ಪುತ್ತೂರು: ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿಯ ಯು.ಎ.ಇ.ರಾಷ್ಟ್ರೀಯ ಸಮಿತಿಯ ವಾರ್ಷಿಕ ಮಹಾ ಸಭೆ ದುಬೈ ಸ್ಪೋರ್ಟ್ಸ್ ಸ್ಟಾರ್ ರೆಸ್ಟೋರೆಂಟ್ನಲ್ಲಿ ನಡೆಯಿತು.
ಸಭೆಯಲ್ಲಿ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವಾಧ್ಯಕ್ಷರಾಗಿ ಸಯ್ಯಿದ್ ಅಸ್ಕರ್ ಅಲಿ ತಂಙಳ್ ಕೋಲ್ಪೆ, ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಬೈತಡ್ಕ ಆಯ್ಕೆಯಾದರು. ಕಾರ್ಯಾಧ್ಯಕ್ಷರಾಗಿ ಆರಿಫ್ ಕೂರ್ನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಆಸೀಫ್ ಮರೀಲ್, ಕೋಶಾಧಿಕಾರಿಯಾಗಿ ಬಶೀರ್ ಕೆಮ್ಮಿಂಜೆ, ಕಾರ್ಯದರ್ಶಿಯಾಗಿ ಮನ್ಸೂರ್ ಗಡಿಪ್ಪಿಲ ಆಯ್ಕೆಯಾದರು.
