ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಆಡಳಿತ ಸಮಿತಿ ಪುನರ್ ರಚನೆ

0

ಅಧ್ಯಕ್ಷ: ರವಿಚಂದ್ರ ಹೊಸವಕ್ಲು, ಪ್ರಧಾನ ಕಾರ್ಯದರ್ಶಿ: ರಾಕೇಶ್ ಎಸ್.,ಉಪಾಧ್ಯಕ್ಷ: ರಘುನಾಥ ಕೆ.,ಕೋಶಾಧಿಕಾರಿ: ಸುಧೀರ್‌ಕುಮಾರ್ ,ಜೊತೆ ಕಾರ್ಯದರ್ಶಿ: ರಮೇಶ ಬಾಣಜಾಲು

ನೆಲ್ಯಾಡಿ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ-ಕೌಕ್ರಾಡಿ ಇದರ ಆಡಳಿತ ಸಮಿತಿ ಪುನರ್‌ರಚನೆ ಮಾಡಲಾಗಿದ್ದು ಅಧ್ಯಕ್ಷರಾಗಿ ರವಿಚಂದ್ರ ಹೊಸವಕ್ಲು, ಪ್ರಧಾನ ಕಾರ್ಯದರ್ಶಿಯಾಗಿ ರಾಕೇಶ್ ಎಸ್.ಗೌಡ, ಉಪಾಧ್ಯಕ್ಷರಾಗಿ ರಘುನಾಥ ಕೆ., ಕೋಶಾಧಿಕಾರಿಯಾಗಿ ಸುಧೀರ್‌ಕುಮಾರ್, ಜೊತೆ ಕಾರ್ಯದರ್ಶಿಯಾಗಿ ರಮೇಶ ಬಾಣಜಾಲು ಆಯ್ಕೆಯಾಗಿದ್ದಾರೆ.


ನ.11ರಂದು ದೇವಾಲಯದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಡಾ.ಸದಾನಂದ ಕುಂದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಡಳಿತ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸದಸ್ಯರಾಗಿ ವಿನೋದ್ ಕುಮಾರ್, ದಯಾನಂದ ಆದರ್ಶ, ಉಮೇಶ ಪೂಜಾರಿ, ಪ್ರಹ್ಲಾದ್ ಶೆಟ್ಟಿ, ರವಿಪ್ರಸಾದ್ ಶೆಟ್ಟಿ ರಾಮನಗರ, ಅಣ್ಣಿ ಎಳ್ತಿಮಾರ್, ಮೋಹನ್ ಕುಮಾರ್ ಕಟ್ಟೆಮಜಲು, ಶೇಖರ ಭಂಡಾರಿ, ಕೃಷ್ಣಪ್ಪ, ನಾರಾಯಣ ಶೆಟ್ಟಿ, ರಕ್ಷಿತ್, ಚಂದ್ರಶೇಖರ ಬಾಣಜಾಲು, ಗೌರವ ಸಲಹೆಗಾರರಾಗಿ ಶಿವದಾಸನ್ ಹಾಗೂ ಡಾ.ಸದಾನಂದ ಕುಂದರ್ ಅವರನ್ನು ಆಯ್ಕೆ ಮಾಡಲಾಯಿತು.


ಮಹಾಸಭೆಯ ವೇದಿಕೆಯಲ್ಲಿ ರವಿಚಂದ್ರ ಹೂಸವಕ್ಲು, ಮೋಹನ್ ಕಟ್ಟೆಮಜಲು, ರಾಕೇಶ್ ಎಸ್. ಗೌಡ, ರವಿಪ್ರಸಾದ್ ಶೆಟ್ಟಿ ರಾಮನಗರ, ರಘುನಾಥ ಕೆ., ರಮೇಶ್ ಬಾಣಜಾಲು, ಮಂಜುನಾಥ ಗೌಡ, ಉಮೇಶ್ ಪೂಜಾರಿ ಪೊಸೋಳಿಗೆ, ರಕ್ಷಿತ್ ಮಡಿವಾಳ, ಚಂದ್ರಶೇಖರ ಬಾಣಜಾಲು ಉಪಸ್ಥಿತರಿದ್ದರು. ಡಾ.ಸದಾನಂದ ಕುಂದರ್ ಸ್ವಾಗತಿಸಿದರು. ಕಾರ್ಯದರ್ಶಿ ಸುಧೀರ್ ಕುಮಾರ್ ವರದಿ ವಾಚಿಸಿದರು. ಕೋಶಾಧಿಕಾರಿ ವಿನೋದ್ ಕುಮಾರ್ ಲೆಕ್ಕಪತ್ರ ಮಂಡಿಸಿದರು. ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಗಣೇಶ್ ರಶ್ಮಿ, ನಿರೂಪಕ ಸುರೇಶ ಪಡಿಪಂಡ, ಸುಪ್ರೀತಾ ರವಿಚಂದ್ರ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here