ನೆಲ್ಯಾಡಿ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೇಂದ್ರ ಕಛೇರಿ ನೆಲ್ಯಾಡಿ, ಗೋಳಿತ್ತೊಟ್ಟು, ಶಿರಾಡಿ ಶಾಖೆಗಳಲ್ಲಿ ಸಹಕಾರಿ ಸಪ್ತಾಹದ ಧ್ವಜಾರೋಹಣ ಕಾರ್ಯಕ್ರಮ ನ.14ರಂದು ನಡೆಯಿತು.

ಕೇಂದ್ರ ಕಛೇರಿ ನೆಲ್ಯಾಡಿಯಲ್ಲಿ ಸಹಕಾರಿ ಸಪ್ತಾಹದ ಧ್ವಜಾರೋಹಣವನ್ನು ಸಂಘದ ನಿರ್ದೇಶಕರಾದ ಜಯಾನಂದ ಬಂಟ್ರಿಯಾಲ್, ಸರ್ವೋತ್ತಮ ಗೌಡ, ಉಷಾ ಅಂಚನ್, ಭಾಸ್ಕರ್ ರೈ ನೆರವೇರಿಸಿದರು. ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ದಯಾಕರ ರೈ ಕೆ ಯಂ ಸ್ವಾಗತಿಸಿದರು. ಮೆನೇಜರ್ ಮಹೇಶ್ ಎಂ.ಟಿ.ವಂದಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ನೆಲ್ಯಾಡಿ ಶಾಖೆ ಸಿಬ್ಬಂದಿಗಳು ಹಾಗೂ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಂಘದ ಗೋಳಿತ್ತೊಟ್ಟು ಶಾಖೆಯಲ್ಲಿ ಸಂಘದ ನಿರ್ದೇಶಕರಾದ ಬಾಬು ನಾಯ್ಕ ಅವರು ಸಹಕಾರಿ ಸಪ್ತಾಹದ ಧ್ವಜಾರೋಹಣ ನೆರವೇರಿಸಿದರು. ಮೆನೇಜರ್ ರತ್ನಾಕರ ಬಂಟ್ರಿಯಾಲ್ ಸ್ವಾಗತಿಸಿ, ಸಿಬ್ಬಂದಿ ಅನೀಶ್ ವಂದಿಸಿದರು ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಪ್ರಸಾದ್ ಕೆ.ಪಿ., ನೇಮಣ್ಣ ಪೂಜಾರಿ ಹಾಗೂ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸ೦ಘದ ಶಿರಾಡಿ ಶಾಖೆಯಲ್ಲಿ ಸಹಕಾರಿ ಸಪ್ತಾಹದ ಧ್ವಜಾರೋಹಣವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ದಿನಕರ್ ಯಸ್.ಎ., ಸುರೇಂದ್ರ ಕೆ.ಎ. ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮೆನೇಜರ್ ರಮೇಶ್ ನಾಯ್ಕ್ ಸ್ವಾಗತಿಸಿ, ಸಿಬ್ಬಂದಿ ಅಶೋಕ್ ವಂದಿಸಿದರು.