಾನಿಕ ವಿಷಯ ಪ್ರಸ್ತುತಿ ಸ್ಪರ್ಧೆಯನ್ನು ಏರ್ಪಡಿಸಿದ್ದು, ಈ ಸ್ಪರ್ಧೆಯಲ್ಲಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ವಸು ಶರ್ಮ (ದರ್ಭೆ ನಾರಾಯಣ ಭಟ್ ಡಿ. ಮತ್ತು ವೈಜಯಂತಿ ಮಾಲಾ ದಂಪತಿ ಪುತ್ರ) ಇವರು ಭಾಗವಹಿಸಲಿದ್ದಾರೆ. ಪ್ರೇಕ್ಷಕರಾಗಿ ಇತರ ನಾಲ್ವರು ಮಕ್ಕಳು ಭಾಗವಹಿಸಲಿದ್ದಾರೆ. ಸಾನ್ವಿ ಎಸ್ ಆಳ್ವ (8ನೇ) (ಸುರೇಶ್ ಮತ್ತು ಆಶಾಲತಾ ದಂಪತಿ ಪುತ್ರಿ), ಧನ್ವಿ ವಿ ಎಸ್ -9ನೇ (ವೆಂಕಟ ವಿದ್ಯಾಸಾಗರ ಎಸ್ ಎನ್ – ದಿವ್ಯ ಬಿ ದಂಪತಿ ಪುತ್ರಿ) ಹಾಗೂ ಪವನ್ ಸಿ ಎಚ್(9 ನೇ) ಪ್ರಶಾಂತ್ ಕುಮಾರ್ ಸಿ ಎಚ್ ಮತ್ತು ಪೂಜಾ ಸಿ ಎಚ್ ದಂಪತಿ ಪುತ್ರ) ಇವರು ಭಾಗವಹಿಸುತ್ತಿದ್ದು, ನ.13ರಂದು ಉಪಗ್ರಹ ಕೇಂದ್ರ ಬೆಂಗಳೂರುಗೆ ತೆರಳಲಿದ್ದಾರೆ ಎಂದು ಶಾಲಾ ಮುಖ್ಯಗುರು ರಾಜೇಶ್ ಎನ್. ತಿಳಿಸಿರುತ್ತಾರೆ.
Home ಇತ್ತೀಚಿನ ಸುದ್ದಿಗಳು ಇಂದು ಬೆಂಗಳೂರು ಉಪಗ್ರಹ ಕೇಂದ್ರದಲ್ಲಿ ಸ್ಪರ್ಧೆಗೆ ಪ್ರಿಯದರ್ಶಿನಿಯ ನಾಲ್ವರು ವಿದ್ಯಾರ್ಥಿಗಳು ಭಾಗಿ